ಜೊಲ್‌ಪಾರ್ಟಿ ಸಿನಿಮಾ ಆಡಿಯೋ ರಿಲೀಸ್

ಬಿ.ಎಸ್.ಆರ್.ಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಜೊಲ್‌ಪಾರ್ಟಿ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚಿಗೆ ನಗರದ ಬಿ.ಎಸ್.ಆರ್.ಕೆ ರೆಸ್ಟೋರೆಂಟ್ ನಲ್ಲಿ ಜರುಗಿತು ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯದ ಮನ್ಮಥ ಸಿನಿಮಾ ನಿರ್ದೇಶಕರಾದ ರಾಜೇಶ್ ಫರ್ನಾಂಡೀಸ್ ತಮ್ಮ ಅನಿಸಿಕೆಯಲ್ಲಿ ಕೊಪ್ಪಳ ಸಿನಿಮಾ ಚಟುವತಿಕೆ ಬಗ್ಗೆ ಬೆಂಗಳೂರು ಗಾಂಧಿನಗರ ಮಾತನಾಡುತ್ತಿದೆ ಅಂದರೆ ನಮಗೆ ಆಶ್ಚರ್ಯವಾಗುತ್ತಿದೆ ಎಂದರು

ಹಾಗೂ ವಿಕ್ಟರಿ ಸಿನಿಮಾದ ಯಕ್ಕಾ ನಿನ್ ಮಗಳು ಹಾಡಿನ ಗೀತರಚನೆಕಾರರಾದ ಶಿವು ಬೆರಗಿ ಜೊಲ್‌ಪಾರ್ಟಿ ಸಿನಿಮಾ ಸಾಹಿತ್ಯ ಹಾಗೂ ನಿರ್ದೇಶನ ಜವಾಬ್ದಾರಿ ನಿಭಾಯಿಸಿದ ಬಸವರಾಜ್ ಕೊಪ್ಪಳ ರವರ ಸಿನಿಮಾ ಛೇಂಬರ್ ಸ್ಥಾಪನೆ ಬಗೆಗಿನ ಸಾಧನೆ ನಾವೆಲ್ಲ ಹೆಮ್ಮೆ ಪಡುವ ವಿಷಯ ಎಂದರು. ಮುಖಂಡರಾದ ಕೆ.ಎಮ್.ಸಯ್ಯದ ಹಾಗೂ ಬೆಂಗಳೂರು ಉದ್ಯಮಿಗಳಾದ ಲೊಕೇಶ, ಕನ್ನಡ ಯುವ ರಕ್ಷಣೆ ರಾಜ್ಯಾಧ್ಯಕ್ಷರಾದ ಸುನಿಲ್ ಕುಮಾರ ಸಾಹಿತಿಗಳಾದ ಮಾಹಂತೇಶ ಮಲ್ಲನಗೌಡರ ಹಾಗೂ ನಿರ್ದೇಶಕರಾದ ಬಸವರಾಜ್ ಕೊಪ್ಪಳ, ಮತ್ತು ಚಿತ್ರತಂಡದ ಸದಸ್ಯರು ಹಾಗೂ ನಗರದ ಸಿನಿಮಾ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.