ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಎಂ.ಎ.ಪಾಟೀಲರಿಗೆ ಬಿಳ್ಕೊಡುಗೆ ಕಾರ್ಯಕ್ರಮ

ಕೊಪ್ಪಳ :   ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾ ಸರ್ಕಾರಿ ಅಭಿಯೋಜಕರಾದ   ಎಂ. ಎ ಪಾಟೀಲ ರವರಿಗೆ ಹೃದಯ ಸ್ಪರ್ಶಿ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸನ್ಮಾನವನ್ನು ಸ್ವೀಕರಿಸಿ ಎಂ. ಎ ಪಾಟೀಲ ಮಾತನಾಡುತ್ತಾ ನಾನು ಸಮಾರು ೧೮ ವರ್ಷಗಳ ಕಾಲ ಕೊಪ್ಪಳದಲ್ಲಿ ಸೇವೆಯನ್ನು ಸಲ್ಲಿಸಿರುತ್ತೇನೆ. ಎಲ್ಲ ವಕೀಲರ ಸಹಕಾರದಿಂದ ಮತ್ತು ನ್ಯಾಯಾದೀಶರ ಸಹಕಾರದಿಂದ ನಿಷ್ಠೆ, ಪ್ರಮಾಣಿಕವಾಗಿ ಸೇವೆಯನ್ನು ಸಲ್ಲಿಸಿರುತ್ತೇನೆ ಈ ಸೇವೆಯಿಂದ ನನಗೆ ತೃಪ್ತಿಯಾಗಿದೆ ನಾನು ಬೇರೆ ವ್ಯಕ್ತಿಗೆ ಹೊಲಿಕೆ ಮಾಡಿಕೊಳ್ಳುವುದಿಲ್ಲ. ಈ ನೆಲದ ಋಣ ಮತ್ತು ಶ್ರೀ ಗವಿಸಿದ್ದೇಶ್ವರ ಕೃಪಾರ್ಶೀವಾದಿಂದ ಸೇವೆಯನ್ನು ಸಲ್ಲಿಸಿರುತ್ತೇನೆ ಈ ಬೀಳ್ಕೊಡುಗೆ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಅಭಿನಂದಿಸಿದರು. ಕುಟುಂದ ಸಮೇತ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಸಂತೋಷವಾಗುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ  ಸಂಜೀವ್ ವಿ. ಕುಲಕರ್ಣಿ, ಹಿರಿಯ ಸಿವಿಲ್ ನ್ಯಾಯಾದೀಶರಾದ ಕುಮಾರ್ ಎಸ್, ಹಿರಿಯ ಸಿವಿಲ್ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಗೌರವಾನ್ವಿತ ಟಿ. ಶ್ರೀನಿವಾಸ, ಪ್ರಧಾನ ಸಿವಿಲ್ ನ್ಯಾಯಾದೀಶರಾದ ಹರೀಶ್ ಆರ್. ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ಮನು ಶರ್ಮಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್ ಅಲಿ ಎಸ್, ಕೊಪ್ಪಳದ ಎಸಿಬಿಯ ಡಿ.ವೈ.ಎಸ್.ಪಿ ರುದ್ರೇಶ ಉಜ್ಜನಕೊಪ್ಪ, ಕೊಪ್ಪಳದ ಡಿ.ವೈ.ಎಸ್.ಪಿಯವರಾದ ಎಸ್.ಎಂ. ಸಂದಿಗವಾಡ, ಪ್ರಭಾರಿ ಜಿಲ್ಲಾ ಸರ್ಕಾರಿ ಅಭಿಯೋಜಕರಾದ ನಾಗರಾಜ ಆಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಹೆಚ್. ಇಂಗಳದಾಳ, ಪ್ರಧಾನ ಕಾರ್ಯದರ್ಶೀ ಕೊಟ್ರೇಶ ಯು. ಪೋಚಗುಂಡಿ, ಜಂಟಿ ಕಾರ್ಯದರ್ಶಿ ಕೆ.ಎಸ್ ಜಮಾಪೂರ, ಖಜಾಂಚಿ ಡಿ. ಲಂಕೇಶ, ಹೆಚ್. ಹೆಚ್. ಮುರಡಿ, ಆಯ್.ವಿ. ಪತ್ತಾರ, ಸಂಧ್ಯಾ ಮಾದಿನೂರು, ಮುಟಗಿ, ಬಿ. ಶರಣಪ್ಪ, ಶಂಕ್ರಪ್ಪ ಸುರಪುರ, ಎಸ್ ರುದ್ರಯ್ಯ, ಉಮೇಶ ಮಾಳೆಕೊಪ್ಪ, ರಮೇಶ ಅಳವಂಡಿ, ಜಿ.ಸಿ. ಹಮ್ಮಿಗಿ, ಡಿ.ಜಿ. ಬಾಗಲಕೋಟೆ, ಆರ್.ವಿ. ಸಿಗನಳ್ಳಿ, ಜಿ.ಎಫ್. ಹಮ್ಮಿಗಿ, ಸಿದ್ದಾಂತಿ, ಎಸ್.ಎಂ. ದೇಸಾಯಿ, ಪ್ರಕಾಶ ಆನಂದಳ್ಳಿ, ಮಂಜುನಾಥ ಉಮಚಗಿ, ಎಸ್.ಎಂ. ಮೆಣಸಿನಕಾಯಿ, ಎಂ.ಎಂ. ಚಿತವಾಡಗಿ ಇತರರು ಉಪಸ್ಥಿತರಿದ್ದರು.
ಹಿರಿಯ ವಕೀಲರಾದ ಆರ್.ಬಿ. ಪಾನಘಂಟಿ ಸ್ವಾಗತಿಸಿದರು, ವಕೀಲರಾದ ವಿ.ಎಂ. ಭೂಸನೂರಮಠ ರವರು ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲರ ಪರಿಚಯ ಕರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ವಿ. ಕಣವಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.