ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್ ಖಾದ್ರಿ ಅಧಿಕಾರ ಸ್ವೀಕಾರ


ಕೊಪ್ಪಳ, ಜೂ. ೨೦ : ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್ ಖಾದ್ರಿ ಅವರು ಗುರುವಾರದಂದು ಅಧಿಕಾರ ಸ್ವೀಕರಿಸಿದರು.
ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರನ್ನಾಗಿ ಗಂಗಾವತಿಯ ಜಾಮೀಯ ಮಸ್ಜೀದ್ ಅಧ್ಯಕ್ಷರಾದ ಸೈಯದ್ ನಾಸಿರುದ್ದೀನ್ ಖಾದ್ರಿ ಇವರನ್ನು ರಾಜ್ಯ ಸರ್ಕಾರವು ನೇಮಿಸಿ ಆದೇಶ ಹೊರಡಿಸಿದ್ದು, ಸೈಯದ್ ನಾಸಿರುದ್ದೀನ್ ಖಾದ್ರಿರವರು ಸರ್ಕಾರದ ಆದೇಶ ಪತ್ರವನ್ನು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ಸಲ್ಲಿಸಿ ಜಿಲ್ಲಾ ವಕ್ಫ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡರು. ಜಿಲ್ಲಾ ವಕ್ಫ ಅಧಿಕಾರಿ ಮಕ್ಬುಲ್‌ಪಾಶಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಹೂ ಗುಚ್ಚ ನೀಡಿ ಜಿಲ್ಲಾ ವಕ್ಫ ಬೋರ್ಡ್ ನೂತನ ಅಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು.

Please follow and like us:
error