ಜೆ.ಸಿ.ಐ ಕೊಪ್ಪಳ ಗವಿಸಿದ್ಧೇಶ್ವರ ನೂತನ ಸಂಸ್ಥೆ ರಚನೆ

jci_koppal
ಕೊಪ್ಪಳ : ನಗರದ ರಾಂಪೂರ ಆಸ್ಪತ್ರೆಯ ಹತ್ತಿರ ಇರುವ ಕಛೇರಿಯಲ್ಲಿ ಜೂನಿಯರ್ ಚೆಂಬರ್ ಇಂಟರನ್ಯಾಸನಲ್ ಇಂಡಿಯಾ (ಜೆ.ಸಿ.ಐ) ಇಲಕಲ್ ಸಿಲ್ಕ್ ಸಿಟಿವತಿಯಿಂದ ಜೆ.ಸಿ ಕೊಪ್ಪಳ ಗವಿಸಿದ್ದೇಶ್ವರ ಎಂಬ ನೂತನ ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ನೂತನ ಸಂಸ್ಥೆಯ ಅಧ್ಯಕ್ಷರಾಗಿ ಜೆ.ಸಿ ಗೀತಾ ಪಾಟೀಲ್, ಕಾರ್ಯದರ್ಶಿಯಾಗಿ ಜೆ.ಸಿ ಅನುರಾಧ ಬಿಜಕಲ್ ಆಯ್ಕೆಯಾದರು. ವಲಯಾಧ್ಯಕ್ಷರಾದ ಜೆ.ಸಿ ಸ್ವಾಮಿ ಹೆಚ್ ಪ್ರಮಾಣ ವನಚ ಬೋಧಿಸಿದರು.
ಈ ಕಾರ್ಯಕ್ರಮವನ್ನು ಶ್ರೀಮತಿ ನಿಂಗಮ್ಮ ಕರಡಿ ಉದ್ಘಾಟಿಸಿದರು, ಜೆ.ಸಿ ಇಲಕಲ್ ಸಿಲ್ಕ್ ಸೇವೆಯ ಅಧ್ಯಕ್ಷೆ ಜೆ.ಸಿ ಮಂಜುಳಾ ತೋಟಗೇರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜೆ.ಸಿ ರಂಗನಾಥ ಜಿಂಗಾಡೆ, ರಾಜಭಕ್ಷಿ, ಶ್ರೀಮತಿ ಬಾಚಲಾಪೂರ, ಪ್ಮೋದ ಹಂಚಾಟೆ ಇತರರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment