ಜಿಲ್ಲಾ ಮಹಿಳಾ ಕಾಂಗ್ರೇಸ್ ವತಿಯಿಂದ ಇಂದಿರಾ ನಮನ

ಕೊಪ್ಪಳ: ೩೧ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ವತಿಯಿಂದ ಇಂದಿರಾ ನಮನ ಕಾರ್ಯಕ್ರಮವನ್ನು ಆಯೋಜಿಲಸಾಗಿತ್ತು.
ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಭಾವಿಕಟ್ಟಿಯವರು ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡುತ್ತಾ ರಾಷ್ಟ್ರದ ಪ್ರಧಾನಿಯಾಗಿದ್ದ ದಿ|| ಶ್ರೀಮತಿ ಇಂದಿರಾಗಾಂದಿಯವರು ರಾಷ್ಟ್ರೀಯ ಸಮಗ್ರತೆಗೆ ಮತ್ತು ಭಾವೈಕ್ಯತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಸಿದ ಮಹಿಳೆಯರಿಗೆ ಪ್ರೇರಣೆಯಾದಂತಹ ಶ್ರೀಮತಿ ಇಂದಿರಾ ಗಾಂಧಿಯವರು ರಾಷ್ಟ್ರಕಂಡ ಉಕ್ಕಿನ ಮಹಿಳೆಯಾಗಿದ್ದರು ಎಂದರು.
ಇದೇ ಸಮದರ್ಭದಲ್ಲಿ ೧೦೦ ಹಣತೆಗಳನ್ನು ಬೆಳಗಿಸುವುದರ ಮೂಲಕ ಅವರಿಗೆ ಶ್ರಧ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಪಧಾಧಿಕಾರಿಗಳಾದ ನೂರುಜಹಾನ ಬೇಗಂ, ಚನ್ನಮ್ಮ ಮುಳುಗುಂದ, ಉಮಾ ಜನಾದ್ರಿ, ಮಹಾದೇವಿ ಮಡಿವಾಳರು, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಪರವೀಣ್ ಮನಿಯಾರ, ತಾಲೂಕು ಮಹಿಳಾ ಪಧಾಧಿಕಾರಿಗಳಾದ ಸವಿತಾ ಗೋರಂಟ್ಲಿ, ಯಶೋಧ ಮುರಡಿ, ಮಂಜುಳಾ ಹುಲ್ಲೂರು, ಪಾರ್ವತಿ ಹುರಕಡ್ಲಿ, ಕಸ್ತೂರಮ್ಮ, ಯತ್ನಟ್ಟಿ ಇನ್ನೀತರರು ಉಪಸ್ಥಿತರಿದ್ದರು.

Please follow and like us:
error