ಜೆಡಿಎಸ್ ಅಭ್ಯರ್ಥಿ ಕೆ.ಎಂ.ಸಯ್ಯದ್ ಭರ್ಜರಿ ಪ್ರಚಾರ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ, ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಮಾಡುವ ಮೂಲಕ ಜನರನ್ನು ತಮ್ಮತ್ತ ಸೇಳೆಯುತ್ತಿದ್ದಾರೆ. ಇನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಮತ್ತು ಹಾಲಿ ಸಂಸದನ ಪುತ್ರ ರಾಷ್ಟ್ರೀಯ ಪಕ್ಷಗಳಿಂದ ಕಣಕ್ಕಿಳಿದಿದ್ರೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಕೆಎಂ ಸೈಯದ್ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕ್ಕಿಸಲು ಎಲ್ಲ ರಣ ತಂತ್ರಗಳನ್ನ ರೂಪಿಸಿಕೊಂಡಿದ್ದಾರೆ. ಈಗಾಗಲೆ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ಆರಂಭಿಸಿದ್ದು ಮತದಾರರಿಂದ ಉತ್ತಮ ರೆಸ್ಪಾನ್ಸ್ ದೊರತಿದೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಹೈದ್ರಾಬಾದ್ ಕರ್ನಾಟಕ ದ ಉಸ್ತುವಾರಿ ಹೆಚ್ ಆರ್ ಶ್ರೀನಾಥ್ ಸೈಯದ್ ಪರ ಕೊಪ್ಪಳ ದಲ್ಲಿ ಮನೆ ಮನೆ ಗೆ ತೆರಳಿ ಪ್ರಚಾರ ಮಾಡಿದ್ರು. ಸೈಯದ್ ಅವರ ಜನಪರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ಹಲವು ವರ್ಷಗಳಿಂದ ತೊಡಗಿದ್ರು. ಇವರ ನಿಸ್ವಾರ್ಥ ಸೇವೆಯಿಂದ ಜನತೆ ಕೈ ಹಿಡಿಯುವ ಎಲ್ಲಾ ಲಕ್ಷಣಗಳು ಕಂಡುಬರ್ತಿದೆ.
ಇಪ್ಪತ್ತು ತಿಂಗಳ ಆಡಳಿತವನಡೆಸಿದ ಹೆಚ್ಡಿ ಕುಮಾರಸ್ವಾಮಿ ಸರ್ಕಾರ, ಹಲವು ಜನಪರ ಕಾರ್ಯಕ್ರಮಗಳನ್ನ ನೀಡಿ ಜನಮೆಚ್ಚುಗೆ ಪಡೆದಿದೆ. ಈ ಬಾರೀ ಸರ್ಕಾರ ಅಧಿಕಾರಕ್ಕೆ ಬಂದ್ರೆ ರೈತರ ಸಂಪೂರ್ಣ ಸಾಲ ಮನ್ನ ಆಗುತ್ತೆ, ಮಹಿಳೆಯರ, ಯುವಕರ ಆಶೋತ್ತರಗಳನ್ನ ಈಡೇರಿಸಲು ಮಹತ್ತರವಾದ ಯೋಗನೆಗಳನ್ನ ತರುವುದಾಗಿ ಘೋಷಣೆ ಮಾಡಲಾಗಿದೆ. ಇದನ್ನೆಲ್ಲ ನೋಡಿದ ಜನ್ರು ಜನತಾದಳಕ್ಕೆ ಅವಕಾಶ ಕೊಡ್ತಾರೆ, ನನಗೆ ಆಶೀರ್ವಾದ ಮಾಡ್ತಾರೆ ಮತ ಕೆಎಂ ಸೈಯದ್ ವಿಶ್ವಾಸ ವ್ಯಕ್ತಪಡಿಸಿದ್ರು.

Please follow and like us:
error