ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

ಕೊಪ್ಪಳ ತೋಟಗಾರಿಕೆ ಇಲಾಖೆ ಆಯೋಜಿಸಲಾದ ಮೂರು ದಿನಗಳ ಮಧು ಮೇಳ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳದ ತೋಟಗಾರಿಕೆ ಕಚೇರಿ ಆವರಣದಲ್ಲಿ ಸೋಮವಾರದಂದು ಚಾಲನೆ ನೀಡಿದರು. ಮಧು ಮೇಳ ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಗಾರವನ್ನು ತೋಟಗಾರಿಕೆ ಇಲಾಖೆ ಕಛೇರಿ ಆವರಣದಲ್ಲಿ ಸೋಮವಾರಂದು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿ, ನಂತರ ಜೇನು ಸಾಕಾಣಿಕೆ ಸಾಮಾಗ್ರಿಗಳ ಹಾಗೂ ಜೇನು ಪದಾರ್ಥಗಳ ಮೇಳವನ್ನು ವೀಕ್ಷಣೆ ಮಾಡಿದರು.  ಜೇನು ಪ್ರದರ್ಶನ ಮತ್ತು ಮಾರಾಟ ಮೇಳವು ಸೆ. ೨೫ ರಿಂದ ೨೭ ರವರೆಗೆ ಮೂರು ದಿನಗಳ ವರೆಗೆ ಜರುಗಲಿದೆ.  ಜೇನು ತುಪ್ಪ, ಜ್ಯಾಮ್, ರಾಯಲ್ ಜೆಲ್ಲಿ, ಮೇಣಬತ್ತಿ, ಕ್ಯಾಂಟಿ ಇತ್ಯಾದಿ ವಸ್ತುಗಳು ಹಾಗೂ ಹಲವಾರು ಖಾಯಿಲೆಗಳ ಔಷಧಿಗಳು ಕೂಡ  ಮೇಳದಲ್ಲಿ ಲಭ್ಯ ಇವೆ.  ಜೇನು ಸೇರಿದಂತೆ ಅದರಿಂದ ಉತ್ಪಾದಿಸಲಾದ ಉಪ ಉತ್ಪನ್ನಗಳ ಮಾರಾಟ ಕೂಡ ಇಲ್ಲಿ ಲಭ್ಯವಿದೆ.   ಕೊಪ್ಪಳ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ಜಿ.ಪಂ. ಸದಸ್ಯ ಶೇಖರಪ್ಪ ನಾಗರಳ್ಳಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಹಲವು ಗಣ್ಯರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error