ಜೆಡಿಎಸ್ ಬಿಜೆಪಿಯ ಬ್ರ್ಯಾಂಚ್ ಆಫೀಸ್ : ಇಕ್ಬಾಲ್ ಅನ್ಸಾರಿ

ಕೊಪ್ಪಳ : ನನ್ನನ್ನು ಸೋಲಿಸಲು ಜೆಡಿಎಸ್ ಬಿಜೆಪಿಯ ಸಲಹೆಯನ್ನು ಪಡೆಯುತ್ತದೆ . ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿಯ ಬ್ರ್ಯಾಂಚ್ ಆಫೀಸ್ ಎಂದು ಗಂಗಾವತಿಯ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

ಗಂಗಾವತಿಯಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಆ ಕಾರಣಕ್ಕಾಗಿ ಜೆಡಿಎಸ್ ಅಭ್ಯರ್ಥಿ ನನ್ನ ಬಗ್ಗೆ ಅಸಂವಿಧಾನಿಕ ಪದಗಳನ್ನು ಬಳಸುತ್ತಾರೆ ಇದು ಚುನಾವಣಾ ಸಮಯ ನಾನು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಬೇಕು ಅಂತ ನಿಂತಿಲ್ಲ ಕಾಂಗ್ರಸ್ ನ್ನು ಸೋಲಿಸಲು ಬಿಜೆಪಿ ಜೆಡಿಎಸ್ ನಡೆಸುತ್ತಿರುವ ತಂತ್ರ . ಗಂಗಾವತಿಯಲ್ಲಿ ಅಶಾಂತಿ ಉಂಟುಮಾಡಬೇಕೆಂದು ಅಸಂವಿಧಾನಿಕ ಪದಗಳನ್ನು ಜೆಡಿಎಸ್ ಅಭ್ಯರ್ಥಿ ಬಳಸುತ್ತಿದ್ದಾರೆ

ಇದರ ಬಗ್ಗೆ ನಾನು ತೆಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಸಮಸ್ಯೆಗಳನ್ನು ಅರಿತು ಅವರ ಬಳಿ ಹೋಗಬೇಕಾಗಿದೆ. ಚುನಾವಣೆ ನಂತರ ಕಾಂಗ್ರೆಸ್ ಜಯಭೇರಿಯಾದಾಗ ಎಲ್ಲಿ ಯಾವ ವೇದಿಕೆ ಮೇಲೆ ಉತ್ತರ ಕೊಡಬೇಕು ಕೊಡುತ್ತೇನೆ ಎಂದು ಹೇಳಿದರು.

Related posts