ಜೆಡಿಎಸ್ ನೂತನ ಕಛೇರಿ ಉದ್ಘಾಟನೆ

ಕೊಪ್ಪಳ : ಅಗಸ್ಟ್ ೫ ರಂದು ಮದ್ಯಾಹ್ನ ೩ ಗಂಟೆಗೆ ನಗರದ ತಹಶೀಲ್ದಾರ ಕಾರ್ಯಾಲಯದ ಎದುರಿಗೆ ಇರುವ ಬೊಮ್ಮನಾಳ ಕಾಂಪ್ಲೇಕ್ಸ್‌ನಲ್ಲಿ ಕೊಪ್ಪಳ ಜಿಲ್ಲಾ ಜೆಡಿಎಸ್ ನೂತನ ಕಾರ್ಯಾಲಯ ಉದ್ಘಾಟನೆ ನೆರವೇರುವುದು.
ಕಾರ್ಯಕ್ರಮಕ್ಕೆ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಎಲ್ ಕಾಂತರಾಜು, ಜಿಲ್ಲಾ ವಿಕ್ಷಕರಾದ ಸಿ.ಎಂ ನಾಗರಾಜ, ಆರ್ ದಯಾನಂದ, ಜಿಲ್ಲಾ ಅಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್, ಕೆ.ಎಂ ಸೈಯದ್, ವೀರೇಶ ಮಾಹಂತಯ್ಯನಮಠ, ಪ್ರಧಾನ ಕಾರ್ಯದರ್ಶಿ ಎಂ. ಖ ಜೀಲಾನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿ ಸಬೇಕೆಂದು ಪಕ್ಷಕ ವಕ್ತಾರ ಮೌನೇಶ ಎಸ್ ವಡ್ಡಟ್ಟಿ   ತಿಳಿಸಿದ್ದಾರೆ.

Please follow and like us:
error