ಜಿಲ್ಲಾ ಮಟ್ಟದ ಪ್ರಶಸ್ತಿ : ರಾಜ್ಯ ಮಟ್ಟಕ್ಕೆ ಆಯ್ಕೆ

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು   ದಿ  ೦೧, ೦೨ ರಂದು ಸರಕಾರಿ ಪದವಿ ಪೂರ್ವ ಕಾಲೇಜು ಬಿನ್ನಾಳದಲ್ಲಿ ಜರುಗಿದ ೨೦೧೮-೧೯ ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಬಾಲಕರ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಂಟನ್ ತಂಡ ಪ್ರಥಮ ಸ್ಥಾನ, ಟೇಬಲ್ ಟೆನ್ನಿಸ್ ತಂಡ ಪ್ರಥಮ ಸ್ಥಾನ, ಕುಸ್ತಿಯಲ್ಲಿ ಮಾಂತೇಶ, ಶ್ರೀಕಾಂತ, ಚೇತನ ಪ್ರಥಮ ಸ್ಥಾನ, ಜುಡೋದಲ್ಲಿ ಮಾಂತೇಶ ಪ್ರಥಮ ಸ್ಥಾನ, ಹೈ ಜಂಪ್‌ನಲ್ಲಿ ವೀರೇಶ ದ್ವಿತೀಯ ಸ್ಥಾನ, ಸರಪಳಿಗುಂಡು ಎಸೆತದಲ್ಲಿ ಪ್ರಶಾಂತ ದ್ವಿತೀಯ ಸ್ಥಾನ, ಭಲ್ಲೆ ಎಸೆತದಲ್ಲಿ ತಿರುಪತಿ ತೃತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ಚೆಸ್‌ನಲ್ಲಿ ಸುಷ್ಮಾ ಎಸ್, ಶ್ವೇತಾ, ಶಿವಲೀಲಾ ಪ್ರಥಮ ಸ್ಥಾನ, ಹೈ ಜಂಪ್‌ನಲ್ಲಿ ಅಕ್ಷತಾ ಪಾಟೀಲ್ ಪ್ರಥಮ ಸ್ಥಾನ, ಜಾವಲಿನ್ ಥ್ರೋದಲ್ಲಿ ಲಕ್ಷ್ಮವ್ವ ಪ್ರಥಮ ಸ್ಥಾನ, ೩೦೦೦ಮೀ ಓಟದಲ್ಲಿ ಜ್ಯೋತಿ ಜಿ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಸರೋಜಾ ಗಾಜಿ ದ್ವಿತೀಯ ಸ್ಥಾನ, ಗುಡ್ಡಗಾಡು ಓಟದಲ್ಲಿ ಲಕ್ಷ್ಮವ್ವ ದ್ವಿತೀಯ ಸ್ಥಾನ, ೪*೧೦೦ಮೀ ರಿಲೇ ತಂಡ ದ್ವಿತೀಯ ಸ್ಥಾನ, ಗುಂಡು ಎಸೆತದಲ್ಲಿ ಸರೋಜಾ ಗಾಜಿ ತೃತೀಯ ಸ್ಥಾನವನ್ನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳಿಗೆ ಆಡಳತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ಸಮಸ್ತ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Please follow and like us:
error