ಜಿ.ಪಂ ಉಪಕಾರ್ಯದರ್ಶಿಗಳಿಂದ ಚೆಕ್‌ಡ್ಯಾಂಗಳ ತನಿಖಾ ಕಾರ್ಯ

ಕೊಪ್ಪಳ, ಜೂನ್. : ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2019-20ರಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಂಡ ಚೆಕ್‌ಡ್ಯಾಂಗಳ ತನಿಖಾ ಕಾರ್ಯವನ್ನು ಜಿಲ್ಲಾ ಪಂಚಾಯತನ ಉಪಕಾರ್ಯದರ್ಶಿ ಶರಣಬಸವರಾಜ ಅವರು ಕೈಗೊಳ್ಳಲಿದ್ದಾರೆ.
ನರೇಗಾ ಯೋಜನೆಯ ಚೆಕ್‌ಡ್ಯಾಂ ನಿರ್ಮಾಣದಡಿ ಅವ್ಯವಹಾರವಾಗಿರುವ ಕುರಿತು ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಗುಣನಿಯಂತ್ರಕರಿAದ ತನಿಖಾ ಕಾರ್ಯ ಕೈಗೊಳ್ಳಲಾಗಿತ್ತು. ಜಿಲ್ಲಾ ಗುಣನಿಯಂತ್ರಕರಿAದ ಚೆಕ್‌ಡ್ಯಾಂ ಪರಿಶೀಲನೆ ಪ್ರಗತಿಯಲ್ಲಿರುವಾಗಲೇ ಕೋವಿಡ್-19 ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಆದ ನಿಮಿತ್ತ ಪರಿಶೀಲನೆಯನ್ನು ಮುಂದೂಡಲಾಗಿತ್ತು.
ಅದರಂತೆ ತನಿಖಾ ಕಾರ್ಯದ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯತ್‌ನ ಈ ಹಿಂದಿನ ಉಪಕಾರ್ಯದರ್ಶಿಗಳಿಗೆಗೆ ವಹಿಸಲಾಗಿತ್ತು. ಆದರೆ ಅವರ ಸೇವಾ ನಿವೃತ್ತಿಯ ಕಾರಣದಿಂದ ಆ ಹುದ್ದೆಯು ಒಂದೂವರೆ ತಿಂಗಳುಗಳ ಕಾಲ ಭರ್ತಿಯಾಗದೆ ಇದ್ದಿದರಿಂದ ತನಿಖಾ ಕಾರ್ಯ ವಿಳಂಬವಾಗಿತ್ತು. ಸದ್ಯ ಉಪಕಾರ್ಯದರ್ಶಿಗಳ ಹುದ್ದೆಗೆ ವರ್ಗಾವಣೆಯಾಗಿ ಬಂದಿರುವ ಉಪಕಾರ್ಯದರ್ಶಿಗಳು ತನಿಖಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸುತ್ತಿದ್ದಾರೆ.
ಪ್ರಸ್ತುತ ಜಿಲ್ಲಾಗುಣ ನಿಯಂತ್ರಕರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಉಳಿದ ಕಾಮಗಾರಿ ಸ್ಥಳ ಪರಿಶೀಲನೆ ಕಾರ್ಯ ಮುಂದುವರಿಸಿರುತ್ತಾರೆ. ಅವರಿಂದ ಸ್ವೀಕೃತವಾದ ವರದಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error