ಕೊಪ್ಪಳದಲ್ಲಿ ಮತ್ತೊಂದು ಪಾಜಿಟಿವ್ ಪ್ರಕರಣ ಕನ್ಪರ್ಮ : ಜಿಲ್ಲೆಗೆ ಮತ್ತೊಂದು ಶಾಕ್

ಕೊಪ್ಪಳ :   ಗ್ರೀನ್ ಜೋನನತ್ತ ಸಾಗಿದ್ದ ಕೊಪ್ಪಳ ಜಿಲ್ಲೆಗೆ ಮತ್ತೊಂದು ಶಾಕ್ ಎದುರಾಗಿದ್ದು ಮತ್ತೊಂದು ಪಾಜಿಟಿವ್ ಪ್ರಕರಣ ದೃಡವಾಗಿದೆ. ಮುಂಬೈಯಿಂದ ಕನಕಗಿರಿಗೆ ಬಂದ ವ್ಯಕ್ತಿಗೆ ಪಾಜಿಟಿವ್ ದೃಡವಾಗಿದ್ದು ಮುಂಬೈನ ದಿವಾ ಏರಿಯಾದಿಂದ ಖಾಸಗಿ ವಾಹನದಲ್ಲಿ ತಂದೆ, ತಾಯಿಯೊಡನೆ ಕೊಪ್ಪಳ ಜಿಲ್ಲೆಗೆ ಈ ೨೮ ವರ್ಷದ ವ್ಯಕ್ತಿ ಬಂದಿದ್ದ.  ಬಂದ ನಂತರ ನೇರವಾಗಿ ಕನಕಗಿರಿಯ ಸಾಂಸ್ಥಿಕ ಕ್ವಾರಂಟೈನ್ ಗೆ ಸೇರಿಸಲಾಗಿತ್ತು. ಅಲ್ಲಿ ವ್ಯಕ್ತಿಯ ಸ್ವಾಬ್ ಟೆಸ್ಟ್ ಮಾಡಲಾಗಿದ್ದು ನಿನ್ನೆ ಸಾಯಂಕಾಲ ಪಾಜಿಟಿವ್ ದೃಡವಾಗಿದೆ. ನಾಲ್ಕು ಜನ ಪ್ರಾಥಮಿಕ ಸಂಪರ್ಕಿತರು ಹಾಗೂ ೫ ಜನ ದ್ವಿತೀಯ ಸಂಪರ್ಕಿತರು ಪತ್ತೆ ಇನ್ನುಳಿದ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಚಾಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಟ್ರಾವೆಲ್ ಹಿಸ್ಟರಿ :

ಈ ಸದ್ಯ ಮಾಹಿತಿ ಪ್ರಕಾರ 00೪0-19 ಸೋಂಕಿತ ವ್ಯಕ್ತಿಯ(ಪುರುಷು ವಯಸ್ಸು228, ಇವರು ದಿ.30/05/2020ರಂದು

 

ಮುಂಬೈನ ದಿವಾ ಏರಿಯಾದಿಂದ `ಚಾಲಕನೊಂದಿಗೆ ಖಾಸಗಿ ವಾಹನದಲ್ಲಿ ತಂದೆ. ಮತ್ತು ತಾಯಿಯೊಡನೆ ದಿ31/05/2020ರಂದು ಕೊಪ್ಪಳಕ್ಕೆ ಬಂದಿರುತ್ತಾರೆ. ಮುಂಬೈನ ದಿವಾ ವಿರಿಯಾದಲ್ಲಿಯೂ ಕೂಡಾ ಇವರು 15 ದಿನದ ಕ್ವಾರ್ಯಂಟೈನ್‌ಲ್ಲಿರುತ್ತಾರೆ.

ದಿ: 3/%5/2020ರಂದು ನೇರವಾಗಿ ಕನಕಗಿರಿ ಸಾಂಸ್ಕಿಕ ಕ್ಯಾರಂಟೈನ್‌ನಲ್ಲಿರುತ್ತಾರೆ. ದಿ:02/6/2020ರಂದು ಗಂಗಾವತಿಯಲ್ಲಿ

ಸ್ಟಾಬ್ ಟೆಸ್ಟ್‌ ಮಾಡಲಾಗಿದ್ದು, ದಿ:05/06/2020ರಂದು ಸಾಯಂಕಾಲ ಕೊವಿಡ್ -19 ಧೃಡಪಟ್ಟಿದ್ದು, ಅದೇ ದಿನ` ಸೊಂಕಿತ ವ್ಯಕ್ತಿಯನ್ನು ಕೋವಿಡ-19 ಆಸ್ಪತ್ರೆ ಕೊಪ್ಪಳಕ್ಕೆ ಆಂಬ್ಯುಲೆನ್ಸ್‌ ಮುಖಾಂತರ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿ ಅವರ ತಂದೆ, ತಾಯಿ ಮತ್ತು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಪಕ್ಕದ ರೂಮಿನಲ್ಲಿರುವ ಸದಸ್ಯ ಮತ್ತು ಇವರನ್ನು ನೋಡಲು ಆಗಮಿಸಿದ ಅಜ್ಜಿ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳಾಗಿರುತ್ತಾರೆ. ಒಟ್ಟು ಪ್ರಾಥಮಿಕ ಸಂಪರ್ಕಿಕರು 4 ಜನ.

ಪಕ್ಕದ ರೂಮಿನ ವ್ಯಕ್ತಿಗೆ ಊಟ ಕೊಡಲು ಅವರ ಅಣ್ಣ ಬಂದಿರುವ ಕಾರಣ ಆವರನ್ನು ಮತ್ತು ಅಜ್ಜಿಯ ಮನೆಯಲ್ಲಿರುವ 4 ಜನರನ್ನು ದ್ವಿತೀಯ ಸಂಪರ್ಕಿಕರರಾಗಿರುತ್ತಾರೆ. ಒಟ್ಟು ದ್ವಿತೀಯ ಸಂಪರ್ಕಿತರು 5 ಜನ. ಪತ್ತೆ ಮಾಡಲಾಗಿದ್ದು, ಇನ್ನೂ ಪ್ರಾಥಮಿಕ ಸಂಪರ್ಕಿಕರ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

Please follow and like us:
error