ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೊದಲ ದಿನ ಸುಸೂತ್ರವಾಗಿ ಪರೀಕ್ಷೆ ನಡೆದಿದೆ: ಪಿ.ಸುನೀಲ್ ಕುಮಾರ್

ಕೊಪ್ಪಳ  ಜಿಲ್ಲೆಯಲ್ಲಿ ಇಂದು ನಡೆದ ಎಸ್.ಎಸ್.ಎಲ್.ಸಿ ಇಂಗ್ಲೀಷ್ ಪರೀಕ್ಷೆಯು ರಾಜ್ಯಕ್ಕೆ ಮಾದರಿ ಎಂಬAತೆ ಯಾವುದೇ ಅಹಿತಕರ ಘಟನೆಗಳು ನಡೆಯದ ಅತ್ಯಂತ ಸುಸೂತ್ರವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೋಂದಾವಣಿಗೊAಡ ಒಟ್ಟು 22,170 ವಿದ್ಯಾರ್ಥಿಗಳ ಪೈಕಿ 21,004 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದು, 1,166 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ. ಒಟ್ಟು ನೊಂದಾವಣಿಯಾದ 21,170 ರೆಗ್ಯೂಲರ್ ವಿದ್ಯಾರ್ಥಿಗಳ ಪೈಕಿ 20,225 ವಿದ್ಯಾರ್ಥಿಗಳು ಮತ್ತು 1,000 ಖಾಸಗಿ ವಿದ್ಯಾರ್ಥಿಗಳ ಪೈಕಿ 776 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಜಿಲ್ಲೆಯಲ್ಲಿ  ಒಟ್ಟು 63 ಮುಖ್ಯ ಪರೀಕ್ಷಾ ಕೇಂದ್ರಗಳು, 17 ಉಪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ವ್ಯವಸ್ಥಿತವಾಗಿ ಸುಗಮವಾಗಿ ನಡೆಯಿತು. ಜಿಲ್ಲಾಡಳಿತವು ಪ್ರತೀ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ 80 ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ / ವೀಕ್ಷಕರನ್ನಾಗಿ ನೇಮಿಸಲಾಗಿತ್ತು. 4 ರಿಂದ 6 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಇವರುಗಳಿಂದ ಬೆಳಿಗ್ಗೆ 10.30 ಕ್ಕೆ ಪರೀಕ್ಷಾ ಕೇಂದ್ರದ ಸಿದ್ಧತೆಯ ಕುರಿತಾದ ಪ್ರಾಥಮಿಕ ವರದಿ, ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ನಡೆಯುತ್ತಿರುವ ಬಗ್ಗೆ 2ನೇ ವರದಿ ಹಾಗೂ 3.30 ಕ್ಕೆ ಎಲ್ಲಾ ಮಕ್ಕಳು ಪರೀಕ್ಷೆಯನ್ನು ಮುಗಿಸಿ ಸುಗಮವಾಗಿ ಅವರ ಮನೆಗಳಿಗೆ ತೆರಳಿರುವ ಕುರಿತು ಮೂರನೇ ವರದಿಯನ್ನು ಜಿಲ್ಲಾಡಳಿತವು ಪಡೆದಿದೆ.
ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಕೆ.ಎಸ್.ಆರ್.ಟಿ.ಸಿ.ಯ 49 ಗುತ್ತಿಗೆ ಬಸ್‌ಗಳು ಹಾಗೂ 149 ವಿವಿಧ ಮಾರ್ಗಗಳ ಬಸ್‌ಗಳು ಸೇರಿ ಒಟ್ಟು 198 ಬಸ್‌ಗಳ ಮುಖಾಂತರ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಹಾಗೂ ಮರಳಿ ಮನೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳ ಪ್ರಯಾಣವನ್ನು ಸುಸೂತ್ರವಾಗಿ ನಡೆಸಲು ಪ್ರತೀ ಬಸ್‌ಗೆ ಹಾಗೂ ಮಾರ್ಗಕ್ಕೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಲಾಗಿತ್ತು.
ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಾಗಿನಿಂದ ಪರೀಕ್ಷೆ ಮುಗಿದು ಮನೆಗೆ ತಲುಪುವವರೆಗೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆಗೆ ಹೆಚ್ಚಿನ ಒತ್ತು ನೀಡಿ, ಅದನ್ನು ಎಲ್ಲಾ ಮಕ್ಕಳು ಅಧಿಕಾರಿಗಳು, ಪಾಲನೆ ಮಾಡುವುದನ್ನು ಖಾತ್ರಿ ಪಡಿಸಿಕೊಳ್ಳಲಾಯಿತು. ಕಂಟೈನ್‌ಮೆAಟ್ ಪ್ರದೇಶಗಳಿಂದ ಬರುವ ಮಕ್ಕಳನ್ನು ವಿಶೇಷ ಬಸ್‌ಗಳ ಮೂಲಕ ವಿಶೇಷವಾಗಿ ಪ್ರತ್ಯೇಕಿಸಲ್ಪಟ್ಟ ಕೊಠಡಿಗಳಲ್ಲಿ ಪರೀಕ್ಷೆಗೆ ಕೂರಿಸಲಾಯಿತು.
ಗಂಗಾವತಿ ತಾಲ್ಲೂಕಿನಲ್ಲಿ ನೋಂದಣಿಯಾದ 6,412 ವಿದ್ಯಾರ್ಥಿಗಳಲ್ಲಿ 6,193 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 219 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕೊಪ್ಪಳ ತಾಲ್ಲೂಕಿನಲ್ಲಿ ನೋಂದಣಿಯಾದ 6,416 ವಿದ್ಯಾರ್ಥಿಗಳಲ್ಲಿ 5959 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 457 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕುಷ್ಟಗಿ ತಾಲ್ಲೂಕಿನಲ್ಲಿ ನೋಂದಣಿಯಾದ 4,161 ವಿದ್ಯಾರ್ಥಿಗಳಲ್ಲಿ, 4,064 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 97 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲ್ಲೂಕಿನಲ್ಲಿ ನೋಂದಣಿಯಾದ 4,181 ವಿದ್ಯಾರ್ಥಿಗಳಲ್ಲಿ, 4,009 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 172 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇತರ ಜಿಲ್ಲೆಯಿಂದ, ರಾಜ್ಯಗಳಿಂದ ವಲಸೆ ಬಂದವರಲ್ಲಿ ಗಂಗಾವತಿಯಲ್ಲಿ 171, ಕೊಪ್ಪಳದಲ್ಲಿ 57, ಕುಷ್ಟಗಿಯಲ್ಲಿ 155 ಒಟ್ಟು 383 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿಯಾದ ಒಟ್ಟು 21,170 ವಿದ್ಯಾರ್ಥಿಗಳಲ್ಲಿ 20,225 ವಿದ್ಯಾರ್ಥಿಗಳು ಬರೆದಿದ್ದು, 945 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

Please follow and like us:
error