ಜಿಲ್ಲೆಯಲ್ಲಿ ರಕ್ಷಾ ಬಂಧನ ಸಂಭ್ರಮ

ಕೊಪ್ಪಳ: ಸಹೋದರ ಸಹೋದರಿಯರ  ಬಾಂಧವ್ಯದ ಸಂಕೇತ ರಕ್ಷಾ ಬಂಧನ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸಲಾಯಿತು.
ನೂಲಹುಣ್ಣಿಮೆಯ ದಿನ ಆಚರಿಸುವ ಈ ರಕ್ಷಾ ಬಂಧನ ಅಂದು ಅಣ್ಣ ತಂಗಿ, ತಮ್ಮ ಅಕ್ಕಂದಿರ ಪ್ರೀತಿಯ ಬಾಂಧವ್ಯವನ್ನು ತೋರಿಸುತ್ತದೆ. ಅಣ್ಣ ಅಥವಾ ತಮ್ಮ ನೂರು ಕಾಲ ಸುಖವಾಗಿರಲಿ  ನಮ್ಮ ಅನುಬಂಧ ಗಟ್ಟಿಯಾಗಿರಲಿ ಅಂತ ಸಹೋದರಿಯರು ರಾಖಿ ಕಟ್ಟುತ್ತಾರೆ.  ನಾಡಿನಾದ್ಯಂತ ಈ ರಕ್ಷಾ ಬಂಧನವನ್ನು ಇಂದು ಆಚರಣೆ ಮಾಡಲಾಯಿತು.  ಸಂಭ್ರಮದಿಂದ ತಮ್ಮ ಸಹೋದರರಿಗೆ ಬಣ್ಣ ಬಣ್ಣದ ರಾಖಿಗಳನ್ನು ಕಟ್ಟಿ ಶುಭ ಹಾರೈಸಿದರು. ಇನ್ನು ರಾಖಿ ಕಟ್ಟಿಸಿಕೊಂಡ ಸಹೋದರರು ಸಹೋದರಿಯರಿಗೆ ಕಾಣಿಕೆ ನೀಡುವ ಮೂಲಕ ಆಶೀರ್ವಾದ ನೀಡಿದರು ಹಾಗು ಪಡೆದುಕೊಂಡ ದೃಶ್ಯಗಳು ಕಂಡುಂದವು. ರಾಖಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಬಗೆಬಗೆಯ ರಾಖಿಗಳ ವ್ಯಾಪಾರವೂ ಜೋರಾಗಿತ್ತು.