ಜಿ.ಪಂ. ಅದ್ಯಕ್ಷರಾಗಿ ವಿಶ್ವನಾಥ ರೆಡ್ಡಿ ಉಪಾದ್ಯಕ್ಷರಾಗಿ ರತ್ನವ್ವ ಭರಮಪ್ಪ ನಗರ

ಕೊಪ್ಪಳ : ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ನ ವಿಶ್ವನಾಥ ರೆಡ್ಡಿ ಹಾಗೂ ರತ್ನವ್ವ ಭರಮಪ್ಪ ನಗರ

ಅಧ್ಯಕ್ಷರಾಗಿ ಸಿದ್ದಾಪೂರ ಜಿಲ್ಲಾ ಪಂಚಾಯತ್ ಸದಸ್ಯ ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷರಾಗಿ ಅಳವಂಡಿ ಜಿ.ಪಂ ಕ್ಷೇತ್ರದ ಸದಸ್ಯೆ ರತ್ನವ್ವ ಭರಮಪ್ಪ ಆಯ್ಕೆಯಾಗಿದ್ದಾರೆ.ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ‌ ೧೧ ಗಂಟೆಯಿಂದ ೧ ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು

ಪ್ರತಿಸ್ಪರ್ಧಿ ಇಲ್ಲದ ಹಿನ್ನೆಲೆ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳ ಘೋಷಣೆ ಮಾಡಲಾಯಿತು. ಪ್ರಾದೇಶಿಕ ಆಯುಕ್ತ ಸುಭೋಧ ಯಾದವ್ ರಿಂದ ಘೋಷಣೆ. ರಾಜಶೇಖರ ಹಿಟ್ನಾಳ ಹಾಗೂ ಲಕ್ಷ್ಮವ್ವ ಸಿದ್ದಪ್ಪ ನಿರಲೂಟಿಯವರು ರಾಜೀನಾಮೆ ಹಿನ್ನೆಲೆ ತೆರವಾಗಿದ್ದ ಸ್ಥಾನ. ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಅನುಪಸ್ಥಿತಿಯಲ್ಲಿ ೧೭ ಕಾಂಗ್ರೆಸ್ ಸದಸ್ಯರು ಭಾಗಿಯಾಗಿದ್ದರು