ಜಿಲ್ಲೆಯಲ್ಲಿ ಕೆಲ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯತಿ : ಜಿಲ್ಲಾಧಿಕಾರಿ

ಕೊಪ್ಪಳ ಏ. : ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದು ಸರ್ಕಾರದ ಆದೇಶದಂತೆ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಅವುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಎಂದಿನAತೆ ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.

ಕ್ಷೌರಿಕ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳು, ಹೋಟೆಲ್ ಮತ್ತು ಢಾಬಾಗಳು (ಪಾರ್ಸಲ್ ಸೇವೆ ಹೊರತು), ಸಿನಿಮಾ ಥಿಯೇಟರ್ ಮತ್ತು ಮನರಂಜನಾ ಸ್ಥಳಗಳು, ಅಂತರ್ ಜಿಲ್ಲಾ ಮಾನವ ಸಾಗಾಣಿಕೆ, ಬಸ್, ಆಟೋ, ಟ್ಯಾಕ್ಸಿ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು, ವ್ಯಾಯಾಮ ಶಾಲೆಗಳು, ಕ್ಲಬ್‌ಗಳು ಮತ್ತು ರೆಸಾರ್ಟ್ಗಳು, ಸ್ವಿಮ್ಮಿಂಗ್‌ಪೂಲ್, ಉದ್ಯಾನವನಗಳು, ಸಮುದಾಯ ಭವನಗಳು, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಮದುವೆ ಮತ್ತು ಸಾಮೂಹಿಕ ಸಮಾರಂಭಗಳು, ಗುಟ್ಕಾ, ತಂಬಾಕು ಅಂಗಡಿಗಳು, ಲಾಡ್ಜ್ಗಳು, ಬೀದಿ ಬದಿಯ ಚಾಟ್ಸ್ ಮತ್ತು ಟೀ ಅಂಗಡಿಗಳು, ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ ಈ ಎಲ್ಲಾ ಚಟುವಟಿಕೆಗಳಿಗೆ ವಿನಾಯಿತಿ ಇರುವುದಿಲ್ಲ.

ಈ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತಹ ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡತಕ್ಕದ್ದು. ವಿಶೇಷವಾಗಿ ದಿನಸಿ ವ್ಯಾಪಾರ ಮಾಡುವಂಥ ಅಂಗಡಿ ಮಾಲೀಕರು ತಮ್ಮ ಅಂಗಡಿಗಳಲ್ಲಿ ಶೇ. 33 ರಷ್ಟು ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುವಂತೆ ಮತ್ತು ಸ್ಯಾನಿಟೈಜರ್, ಮಾಸ್ಕ್ಗಳನ್ನು ಬಳಸಿಕೊಂಡು ವ್ಯಾಪಾರ ಮಾಡತಕ್ಕದ್ದು ಹಾಗೂ ತಮ್ಮ ಬಳಿ ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಎಲ್ಲಾ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಗ್ರಾಹಕರಿಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕನಿಷ್ಠ 1 ಮೀಟರ್‌ನಷ್ಟು ಗುರುತುಗಳನ್ನು ಮಾಡಿ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಅಂಗಡಿಗಳ ಮುಂದೆ 5 ಜನಕ್ಕಿಂತ ಹೆಚ್ಚು ಜನರು ಸೇರದಂತೆ ಕ್ರಮ ವಹಿಸಬೇಕು. ಗರ್ಭಿಣಿಯರು/ಬಾಣಂತಿಯರು, 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದ ಒಳಗಿನ ಮಕ್ಕಳು ವಿನಾಕಾರಣ ಮನೆಯಿಂದ ಹೊರಗಡೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ದಿನಸಿ ವರ್ತಕರು ಸಾಧ್ಯವಾದಷ್ಟು ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನು ತಲುಪಿಸತಕ್ಕದ್ದು. ತರಕಾರಿ ವರ್ತಕರು ಕಡ್ಡಾಯವಾಗಿ ಮನೆ ಮನೆಗಳಿಗೆ ತೆರಳಿ ಪೂರೈಸಬೇಕು. ವ್ಯಾಪಾರಸ್ಥರು ಪ್ರತಿ ದಿನ ರಾತ್ರಿ 9 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತರೆಯಬೇಕು.

ಅಂತರ್ ಜಿಲ್ಲಾ ಚೆಕ್‌ಪೋಸ್ಟ್ಗಳಲ್ಲಿ ಅನುಮತಿ ಪತ್ರವಿಲ್ಲದೆ (ಪಾಸ್) ಯಾವುದೇ ಮಾನವ ಸಾಗಾಣಿಕೆಗೆ ಅಥವಾ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಜಿಲ್ಲೆಯ ಒಳಗಡೆ ಸಂಚರಿಸುವಾಗ ದ್ವಿಚಕ್ರ ವಾಹನದಲ್ಲಿ ಕೆವಲ ಒಬ್ಬರು ಮಾತ್ರ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಮತ್ತು ಹಿಂದಿನ ಸೀಟಿನಲ್ಲಿ ಒಬ್ಬ ಸಹ ಪ್ರಯಾಣಿಕ ಮಾತ್ರ ಸಂಚರಿಸತಕ್ಕದ್ದು. ಶವ ಸಂಸ್ಕಾರದ ಸಮಯದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರಬಾರದು.

ಅನಗತ್ಯವಾಗಿ ಜನ ಜಂಗುಳಿ ಉಂಟುಮಾಡಿದರೆ ಮತ್ತು ಷರತ್ತು ಉಲ್ಲಂಘಿಸಿದರೆ ಅಂತವರ ವಿರುದ್ಧ ಸೋಂಕು ಹರಡಲು ಕಾರಣೀಕರ್ತರಾಗುತ್ತಾರೆಂದು ಭಾವಿಸಿ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ಹಾಗೂ ಭಾರತ ದಂಡ ಸಂಹಿತೆ 1860 ರ ಕಲಂ 188 ರನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು.

ಜಿಲ್ಲಾಡಳಿತ ವತಿಯಿಂದ ಕೇವಲ ತುರ್ತು ವೈದ್ಯಕೀಯ ಸೇವೆಗಳು ಮತ್ತು ಸಾವುಗಳು ಉಂಟಾದಲ್ಲಿ ಮಾತ್ರ ಅಂತರ್ ಜಿಲ್ಲಾ ಪಾಸ್‌ಗಳನ್ನು ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕಾಗಿ ಪಾಸ್‌ಗಳನ್ನು ವಿತರಿಸುವ ಅವಕಾಶವಿರುವುದಿಲ್ಲ. ವಿನಾಯಿತಿ ಇರುವ ಸೇವೆಗಳು ಅಥವಾ ಕೈಗಾರಿಕಾ ಸಂಸ್ಥೆಗಳು ಮತ್ತು ಸರ್ಕಾರದಿಂದ ವಿನಾಯಿತಿ ಪಡೆದ ಇತರೆ ಸೇವೆಗಳಿಗೆ ಸಂಬAಧಿಸಿದAತೆ ಆಯಾ ಸಂಸ್ಥೆಗಳಿAದ ಪಡೆದ ಗುರುತಿನ ಚೀಟಿಗಳನ್ನು ತೋರಿಸಿ ಸಂಚರಿಸಬಹುದು. ಇಂತಹ ಸೇವೆಗಳಿಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ರೀತಿಯ ಪಾಸ್‌ಗಳ ಅವಶ್ಯಕತೆ ಇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error