ಜಿಲ್ಲಾ ನ್ಯಾಯಾದೀಶರಿಗೆ ಸ್ವಾಗತ ಮತ್ತು ಬಿಳ್ಕೊಡುಗೆ ಕಾರ್ಯಕ್ರಮ

ಕೊಪ್ಪಳ: ನಗರದ ವಕೀಲ ಸಂಘದ ಕಾರ್ಯಾಲಯದಲ್ಲಿ ಜಿಲ್ಲೆಗೆ ನೂತನವಾಗಿ ಆಗಮಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಗೌರವಾನ್ವಿತ ಸಂಜೀವ ವಿ. ಕುಲಕರ್ಣಿ ಅವರನ್ನು ಶುಕ್ರವಾರ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ವಕೀಲರಾದ ಆರ್.ಬಿ ಪಾನಗಂಟಿಯವರು ಸ್ವಾಗತಿಸಿದರು. ನೂತನ ನ್ಯಾಯಾದೀಶರ ಪರಿಚಯ ಬಾಷಣವನ್ನು ಪ್ರಧಾನ ಕಾರ್ಯದರ್ಶಿ ಕೊಟ್ರೇಶ ಯು. ಪೋಚಗುಂಡಿ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಜಿಲ್ಲೆಯ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಗೌರವಾನ್ವಿತ   ರಾಜೀವ್ ಜಿ. ಜೋಶಿ ಅವರನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘದ ವತಿಯಿಂದ ಆತ್ಮೀಯ ಸನ್ಮಾನ ಮಾಡುವ ಮೂಲಕ ಬಿಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶೀ ಗೌರವಾನ್ವಿತ ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಾದೀಶರಾದ ಕುಮಾರ ಎಸ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ ಆರ್. ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ಮನು ಶರ್ಮಾ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ್, ಗಂಗಾವತಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಶರಣೇಗೌಡ, ಕುಷ್ಟಗಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಪಿ.ಎನ್ ಗುಜಮಾಗಡಿ, ಯಲಬುರ್ಗಾ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಶ್ಯಾಗೋಟಿ, ಮಾನ್ವಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಬಿ.ಕೆ ಅಮರೇಶ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಚ್. ಇಂಗಳದಾಳ, ಪ್ರಧಾನ ಕಾರ್ಯದರ್ಶಿ ಕೆ.ಯು. ಪೋಚಗುಂಡಿ, ಜಂಟಿ ಕಾರ್ಯದರ್ಶಿ ಕೆ. ಎಸ್. ಜಮಾಪೂರ, ಖಜಾಂಚಿಯಾದ ಡಿ. ಲಂಕೇಶ, ಮತ್ತು ಹಿರಿಯ ವಕೀಲರಾದ ವಿ.ಎಂ ಬೂಸನೂರಮಠ, ಪಿ.ಆರ್. ಹೊಸಳ್ಳಿ, ಆಸೀಪ್ ಅಲಿ ಎಸ್, ಎ.ವಿ ಕಣವಿ, ಎಸ್ ಎನ್ ಮುತಗಿ, ಎಸ್.ಜಿ. ಜವಳಿ, ಎಸ್.ಹೆಚ್ ಸುರಪೂರ, ಹೆಚ್.ಎಸ್. ಮುರಡಿ, ಡಿ.ಜಿ. ಬಾಗಲಕೋಟ, ಜಿ.ಎಫ್ ಹಮ್ಮಿಗಿ, ಎಸ್,ಎನ್ ಮೇಣಸಿನಕಾಯಿ. ವಿ.ಎಸ್. ಕಟ್ಟಿ ಸೇರಿದಂತೆ ಇತರರು ಇದ್ದರು.