ಜಿಲ್ಲಾ ಪೊಲೀಸ್ ವಾಷಿ೯ಕ ಕ್ರೀಡಾಕೂಟ ಉದ್ಘಾಟನೆ

ಕೊಪ್ಪಳ : ಜಿಲ್ಲಾ ಪೊಲೀಸ್ ವಾಷಿ೯ಕ ಕ್ರೀಡಾಕೂಟ ಉದ್ಘಾಟನೆ. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸಂಜೀವ ಕುಲಕರ್ಣಿ

ಕೊಪ್ಪಳದ ಪೊಲೀಸ್ ಕವಾಯತು ಮೈದಾನದಲ್ಲಿ ಚಾಲನೆ. ಬಲೂನ್ ಹಾಗೂ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ. ಕ್ರೀಡಾಕೂಟ ಜ್ಯೋತಿ ಬೆಳಗಿಸಿ, ಪ್ರತಿಜ್ಞಾವಿಧಿ ಬೋಧನೆ

ಚಾಲನೆ ನೀಡಿ ಮಾತನಾಡಿದ ಸಂಜೀವ ಕುಲಕರ್ಣಿ

ಪೊಲೀಸ್ ಕೆಲಸ ೨೪*೭ ಮಾಡುವಂತದ್ದು. ಅವರಿಗೆ ಆರೋಗ್ಯ ಕೂಡ ಬಹಳ ಮುಖ್ಯ. ಕೆಲಸದ ಒತ್ತಡದ ಜೊತೆಗೆ ಇಂತಹ ಕ್ರೀಡಾ ಕೂಟದಲ್ಲಿ ಭಾಗವಹಿಸುವುದು ಮುಖ್ಯ. ಈಗಾಗಲೇ ಕೊಪ್ಪಳ ಜಿಲ್ಲಾ ಪೊಲೀಸರು ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಭಾಗವಹಸಿದ್ದಾರೆ. ಹಲವಾರು ಪ್ರಶಸ್ತಗಳನ್ನು ತಂದಿದ್ದಾರೆ. ಎಲ್ಲಾ ಜಿಲ್ಲೆಗಳಿಗಿಂತ ಕೊಪ್ಪಳ ಜಿಲ್ಲಾ ಪೊಲೀಸರು ವಿಶೇಷ. ಕ್ರಿಯಾಶೀಲವಾಗಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಾರೆ

ಈ ಮೂರು ದಿನಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತರ ಪ್ರದರ್ಶನ ಮಾಡಿ ಅಂತ ಹೇಳಿದರು

ಎಸ್ಪಿ ರೇಣುಕಾ ಎಸ್ ಕುಮಾರ್ ಮಾತನಾಡಿ

ವರ್ಷದ ಕೊನೆಯ ತಿಂಗಳಲ್ಲಿ ಈ ಕ್ರಿಡಾಕೂಟವನ್ನು ಆಯೋಜಿಸಲಾಗುತ್ತದೆ. ನಿತ್ಯವೂ ಕೆಲದ ಒತ್ತಡದಲ್ಲಿ ಕಳೆಯುವ ಸಿಬ್ಬಂದಿಗಾಗಿ ಈ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ. ಒತ್ತಡದಿಂದ ಹೊರ ಬರಲು ಈ ಕ್ರೀಡಾ ಕೂಟ ಆಯೋಜಿಸಲಾಗಿದೆ. ಕೆಲಸದ ಜೊತೆಗೆ ಆರೋಗ್ಯವು ಬಹಳ ಮುಖ್ಯ. ನಮ್ಮ‌ಇಲಾಖೆಯಲ್ಲೂ ಸಾಕಷ್ಟು ಪ್ರತಿಭೆಗಳಿದ್ದಾರೆ

ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಲಿ ಅಂತ ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಸಂದೀಗವಾಡ ಸೇರಿದಂತ ಎಲ್ಲಾ ಠಾಣೆಯ ಪಿಐ, ಎಸ್ ಐ, ಪೊಲೀಸ್ ಸಿಬ್ಬಂದಿ ಭಾಗಿ. ಆರಂಭದಲ್ಲಿ ೧೦೯ ಮೀಟರ್ ಓಟ ಸ್ಪರ್ಧೆ ಮೂಲಕ ಕ್ರೀಡೆ ಚಾಲನೆ

Please follow and like us:
error