ಜೆಡಿಎಸ್ ಸೇರುವುದಿಲ್ಲ- ಬಿಜೆಪಿ ಟಿಕೇಟ್ ಕೊಟ್ಟರೆ ಗೆಲ್ಲುತ್ತೇನೆ – ಕರಡಿ ಸಂಗಣ್ಣ

ಕೊಪ್ಪಳ : ಹೈಕಮಾಂಡ ನಿರ್ಧಾರ ಮಾಡಿ ಟಿಕೆಟ್ ನೀಡಿದರೆ, ಗೆಲ್ಲುವ ಆತ್ಮವಿಶ್ವಾಸ ನನಗಿದೆ. ಗೆದ್ದ ನಂತರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಸಂಸದ ಸ್ಥಾನದಲ್ಲಿ ಮುಂದುವ ರೆಯುತ್ತೇನೆ

ಟಿಕೆಟ್ ವಿಚಾರವಾಗಿ ಮೊದಲ ಬಾರಿ ಮನ ಬಿಚ್ಚಿ ಮಾತನಾಡಿದ ಸಂಸದ ಕರಡಿ ಸಂಗಣ್ಣ .

ನನಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರ, ಬೆಂಬಲಿಗರ ಒತ್ತಡವಿದೆ. ಟಿಕೆಟ್ ನೀಡದಿದ್ದರೆ ಪಕ್ಷ ಕೊಪ್ಪಳದಲ್ಲಿ ನಾಶವಾಗುತ್ತೆ ಎನ್ನುವ ಆತಂಕ ಕಾರ್ಯಕರ್ತರದು.ಕಾರ್ಯಕರ್ತರು ಚದುರಿ ಹೋಗುತ್ತಾರೆ ಆ ಕಾರಣಕ್ಕೆ ಹೈಕಮಾಂಡಿಗೆ ಮನವೊಲಿಸಲು ಪ್ರಯತ್ನ ನಡೆದಿವೆ

ಪ್ರತಿಯೊಬ್ಬರು ಟಿಕೆಟ್ ಅಕಾಂಕ್ಷಿಗಳಾಗಿದ್ದಾರೆ ಅದರಲ್ಲಿ ಸಿವಿ ಚಂದ್ರಶೇಖರ ಒಬ್ಬರು. ಟಿಕೆಟ್ ಗಿಂತ ಪಕ್ಷ ಗೆಲ್ಲುವುದು ಮುಖ್ಯ ಅದಕ್ಕಾಗಿ ಟಿಕೆಟ್ ನೀಡಲು ಹೈಕಮಾಂಡಗೆ ಒತ್ತಡ ತಂದಿದ್ದೇನೆ

ಟಿಕೆಟ್ ಕೊಡದೆ ಇರುವುದಕ್ಕೆ ಕಾರಣ ಸಂಸತ್ತಿನಲ್ಲಿ ಸಂಸದರ ಸಂಖ್ಯೆ ಕಡಿಮೆ ಆಗುತ್ತೆ ಅಂತ ಹಿನ್ನೆಲೆ. ಜೆಡಿಎಸ್ ಗೆ ಸೇರುವುದು ಕೇವಲ ವದಂತಿ, ನಾನು ಪಕ್ಷ ಬಿಡುವ ವಿಚಾರ ಮಾಡಿಲ್ಲ .ನಮ್ಮಲ್ಲಿ ಭಿನ್ನಾಭಿಪ್ರಾಯ ಗಳಿಲ್ಲ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ‌‌ ಎಂದು ಹೇಳಿಕೆ.