You are here
Home > Koppal News > ಜಿಲ್ಲಾಸ್ಪತ್ರೆಯ ಶೌಚಾಲಯ ಸ್ವಚ್ಛ ಮಾಡಿದ ಸಂಸದರ ಮಗ

ಜಿಲ್ಲಾಸ್ಪತ್ರೆಯ ಶೌಚಾಲಯ ಸ್ವಚ್ಛ ಮಾಡಿದ ಸಂಸದರ ಮಗ

ಕೊಪ್ಪಳ : ಸಂಸದ, ಶಾಸಕರ ಮಕ್ಕಳೆಂದರೆ ಕೇವಲ ಎಸಿ ಕಾರಿನಲ್ಲಿ ತಿರುಗಾಡುತ್ತಾ ಅಧಿಕಾರದ ಅಹಂನಲ್ಲಿರುತ್ತಾರೆ ಅನ್ನುವ ಮಾತಿದೆ . ಆದರೆ ಅದಕ್ಕೆ ಅಪವಾದವೆಂಬಂತೆ ಕೊಪ್ಪಳ ಸಂಸದರ ಮಗ ತಾನೇ ಮುಂದೆ ನಿಂತು ಜಿಲ್ಲಾಸ್ಪತ್ರೆಯನ್ನು ಸ್ವಚ್ಛಗೊಳಿಸಿದ್ದಾರೆ.
 ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದ ಸ್ಥಿತಿ ಕಂಡು ಕ್ಲಿನಿಂಗ್ ಮಾಡಿದ ಅಮರೇಶ ಕರಡಿ. ಯುವ ಬ್ರಿಗೇಡ್ ಕಾರ್ಯಕರ್ತರ ಜೊತೆಗೂಡಿ ಶೌಚಾಲಯ ಸ್ವಚ್ಚಗೊಳಿಸಿದರು. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ನಡೆದಿತ್ತು. ಸ್ವಚ್ಚತಾ ಕಾರ್ಯದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸಾಥ್ ನೀಡಿದ್ದರು . ಶೌಚಾಲಯ ಸ್ವಚ್ಛತೆಗಿಳಿದ ಸಂಸದರ ಮಗ ನೆಪಮಾತ್ರಕ್ಕೆ ಎನ್ನುವಂತೆ  ಕೇವಲ ಕ್ಯಾಮಾರಾಗಳಿಗೆ ಪೋಜು ಕೊಡದೇ ಸ್ವಚ್ಛತೆಯಲ್ಲಿ ತೊಡಗಿದರು.  ಸರಕಾರಿ ಆಸ್ಪತ್ರೆಗಳ ಶೌಚಾಲಯಗಳಿಗೆ ಹೋಗಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಅಮರೇಶರ ಈ ಸ್ವಚ್ಛತಾ ಕೆಲಸವನ್ನು ಜನ ಶ್ಲಾಘಿಸಿದ್ಧಾರೆ.
Top