ಜು. 15 ರಿಂದ ಸಕ್ರಿಯ ಕ್ಷಯ ರೋಗ ಪತ್ಯೆ ಮತ್ತು ಚಿಕಿತ್ಸಾ ಆಂದೋಲನ 

ಅಪೌಷ್ಠಿಕ ಮಕ್ಕಳನ್ನು ಟಿ.ಬಿ ತಪಾಷಣೆಗೆ ಒಳಪಡಿಸುವಂತೆ ಕ್ರಮ ಕೈಗೊಳ್ಳಿ : ಸೈಯದಾ ಅಯಿಷಾ
ಕೊಪ್ಪಳ ಜು.   “ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ” ಜುಲೈ. 15 ರಿಂದ ಜಿಲ್ಲೆಯಾದ್ಯಂತ ಜರುಗಲಿದ್ದು, ಈ ಸಮಯದಲ್ಲಿ ಅಪೌಷ್ಠಿಕ ಮಕ್ಕಳನ್ನು ಟಿ.ಬಿ ತಪಾಷಣೆಗೆ ಒಳಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾರವರು ಸೂಚನೆ ನೀಡಿದರು.
ಅವರು ತಮ್ಮ ಇಂದು (ಜು.10 ರಂದು) ತಮ್ಮ ಕಚೇರಿಯಲ್ಲಿ ಪರಿಷ್ಕೃತ ರಾಷ್ಟಿçÃಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜುಲೈ. 15 ರಿಂದ 27 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಸಕ್ರಿÃಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ನಡೆಸುವ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಸಂಘಗಳ ಸಹಯೋಗದಲ್ಲಿ ಇದೇ ಜುಲೈ. 15 ರಿಂದ 27 ರವರೆಗೆ ಸಕ್ರಿÃಯ ಕ್ಷಯ ರೋಗ ಪತ್ಯೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮದ ಜಿಲ್ಲೆಯಾದ್ಯಂತ ನಡೆಯಲಿದೆ.  ಕ್ಷಯರೋಗ ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರ ಬಹು ಮುಖ್ಯವಾಗಿದ್ದು, ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು.  ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ರೇಡಿಯೋ ಜಿಂಗಲ್ಸ್ ಬಿತ್ತರಿಸುವಂತೆ ಕ್ರಮ ವಹಿಸಬೇಕು.  ಅಪೌಷ್ಠಿಕ ಮಕ್ಕಳನ್ನು ಟಿ.ಬಿ ತಪಾಷಣೆಗೆ ಒಳಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಬಂಧಿಖಾನೆಯ ಖೈದಿಗಳಿಗೆ ಟಿ.ಬಿ ತಪಾಷಣೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆಯವರು ಸಹಕಾರ ನೀಡಬೇಕು.  ಪಂಚಾಯತ್‌ಗಳು ಎಲ್ಲಾ ಗ್ರಾಮಗಳಲ್ಲಿ ಕ್ಷಯರೋಗದ ಬಗ್ಗೆ ಡಂಗುರ ಹಾಕಿಸಬೇಕು.  ಸರ್ಕಾರೇತರ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ.  ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಕ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ.ರವರು ಮಾತನಾಡಿ, ಕ್ಷಯರೋಗವು ಮೈಕೋ ಬ್ಯಾಕ್ಟಿರೀಯಾ ದಿಂದ ಹರಡುವ ಒಂದು ಸಾಂಕ್ರಾಮಿಕ ರೋಗ.  ಇದು ಸೊಂಕುವುಳ್ಳ ವ್ಯಕ್ತಿ ಕೆಮ್ಮಿದಾಗ & ಶೀನಿದಾಗ ಗಾಳಿಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೂ ಹರಡುತ್ತದೆ.  ಚಿಕಿತ್ಸೆ ಪಡೆಯದ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 10 ರಿಂದ 15 ಜನರಿಗೆ ಈ ರೋಗದ ಪ್ರಸಾರ ಮಾಡುತ್ತಾನೆ.  ಈ ಸೊಂಕನ್ನು ನಿಯಂತ್ರಿಸಿ ಚಿಕಿತ್ಸೆ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ವಿವಿಧ ಇಲಾಖೆಗಳಿಂದ ಸಹಕಾರ ಬೇಕಾಗಿದೆ.  ಜಿಲ್ಲಾ ಪೋಲಿಸ್ ಇಲಾಖೆಯವರು ಸಂಚಾರಿ ಪೋಲಿಸ್ ಸಿಬ್ಬಂದಿಯನ್ನು ತಪಾಸಣೆಗೊಳಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಎಸ್. ಯರಗಲ್ಲ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜ ಟಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ ಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯ, ಡಾ. ಆನಂದ ಗೋಟೂರು, ಡಾ. ಮಂಜುನಾಥ  ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂತ ಪೂಜಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Please follow and like us:
error

Related posts