ಜ್ಞಾನ ಬಂಧು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ


ಭಾಗ್ಯನಗರ ನವೆಂಬರ್ ೦೧ : ಪಟ್ಟಣದ ಜ್ಞಾನ ಬಂಧು ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಗುರುವಾರದಂದು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ‘ಕನ್ನಡ ರಾಜ್ಯೋತ್ಸವ’ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕನ್ನಡ ರಾಜ್ಯೋತ್ಸವ ಕುರಿತಂತೆ ಮಾತನಾಡಿದರು ಹಾಗೂ ಶಿಕ್ಷಕರಾದ   ಯಲ್ಲಪ್ಪ ಗೂಡ್ಲಾನೂರ ರವರು ಕನ್ನಡದ ಏಕೀಕರಣ ನಡೆದು ಬಂದ ಹಾದಿ, ಇಂದಿನ ದಿನಮಾನಗಳಲ್ಲಿ ಕನ್ನಡ ಭಾಷೆಯ ಸಮಸ್ಯಗಳನ್ನು ಮತ್ತು ಸಾಹಿತಿಗಳ ಕೊಡುಗೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾದ   ಎಸ್.ಜಿ. ಹೊಸಬಾವಿ ಅವರು ಕನ್ನಡ ಭಾಷಾ ಅಕ್ಷರದ ಮಹತ್ವ ಅದು ಕಲ್ಲನ್ನು ಮಾತನಾಡಿಸುವಂತ ಭಾಷೆ, ತಂತ್ರಜ್ಞಾನಗಳು ಎಷ್ಟೆ ಬದಲಾದರು ಭಾಷೆ-ಭಾವನೆಗಳಿಗೆ ಎಂದೂ ಸಾವಿಲ್ಲ ಎಂದು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ   ಡಿ.ಎಮ್. ಬಡೀಗೆರ ರವರು ಕರ್ನಾಟಕ ರಾಜ್ಯ ನಿರ್ಮಾಣದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿದರು ಮತ್ತು ಇಂದಿನ ಮಕ್ಕಳ ಮಾತೃಭಾಷೆಯನ್ನು ಬೆಳಿಸಬೇಕು ಎಂದು ಹೆಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ  ದಾನಪ್ಪ ಕವಲೂರು ಅವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಭಾಷಾಭಿಮಾನ ಮತ್ತು ಭಾಷಾ ಪ್ರಭುತ್ವ ಬೆಳೆಸಲು ಸಾಧ್ಯ ಹಾಗಾಗಿ ಶಿಕ್ಷಕರು ಕನ್ನಡ ಭಾಷೆಯೊಳಗೆ ಇರುವ ಮಹತ್ವನ್ನು ಮಕ್ಕಳಿಗೆ ತಿಳಿಸುವ ಜವಬ್ದಾರಿ ಅವರ ಹೆಗಲಿಗೆ ಇರುತ್ತದೆ. ಇಂದಿನ ದಿನಗಳಲ್ಲಿ ಅನ್ಯ ಭಾಷಾ ಕಲಿಕೆಯೊಂದಿಗೆ ನಮ್ಮ ಮಾತೃಭಾಷಾ ಕಲಿಕೆಯು ಅಷ್ಟೆ ಪ್ರಮುಖ ಅದನ್ನು ಬೆಳೆಸುವ ಉಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಎಸ್.ಎಸ್., ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುದ್ದು ಮಕ್ಕಳು ನಡಿಸಿಕೊಟ್ಟರು.

Please follow and like us:
error