ಜಿಲ್ಲಾ ಮುಸ್ಲಿಂ,ಪ್ರಗತಿಪರ ಹೋರಾಟಗಾರರಿಂದ ಪ್ರತಿಭಟನೆ

ಇದೇ ತಿಂಗಳ ೧೫ರಂದು ಶುಕ್ರವಾರ ಮದ್ಯಾಹ್ನ ೩ ಗಂಟೆಗೆ ಕೊಪ್ಪಳದಲ್ಲಿ ಜಿಲ್ಲಾ ಮುಸ್ಲಿಂ,ಪ್ರಗತಿಪರ ಹೋರಾಟಗಾರರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗಡಿಯಾರ ಕಂಬದಂದ ಅಶೋಕ ಸರ್ಕಲ್ ವರೆಗೆ ಮೆರವಣಿಗೆ ನಡೆಯಲಿದೆ. ರೋಹಿಂಗ್ಯಾ ಮುಸ್ಲಿಂಮರ ನರಮೇಧ, ಗೌರಿ ಲಂಕೇಶ ಹತ್ಯೆ ಖಂಡಿಸಿ ಹಾಗೂ ಆರ್ ಎಸ್ ಎನ್ ಸಿಂಗ್ ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತದೆ. ಈ ಕುರಿತು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅದಿಲ್ ಪಟೇಲ್, ಸಲೀಮ್ ಮಂಡಲಗೇರಿ ಮಾತನಾಡಿದರು. ಮುಸ್ಲಿಂಮರ ನರಮೇಧವನ್ನು ತಡೆಯಲು ಕೇಂದ್ರ ಸರಕಾರ ಒತ್ತಡವನ್ನು ಹೇರಬೇಕು, ಭಾರತದಲ್ಲಿರುವ ರೋಹಿಂಗ್ಯಾ ಮುಸ್ಲೀಮರಿಗೆ ನ್ಯಾಯ ಕೊಡಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು. ಲಾಯಕ್ ಅಲಿ, ಯೂಸೂಪ್, ಸಲಿಂ ಉಪಸ್ಥಿತರಿದ್ದರು.

Please follow and like us:
error