ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು| ಮೂಲಭೂತ ಸೌಕರ್ಯ ಒದಗಿಸಲು ಡಾ.ರಾಮ ಅವತಾರಗೆ ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ, ಅ.೨೬: ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ಪ್ರವಾಸೊಧ್ಯಮ ಇಲಾಖೆಯ ರಾಮಾಯಣ ಸರ್ಕೂಟ್ ಅಧ್ಯಕ್ಷರಾದ ಡಾ. ರಾಮ ಅವತಾರವರಿಗೆ ಸಂಸದ ಕರಡಿ ಸಂಗಣ್ಣ ಮನವಿ ಮಾಡಿದರು.

ಡಾ.ರಾಮ ಅವತಾರವರು ಶುಕ್ರವಾರ ದಂದು ಹೊಸಪೇಟೆ ನಗರಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು ಜಿಲ್ಲೆಯ ಪ್ರಸಿದ್ಧ, ಪೌರಾಣಿಕ ಹಿತಿಹಾಸ ಹೊಂದಿರುವ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಆನೆಗುಂದಿ, ಕನಕಗಿರಿಯ ಕನಕಾಚಲ ದೇವಸ್ಥಾನ, ಇಟಗಿಯ ಮಹಾದೇವ ದೇವಾಲಯ, ಕೊಪ್ಪಳದ ಕೀಲೆ ಕೋಟೆ, ಬಹದ್ದೂರಬಂಡಿ ಕೋಟೆ, ಇನ್ನೂ ಅನೇಕ ಪ್ರೇಕ್ಷಣೀಯ ಪ್ರಸಿದ್ಧ ಸ್ಥಳಗಳಿಗೆ ದಿನವಿಡಿ ಸಾವಿರಾರು ಜನರು ಬೇಟಿ ನೀಡುತ್ತಿರುವುದರಿಂದ ಈ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು. ಹಾಗೂ ಪ್ರವಾಸೊಧ್ಯಮ ಇಲಾಖೆಯಿಂದ ಮಾರ್ಗದರ್ಶಿಗಳ ನೇಮಕ, ಚಾರಣಕ್ಕೆ ಪ್ರವಾಸಿ ವಾಹನಗಳ ವ್ಯವಸ್ಥೆ, ಮಾರ್ಗದರ್ಶಿ ಫಲಕಗಳ ನಿರ್ಮಾಣ, ಯಾತ್ರಾ ನಿವಾಸಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.

Please follow and like us:
error