ಜೀವದ ಹಂಗು ತೊರೆದು ಕೆಲಸ ಮಾಡುವ ಕರೋನಾ ವಾರಿಯರ್ಸಗೆ ಪ್ರೋತ್ಸಾಹಿಸಿ: ಮುನವಳ್ಳಿ

ಕೊಪ್ಪಳ : ಮಹಾಮಾರಿ ಕರೋನಾ ವೈರಸ್ ಗಂಗಾವತಿಯಲ್ಲಿ ಕಾಣಿಸಿಕೊಂಡಿದ್ದು, ಎರಡು ಏರಿಯಾಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಈ ವೇಳೆಯಲ್ಲಿ ಕರೋನಾ ವಾರಿಯರ್ಸಗಳ ಜೀವದ ಹಂಗು ತೊರೆದು ಕೆಲಸ ಮಾಡುತ್ತೀರುವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ಬುಧವಾರ ಗಂಗಾವತಿ ತಾಪಂ ಆವರಣದಲ್ಲಿರುವ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೊಪ್ಪಳ ಜಿಲ್ಲೆಯಲ್ಲಿ 21 ಪ್ರಕರಣಗಳು ಬಂದಿದ್ದು, ಅದರಲ್ಲಿ ಗಂಗಾವತಿಯಲ್ಲಿ 3 ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿನ ನರ್ಸಗೆ ಕರೋನಾ ಪಾಸಿಟಿವ್ ಬಂದಿದ್ದು, ಇದರಿಂದ ಆಸ್ಪತ್ರೆಯ 130 ಸಿಬ್ಬಂಧಿ ಪ್ರಥಮ ಸಂಪರ್ಕಿತರ 100 ಜನರ ಸ್ವಾಬ್ ಪರಿಕ್ಷೆಯನ್ನು ಮಾಡಲಾಗಿದೆ. ಗುರುವಾರ ವರದಿ ಬರಲಿದೆ. ಕರೋನಾ ಪಾಸಿಟಿವ್ ಕಾಣಿಸಿಕೊಂಡ ಪರಿಣಾಮ ತಾಲುಕಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಮುಂಜಾಗೃತಾವಾಗಿ ಸಭೆಯನ್ನು ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು. ಕೊಪ್ಪಳ ಜಿಲ್ಲೆಯು ನಿಧಾನವಾಗಿ ಗ್ರೀನ್ ಜೋನ್‍ನಿಂದ ಕೈಬಿಡಲಾಗಿದ್ದು, ಬಳ್ಳಾರಿಯ ಜಿಂದಾಲ್, ಮಹಾರಾಷ್ಟ್ರ ಭಾಗಗಳಿಂದ ಬಂದಿರುವ ವ್ಯಕ್ತಿಗೆ ಕರೋನಾ ಕಾಣಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರ ಮೇಲೆ ಸೂಕ್ತ ನಿಗಾ ವಹಿಸಿ ಕ್ವಾರಂಟೈನ್‍ಗೆ ಒಳಪಡಿಸಬೇಕಾಗಿದೆ. ಸರ್ಕಾರ ಕರೋನಾ ಬಗ್ಗೆ ಸಾಕಷ್ಟು ಸೂಕ್ತ ಕ್ರಮ ಜರುಗಿಸಲಿದೆ. ಕರೋನಾ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ನಿವಾಸದಿಂದ 100 ಮೀಟರ್, ಬಫರ ಜೋನ್ 200ಮೀಟರ್ ಸೀಲ್‍ಡೌನ್ ಮಾಡಲಾಗುತ್ತಿದೆ ಎಂದರು.
ಈ ವೇಳೆಯಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲರು, ಬ್ಲಾಕ್ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ನಗರಸಭೆ ಸದಸ್ಯರಾದ ಅಜಯ ಬಿಚ್ಚಾಲಿ, ನೀಲಕಂಠ ಕಟ್ಟಿಮನಿ, ಉಮೇಶ ಸಿಂಗನಾಳ, ವಾಸುದೇವ ನವಲಿ, ಬಿಜೆಪಿ ಯುವ ಮುಖಂಡ ಗೌರೀಶ ಬಾಗೋಡಿ ಸೇರಿದಂತೆ ಇನ್ನಿತರಿದ್ದರು.

Please follow and like us:
error