ಜಿಲ್ಲಾ ಪಂಚಾಯತ್ ನಲ್ಲಿ ಹೈಡ್ರಾಮಾ : ಸಹಿ ಮಾಡಲು ನಿರಾಕರಿಸಿದ ವಿಶ್ವನಾಥರೆಡ್ಡಿ

ಕೊಪ್ಪಳ : ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಪೈಪೋಟಿ ಮುಂದುವರೆದಿದ್ದು ಇಂದು ಹೈಡ್ರಾಮಾವೇ ನಡೆದಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವನಾಥರೆಡ್ಡಿ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಜಿಲ್ಲಾ ಪಂಚಾಯತ್ ಸದಸ್ಯರು ತೀರ್ಮಾನಿಸಿ ಸಭೆ ಕರೆಯುವಂತೆ  ಜಿ.ಪಂ. ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂದಿಸಿದ ಪತ್ರವನ್ನು ನೀಡಿ ಅದಕ್ಕೆ ಸಹಿ ಮಾಡಲು ಒತ್ತಾಯಿಸಿದ್ಧಾರೆ. ಇದಕ್ಕೆ ಹೆಚ್.ವಿಶ್ವನಾಥರೆಡ್ಡಿ ಒಪ್ಪದೇ ನಿರಾಕರಿಸಿದ್ದಾರೆ.

ಮಾಜಿ ಜಿ.ಪಂ ಅಧ್ಯಕ್ಷರಾದ ಕೆ.ರಾಜಶೇಖರ್ ಹಿಟ್ನಾಳ್  ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ನ 20 ಸದಸ್ಯರು ಜಿಲ್ಲಾ ಪಂಚಾಯತ್ ಕೊಪ್ಪಳ ಅಧ್ಯಕ್ಷರ ಕಛೇರಿಯಲ್ಲಿ ಹೆಚ್. ವಿಶ್ವನಾಥ ರೆಡ್ಡಿ  ಇವರ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿಸಲು ಹೋದಾಗ ಹೆಚ್. ವಿಶ್ವನಾಥ ರೆಡ್ಡಿ ನಿರಾಕರಿಸಿದ್ದಾರೆ, ಜಿಲ್ಲಾ ಪಂಚಾಯತ್ ಕೊಪ್ಪಳ ಒಟ್ಟು 29 ಸದಸ್ಯರ ಪೈಕಿ 20  ಸದಸ್ಯರು ಬಹುಮತ ವಾಗಿ ತಿರ್ಮಾನಿಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ತಿರ್ಮಾನಿಸಿ ಒಪ್ಪಿಗೆ ಸೂಚಿಸಿ ಸದಸ್ಯರುಗಳು ಸಹಿ ಮಾಡಲಾಯಿತು ಆದರೆ ಹೆಚ್. ವಿಶ್ವನಾಥ ರೆಡ್ಡಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ನ ವಕ್ತಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ಅಧ್ಯಕ್ಷ ಗಾದಿಯಿಂದ ವಿಶ್ವನಾಥರೆಡ್ಡಿಯವನರನ್ನು ಕೆಳಗಿಸಲು ಕಾಂಗ್ರೆಸ್ ತಂತ್ರ ಮಾಡಿದರೆ ಅದಕ್ಕೆ ಪ್ರತಿತಂತ್ರ ಮಾಡಿರುವ ಹೆಚ್.ವಿಶ್ವನಾಥರೆಡ್ಡಿ ಬಿಜೆಪಿ ಸದಸ್ಯರ ಸಹಾಯದೊಂದಿಗೆ ಅಧಿಕಾರದಲ್ಲಿ ಮುಂದುವರೆಯಲು ಸಿದ್ದರಾಗಿದ್ದಾರೆ.  ಜಿಲ್ಲಾ ಪಂಚಾಯತ ಅಧ್ಯಕ್ಷ ಎಚ್ ವಿಶ್ವನಾಥರೆಡ್ಡಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಜಿಲ್ಲಾ ಪಂಚಾಯತ CEO ರಿಗೆ ಜಿಲ್ಲಾ ಪಂಚಾಯತ ಸದಸ್ಯರು ಮನವಿ ಸಲ್ಲಿಸಿದರು..29 ಜನ ಜಿಲ್ಲಾ ಪಂಚಾಯತ ಸದಸ್ಯರಲ್ಲಿ 20 ಜಿಲ್ಲಾ ಪಂಚಾಯತ ಸದಸ್ಯರು ಅವಿಶ್ವಾಸ ಮಂಡನೆಗೆ ಬೆಂಬಲ ಸೂಚಿಸಿದ್ದಾರೆ.

 

Please follow and like us:
error