ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದೆ -ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವ ಆರ್ ಶಂಕರ

ಈಗಾಗಲೇ ಬರ ಸಮೀಕ್ಷೆ ನಡೆಸಲಾಗಿದೆ. ವರದಿ ಕೂಡ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬರ ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದೆ ಅಂತ ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವ ಆರ್ ಶಂಕರ ಹೇಳಿದ್ದಾರೆ. 

ವಾಲ್ಮೀಕಿ ಜಯಂತಿ ಹಿನ್ನೆಲೆ ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ, ಅವರು ಮಾಧ್ಯಮ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಈಗಾಗಲೇ ಕೊಪ್ಪಳ ಜಿಲ್ಲೆಯನ್ನು ಬರ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಹಿಂಗಾರು ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ, ಕುಡಿಯುವ ನೀರು ಹಾಗು ರೈತರ ಬೆಳೆ ನಾಶವಾಗಿದೆ. ಇದರ ಸಮೀಕ್ಷೆ ನಡೆಸಲಾಗಿದೆ. ಬರ ಜಿಲ್ಲೆಗೆ ಬೇಕಾಗಿರುವ ಮೂಲಭೂ ಸೌಕರ್ಯಗಳ ಯೋಜನೆ ರೂಪಿಸಲಾಗುತ್ತಿದೆ ಅಂತ ಹೇಳಿದರು.

ಕೊಪ್ಪಳದಲ್ಲಿ ಜಿಂಕೆಗಳ ಸಚಿತತಿ ಹೆಚ್ಚುತ್ತಿದೆ. ಕಾಡು ನಾಶವಾಗುತ್ತಿರುವ ಹಿನ್ನೆಲೆ ಆಹಾರವನ್ನು ಅರಸಿ ಜಿಂಕೆಗಳು ನಾಡಿಗೆ ಬರುತ್ತಿವೆ. ಈ ಭಾಗದಲ್ಲಿ ಜಿಂಕೆ ಮತ್ತು ಕೃಷ್ಣಮೃಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಕುರಿತು ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇದರ ಪೋಸ್ಟ್‌ಮಾರ್ಟ್ಂ ವರದಿ ಬಂದಿದೆ, ಇನ್ನು ಲ್ಯಾಬ್ ವರದಿ ಬರಬೇಕು. ಈಗಾಗಲೇ ಇದರ ಬಗ್ಗೆ ತನಿಖೆ ನಡೆಸಲು ಹೇಳಿದೇನೆ. ಇಲ್ಲಿ ಜಿಂಕೆ ವನ ಮಾಡಬೇಕು ಎಂಬ ಪ್ರಸ್ತಾವನೆ ಇದೆ. ಹಿಂದೆ ಕೂಡ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಮತ್ತೆ ನಾನು ಪ್ರಸ್ತಾವನೆ ಸಲ್ಲಿಸುತ್ತೇನೆ.

ಮಾಜಿ ಸಿಎಂ ಸಿದ್ದಾರಮಯ್ಯ ಅವರು ಶಾಸಕ ಶ್ರೀರಾಮುಲು ಮತ್ತು ರಡ್ಡಿಗಳ ಬಗ್ಗೆ ಅವರದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಅಂದ್ಮೇಲೆ ಇವೆಲ್ಲ ಸಹಜ. ವಿರೋಧ ಪಕ್ಷದವರು ನಮ್ಮ ಬಗ್ಗೆ ಹೇಳಿಕೆ ನೀಡುವುದು. ನಾವು ಆಡಳಿತ ಪಕ್ಷಗಳು ಅವರ ವಿರುದ್ಧ ಹೇಳಿಕೆ ನೀಡುವುದು ನಡೆಯುತ್ತಲೇ ಇರುತ್ತವೆ. ನಾನು ಉಪ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಅಂತ ಸಚಿವರು ಹೇಳಿದರು.

ನಾನು ಕಾಂಗ್ರೇಸ್ ಸೇರುವುದು ಖಚಿತ. ನನಗೆ ಯಾರು ಒತ್ತಡ ತಂದಿಲ್ಲ. ನನ್ನ ಮುಂದಿನ ರಾಜಕೀಯ ಭವಿಷ್ಯ ಹಾಗು ಬೆಳವಣಿಗೆಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಇನ್ನು ಸೇರುವ ದಿನಾಂಕ ನಿಗಧಿಯಾಗಿಲ್ಲ. ಸೇರುವ್ಯದಂತು ಖಚಿತ ಅಂದ್ರು

ಇದೊಂದು ವಿನೂತನ ಪ್ರಯೋಗ ಹತ್ತನೇ ತರಗತಿ ಮಕ್ಕಳಿಗೆ ೧೦ ಸಸಿ ನೆಟ್ಟರೆ ೧೦ ಅಂಕಗಳನ್ನು ನೀಡಲಾಗುವುದು ಎಂಬ ಪ್ರಯೋಗ ಮಾಡಲಾಗುತ್ತಿದೆ. ಅವರು ಎಷ್ಟು ಸಸಿಗಳನ್ನು ನೆಡುತ್ತಾರೆ ಹಾಗು ಅದನ್ನು ಹೇಗೆ ಬೆಳೆಸುತ್ತಾರೆ. ಒಂದು ವರ್ಷದಲ್ಲಿ ಅವರ ಸಸಿಗಳನ್ನು ಪೋಷಣೆ ಮಾಡಿದ ಆಧಾರದ  ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಇದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಅಂತ ಸಚಿವ ಆರ್ ಶಂಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ತಾಲೂಕ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್ ಸ್ಭೆರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Please follow and like us:
error