ಜ್ಞಾನ ಬಂಧು ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ 

ಕೊಪ್ಪಳ ತಾಲೂಕಿನ ಭಾಗ್ಯನಗರ ಗ್ರಾಮದ ಜ್ಞಾನ ಬಂಧು ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಕನ್ನಡ ನಾಡು ನುಡಿ ಕುರಿತಂತೆ ಮಾತನಾಡಿದರು. ಶಾಲಾ ಶಿಕ್ಷಕರಾದ ಶ್ರೀ ಭೀಮಪ್ಪ ಮೂಲಿ ಯವರು ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಿತಿ , ಇತರ ಭಾಷೆಯ ದಬ್ಬಾಳಿಕೆ ಕುರಿತು ಹಾಗೂ ಭಾಷಾಭಿಮಾನ ಮಕ್ಕಳು ತಮ್ಮ ನಿತ್ಯ ಜೀವನದಲ್ಲಿ ಮಹತ್ವ ಅರಿತು ಬದುಕಬೇಕು ಎಂದರು, ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ ನಿವೃತ ಉಪನ್ಯಾಸಕ ಡಿ.ಎಂ. ಬಡಿಗೇರ ರವರು ಭಾಷೆಯು ಮನುಷ್ಯನ ಸಾಮಾಜಿಕ ಬದುಕಿಗೆ ಹೃದಯವಿದ್ದಂತೆ ಭಾಷೆವಿಲ್ಲದ ಬದುಕುವುದು ಅಸಾಧ್ಯ ಅದನ್ನು ಕಟ್ಟುವ ಬೆಳಸುವ ಕೆಲಸವು ನಮ್ಮಿಂದಲೇ ಆಗಬೇಕು, ಅನ್ಯ ಬ್ಯಾಷೆಯಲ್ಲಿ ನಾವೆಷ್ಟೇ ವ್ಯವಹರಿಸಿದರು ಆದರೆ ನಮ್ಮ ಭಾವನೆಗಳು ಮಾತೃಭಾಷೆಯಿಂದಲೇ ವ್ಯೆಕ್ತವಾಗುವುದು. ಹಾಗಾಗಿ ನಾವು ನಮ್ಮ ಮಾತೃ ಭಾಷೆಯನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಶೇಯಾ ಅಂಗಡಿ ಪ್ರತಿಭಾ ಕಾರಂಜಿಯ ಭಕ್ತಿಗೀತೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದಕ್ಕೆ ಶಾಲಾವತಿಯಿಂದ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು.
ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೇಡಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರ ಮತ್ತು ಮುಖ್ಯ ಶಿಕ್ಷಕಿಯರದ ಶ್ರೀಮತಿ ಜ್ಯೋತಿ ಎಸ್.ಎಸ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯದ ರಾಧಾ ಪಾತರದ ನೆಡಿಸಿಕೊಟ್ಟರು ಹಾಗೂ ಶ್ರೀಮತಿ ಮಂಜುಳಾ ಬಂಗಾಳಿಮರದ ಕಾರ್ಯಕ್ರವನ್ನು ವಂದಿಸಿದರು.
Please follow and like us:
error