You are here
Home > Election_2018 > ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಮೋದಿ ಅಲೆ

ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಮೋದಿ ಅಲೆ

ಭರ್ಜರಿ ಹವಾ ಎಬ್ಬಿಸಿದ ನರೇಂದ್ರ ಮೋದಿ

ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ್ರು.

ಮೊದಲಿಗೆ ಕನ್ನಡದಲ್ಲಿ ಭಾಷಣ ಶುರುಮಾಡಿದ ಮೋದಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳಿಗೆ ನಮಿಸಿ ಭಾಷಣ ಆರಂಭಿಸಿದ್ರು. ಇನ್ನು, ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸವನ್ನ ಕಾಂಗ್ರೇಸ್ ಸರ್ಕಾರ ಮಾಡಿಲ್ಲ. ಆದ್ರೇ, ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ. ಇದು ಕೊಪ್ಪಳದ ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ ಅದಕ್ಕೆ ಪ್ರಯೋಜನ ವಾಗಲಿದೆ. ಅಲ್ದೇ ಆನೆಗೊಂದಿ, ಹಂಪಿಯ ಯಾತ್ರಾ ಸ್ಥಳಕ್ಕೂ ಪ್ರಯೋಜನವಾಗಲಿದೆ. ಕೊಪ್ಪಳದಲ್ಲಿ ಹನುಮಾನ ಮತ್ತು ಶ್ರೀರಾಮರ ಪವಿತ್ರ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ ಇಡೀ ವಿಶ್ವಕ್ಕೆ ಖ್ಯಾತಿಯಾಗಿದೆ, ಇದನ್ನು ವಿಶ್ವಮಟ್ಟದ ಯಾತ್ರಾ ಸ್ಥಳ ಮಾಡುವುದೇ ನನ್ನ ಕನಸು. ಹವಾಯಿ ಚಪ್ಪಲ ಹಾಕುವವನು ಹವಾಯಿ ಜಹಾಜ್ ನಲ್ಲಿ ಕೂಡುವಂತೆ ಮಾಡುತ್ತೇನೆ ಎಂದ್ರು. ಇನ್ನೂ, ಶೌಚಾಲಯ ಆಂದೋಲ ಆರಂಭ ಮಾಡಿದ ಕೊಪ್ಪಳದ ಮಲ್ಲಮ್ಮನನ್ನು‌ ನೆನೆಸಿದ ಮೋದಿ, ಎರಡು ವರ್ಷದ ಕೆಳಗಡೆ ಮಲ್ಲಮ್ಮನ ಹೆಸರು ಮನ್ ಕಿ ಬಾತ್ ನಲ್ಲಿ ನಾನು ಪ್ರಸ್ತಾಪಿಸಿದ್ದೆ, ಅಲ್ದೇ, ದೇಶದ ಶೌಚಾಲಯ ಅಭಿಯನಕ್ಕೆ ಮಲ್ಲಮ್ಮ ಪ್ರೇರಣೆಯಂತೆ ಎಂದ್ರು.

ಕೊಪ್ಪಳ ಬಿಜೆಪಿಯ ವತಿಯಿಂದ ನರೇಂದ್ರ ಮೋದಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

Top