ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಸ್ಥಾನಕ್ಕೆ ಮಾರುತೇಶ ಅಂಗಡಿ ಆಯ್ಕೆ

ಕೊಪ್ಪಳ, ೨೮- ನಗರದ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಸ್ಥಾನಕ್ಕೆ ಪಟ್ಟಣ ಪತ್ತಿ ನ ಸಹಕಾರಿ ಸಂಘ ಕ್ಷೇತ್ರದಿಂದ ಮಾರುತೇಶ ಅಂಗಡಿ ಒಂದು ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ರವಿವಾರ ನಿರ್ದೇಶಕ ಸ್ಥಾನ ಕ್ಕೆ ಜಿಲ್ಲಾ ಸಹಕಾರಿ ಯುನಿಯನ್ ಕಚೇರಿಯಲ್ಲಿ ಮತದಾನ ಜರು ಗಿತು.
ರಾಜಶೇಖರ ಆಡೂರ ೩ಮ ತಗಳನ್ನು ಪಡೆದರೆ ಮಾರುತೇಶ ಅಂಗಡಿ ನಾಲ್ಕು ಮತಗಳನ್ನು ಪಡೆದು ಒಂದು ಮತದ ಅಂತರದಲ್ಲಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶೇಖರಗೌಡ ಮಾಲಿಪಾಟಿಲ, ದೊಡ್ಡಯ್ಯ ಗತ್ರಟಗಿ, ಶಂಕ್ರಪ್ಪ ಅಂಗಡಿ, ಪ್ರಸನ್ನ ಗಡಾದ, ಡಾ. ಶ್ರೀನಿವಾಸ ಹ್ಯಾಟಿ, ಗವಿಶ ಹುಡೇಜಾಲಿ, ಮಂಜುನಾಥ ಅಂಗಡಿ, ರಾಜಶೇಖರ ಅಂಗಡಿ, ಟಿ.ಹೆಚ್. ಸತ್ಯನಾರಾಯಣ, ತೋಟಪ್ಪ ಕಾಮನೂರ, ನೀಲಕಂಠಯ್ಯ ಹಿರೇಮಠ, ಸಂಗಮೇಶ ಡಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Please follow and like us:
error