ಜಿಲ್ಲೆಯಲ್ಲಿ ಸಿಲುಕಿರುವ ಕಾರ್ಮಿಕರು ಅವರ ರಾಜ್ಯಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ: ಪಿ. ಸುನೀಲ್ ಕುಮಾರ್


ಕೊಪ್ಪಳ,  : ಕೊಪ್ಪಳ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿರುವ ವಿವಿಧ ರಾಜ್ಯಗಳ ಕಾರ್ಮಿಕರು ಇಚ್ಛೆಪಟ್ಟಲ್ಲಿ ಮರಳಿ ಅವರ ರಾಜ್ಯಗಳಿಗೆ ತೆರಳಲು ಅನುವಾಗಲು ಸರಕಾರವು ವಿವಿಧ ರಾಜ್ಯಗಳ ಪ್ರಮುಖ ನಗರಗಳಿಗೆ ವ್ಯವಸ್ಥೆ ಮಾಡಿರುವ ವಿಶೇಷ ರೈಲುಗಳಲ್ಲಿ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಕಳುಹಿಸಿಕೊಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಸ್ತಿ ನಗರಕ್ಕೆ ಮೇ 17 ರಂದು, ಬಿಹಾರದ ಕಟಿಹಾರಕ್ಕೆ ಮೇ 18 ರಂದು, ಜಾರ್ಖಂಡನ ಹಟಿಯಾ-ರಾಂಚಿ ಜಿಲ್ಲೆಗೆ ಮೇ. 19 ರಂದು ಹುಬ್ಬಳ್ಳಿಯಿಂದ ರೈಲುಗಳು ತೆರಳಿವೆ. ಆ ರೈಲುಗಳಲ್ಲಿ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ತೆರಳಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.
ಈ ರೈಲುಗಳಲ್ಲಿ ಪ್ರಯಾಣಿಸಲು ಇಚ್ಛಿಸುವ ಸಿಲುಕಿಕೊಂಡಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯಾತ್ರಿಕರು ಹಾಗೂ ಇತರರು ಪ್ರಯಾಣದ ಅವಧಿಯಲ್ಲಿ ಮಾಸ್ಕ್ನ್ನು ಅಥವಾ ಮುಖಗವಚು ಕಡ್ಡಾಯವಾಗಿ ಧರಿಸಿ, ವೈಯಕ್ತಿಕವಾಗಿ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರಯಾಣದ ಪೂರ್ವದಲ್ಲಿ, ವೈದ್ಯಕೀಯ ತಪಾಸಣೆಗೆ ಒಳಗಾಗತಕ್ಕದ್ದು. (ಜಿಲ್ಲಾಡಳಿತದಿಂದ ಈ ಕುರಿತು ಕ್ರಮ ಕೈಗೊಳ್ಳಲಾಗಿದೆ). ಕೊಪ್ಪಳದಿಂದ ಹುಬ್ಬಳ್ಳಿಯವರೆಗೆ ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಂತರ ಕಳುಹಿಸಲಾಗುವುದು. ಅದರ ವೆಚ್ಚವನ್ನು ಮತ್ತು ಹುಬ್ಬಳ್ಳಿಯಿಂದ ಅವರ ರಾಜ್ಯಗಳಿಗೆ ತೆರಳುವ ರೈಲ್ವೆ ಪ್ರಯಾಣ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ತಹಶೀಲ್ದಾರರ ಕಛೇರಿ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂರ್ಪಕಿಸುವುದು.
ಜಿಲ್ಲೆಯಲ್ಲಿ ರಾಜ್ಯವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಉತ್ತರ ಪ್ರದೇಶಕ್ಕೆ ತೆರಳುವವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸಿದ್ರಾಮೇಶ್ವರ, ಮೊ. ಸಂ 9606729144, ಬಿಹಾರ ರಾಜ್ಯಕ್ಕೆ ತೆರಳುವವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ನಾರಾಯಣರಡ್ಡಿ ಮೊ.ಸಂ 8722420781, ಜಾರ್ಖಂಡಗೆ ತೆರಳುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪಿ.ಮುತ್ತಪ್ಪ, ಮೊ.ಸಂ. 9449183943 ಇವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆಯ ಹರೀಶ ಜೋಗಿ ಮೊ.ಸಂ. 90351 29484 ಇವರನ್ನು ಸಂಪರ್ಕಿಸಬಹುದು ಎಂದು   ತಿಳಿಸಿದ್ದಾರೆ.

Please follow and like us:
error