ಟಂಟಂ-ಟಿಪ್ಪರ್ ಢಿಕ್ಕಿ ಓರ್ವ ಸಾವು ಮೂವರಿಗೆ ಗಂಭೀರ ಗಾಯ

ಕೊಪ್ಪಳ : ಟಂಟಂ-ಟಿಪ್ಪರ್ ಢಿಕ್ಕಿ ಓರ್ವ ಸಾವು ಮೂವರು ಗಂಭೀರ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳದ ಇಂದಿರಾ ಕ್ಯಾಂಟೀನ್ ಎದುರು ಅಪಘಾತ ನಡೆದಿದ್ದು ಅಪಘಾತದ ಬಳಿಕಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಹಿರೆಸಿಂದೋಗಿಯ ಪಂಪಣ್ಣ (60) ಮೃತ ವ್ಯಕ್ತಿ. ಸದ್ದಾಂ, ಹುಲಗಪ್ಪ ಎನ್ನುವವರಿಗೆ ಗಂಭೀರ ಗಾಯ. ಢಿಕ್ಕಿ ರಭಸಕ್ಕೆ ನುಜ್ಜುಗುಜ್ಜಾದ ಟಂಟಂ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.