ಜಿಲ್ಲಾಧಿಕಾರಿ ವಿರುದ್ದ ಸುಳ್ಳು  ಆರೋಪ, ನಿಂದನೆ :  ಖಂಡಿಸಿ ಸರಕಾರಿ ನೌಕರರಿಂದ ಪ್ರತಿಭಟನೆ

ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಮಾಜಿ ಪ್ರಧಾನ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಇವರು ಸಾಮಾಜಿಕ ಜಾಲತಾಣದಲ್ಲಿ ( ಫೇಸ್ ಬುಕ್ ) ಕೊಪ್ಪಳ ಜಿಲ್ಲೆಯ  ಜಿಲ್ಲಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಈತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕು ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು. 

ಸಾಹಿತ್ಯಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಪ್ರತಿಭಟನೆಯಲ್ಲಿ ನಾಗರಾಜ ಜುಮ್ಮಣ್ಣವರ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

ಕೊಪ್ಪಳ ಜಿಲ್ಲೆ , ಗಂಗಾವತಿ ತಾಲ್ಲೂಕು , ಚಿಕ್ತರಾಂಪುರ ( ಆನೆಗುಂದಿ ) ಗ್ರಾಮದ ಇ೦ಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಈತನು 7ನೇ ಜನವರಿ 2020 ರಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನಲ್ಲಿ ವಿಡಿಯೋ ಮಾಡಿ ಕೊಪ್ಪಳ ಜಿಲ್ಲೆಯ  ಜಿಲ್ಲಾಧಿಕಾರಿಗಳನ್ನು ಗುಂಡಾ ಎಂಬ ಪದವನ್ನು ಬಳಕೆ ಮಾಡಿ ಮಾನ್ಯರ ವಿರುದ್ಧ ಅವಹೇಳಕಾರಿಯಾದ ಹೇಳಿಕೆ ನೀಡಿರುತ್ತಾನೆ ಹಾಗೂ ವಿರುದ್ಧ ಸುಳ್ಳು ಆರೋಪ ಮಾಡಿ ಅವರ  ಸಚ್ಚಾರಿತ್ರ್ಯ ಕ್ಕೆ ಧಕ್ಕೆ ಉಂಟುಮಾಡಿರುವದನ್ನು ಸರಕಾರಿ ನೌಕರರ ಸಂಘ , ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ . 
ದಿನಾಂಕ : 18 – 08 – 2018 ರಂದು ಜಿಲ್ಲಾ ಪೊಲೀಸ್ ಅಫೀಕ್ಷಕರವರು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಚಿಕ್ತರಾಂಪುರ ಸೀಮಾ ಸ . ನಂ . 136 ಪರಂಪೋಕ ಕಾಲ್ಗುಲಿಸಿದ ಅರಣ್ಯ ಪ್ರದೇಶದಲ್ಲಿ ಸುಮಾರು 134 ಎಕರೆ ಗುಡ್ಡ ಆಂಜನಾದ್ರಿ ಬೆಟ್ಟ ಇದ್ದು ಹಿಂದಿನ ಅರ್ಚಕ ಶ್ರೀ ಮಹಾಂತ ವಿದ್ಯಾದಾಸಬಾಬಾ ಹಾಗೂ ಶ್ರೀ ಆಂಜನೇಯ ಪರ್ವತ ಚಾರಿಟೇಬಲ್ ಟ್ರಸ್ಟ್ ನಡುವೆ ಪೂಜಾ ವಿವಾದದ ಬಗ್ಗೆ ವ್ಯಾಜ್ಯ ನಡೆದದ್ದು ಉಭಯ ಅರ್ಚಕರು ಹಾಗೂ ಟ್ರಸ್ಟ್ ಬೆಂಬಂತರ ನಡುವೆ ತೀವ್ರತರವಾದ ಗಲಾಟೆ ಹಾಗೂ ಕೋಮು ಗಲಭೆ ಏರ್ಪಡುವ ಸಂಭವವಿದ್ದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವುದರಿಂದ ಸದರಿ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯಲು ಏವರವಾದ ವರದಿಯನ್ನು ಸಲ್ಲಿಸಿದ್ದು ಹಾಗೂ ತಹಸಿಲ್ದಾರರು ಗಂಗಾವತಿ ಇವರು ಸಹಿತ ಕಾನೂನು ಸುವವನೆಗೆ ಧಕ್ಕೆ ತರುವ ಅಭಿಪ್ರಾಯವನ್ನು ಸಲ್ಲಿಸಿದ ಮೇರೆಗೆ ಈ ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆದು ಐತಿಹಾಸಿಕ ನಿರ್ಣಯವನ್ನು ಮಾತ್ರ ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವುದು ಶ್ಲಾಘನೀಯ . ಸದಲ ಆದಶದ ವಿರುದ್ದ ಮಾನ್ಯ ಉಚ್ಚನ್ಯಾಯಾಲಯಕ್ಕೆ ಈ ಬಾಬಾನು ಪ್ರಕರಣ ದಾಖಲಿಸಿದ ನಂತರ  ಉಚ್ಛ ನ್ಯಾಯಾಲಯ ಆದೇಶದಂತೆ ಈತನಿಗೆ ಪೂಜೆ ಮಾಡಿಕೊಳ್ಳಲು ಜಿಲ್ಲಾಡಳಿತ ಅನುವು ಮಾಡಿಕೊಡುವುದರ ಮೂಲಕ ಕಾನೂನು ಪಾಲನೆ ಮಾಡಿರುತ್ತಾರೆ , ಆದರೆ ಬಾಬಾನು ಪೂಜೆ ಮಾಡುವುದನ್ನು ಬಿಟ್ಟು ಆರತಿ ತಟ್ಟೆಗೆ ಹಣವನ್ನು ಹಾಕುವಂತೆ ಹಾಗೂ ಸದರಿ ಹಣವನ್ನು ಬಾಬಾನ ಬೆಂಬಲಿಗರು ತೆಗೆದುಕೊಳ್ಳುತ್ತಿರುವವರ ವಿರುದ್ಧ ಮಾನ್ಯ ಜಿಲ್ಲಾಧಿಕಾರಿಗಳು ಪ್ರಕರಣ ದಾಖಲು ಮಾಡಿರುವುದು ಕಾನೂನು ಕ್ರಮ ನ್ಯಾಯ ಸಮ್ಮತವಾಗಿರುತ್ತದೆ . 

 ಜಿಲ್ಲಾಧಿಕಾರಿಗಳು ಈ ದೇವಸ್ಥಾನವನ್ನು ಸರಕಾರದ ವಶಕ್ಕೆ ತೆಗೆದುಕೊಂಡ ನಂತರ ನಾವುಗಳು ( ಸಂಘದ ಪದಾಧಿಕಾರಿಗಳು ) ಈ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಜೀರ್ಣೋದ್ಧಾರ ಕಾರ್ಯಗಳು , ನಿರಂತರ ಪ್ರಸಾದ ವ್ಯವಸ್ಥೆ ನೀಲನ ವ್ಯವಸ್ಥೆ . ಶೌಚಾಲಯ ವ್ಯವಸ್ಥೆಯನ್ನು ಮಾಡಿರುವುದು ಈ ನೂರಾರು ವರ್ಷಗಳಿಂದ ಆಗದೇ ಇರುವ ಅಭಿವೃದ್ಧಿ ಕೆಲಸಗಳು ಕೇವಲ ಒಂದು ವರ್ಷದಲ್ಲಿ ಪೂರೈಸಿರುವುದು ಆಂಜನೇಯ ಭಕ್ತಾದಿಗಳಿಗೆ ನೀಡಿದ ಗೌರವ ಹಾಗೂ ಹನುಮ ಮಾಲಾ ವಿಸರ್ಜನೆ ದಿನದಂದು ಒಂದೇ ದಿನ 70 , 000 ( ಎಪ್ಪತ್ತು ಸಾವಿರ ) ಜನರಿಗೆ ಪ್ರಸಾದ ವ್ಯವಸ್ಥೆ ಮಾಡಿರುವುದು ಕರ್ತವ್ಯ ನಿಷ್ಠೆಗೆ ಹಿಡಿದ ಕೈಗನ್ನಡಿ , 

 ಈ ಬಾಬಾನೇ ಹೇಳಿದಂತ್ರೆ ನಾನೇ ಈ ದೇವಾಲಯದ ಪ್ರಧಾನ ಅರ್ಚಕ ಸುಮಾರು ವರ್ಷಗಳಿಂದ ಪೂಜೆ ಕೈಂಕರ್ಯಗಳನ್ನು ಮಾಡಿಕೊಂಡು ಬರುತ್ತಿರುತ್ತೇನೆ ಎಂದು ತಿಳಿಸಿದ್ದು ಇರುತ್ತದೆ . ಇಷ್ಟು ವರ್ಷಗಳ ಕಾಲ ಬಂದ ಆದಾಯವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಯಾವುದೇ ಅಭಿವೃದ್ಧಿ ಕಾರ್ಯಮಾಡದೇ ಈ ಕ್ಷೇತ್ರದ ಭಕ್ತರಿಗೆ ಅನ್ಯಾಯಮಾಡಿರುತ್ತೇನೆ . ಈತನು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ನ್ಯಾಯಾಲದಲ್ಲಿ ಪ್ರಕರಣ ಚಾಲ್ತಿ ಯಲ್ಲಿ ಇದ್ದಾಗಲೂ ಸಹಿತ ಈ ರೀತಿಯಾಗಿ ಸಂವಿಧಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ , ನಿಷ್ಠವಂತ , ನಿಷ್ಪಕ್ಷಪಾತ , ಪ್ರಾಮಾಣಿಕ , ಕ್ರೀಯಾಶೀಲ ಮಾನ್ಯ ಜಿಲ್ಲಾಧಿಕಾರಿಯವರ ಮೇಲೆ ವ್ಯರ್ಥ ಸುಳ್ಳು ಆರೋಪವನ್ನು ಮಾಡುತ್ತಿರುವ ಈತನನ್ನು ಕೂಡಲೇ ಬಂಧಿಸಿ , ಈ ರಾಜ್ಯದ ಗಡಿಪಾರು ಮಾಡಲು ಸಮಸ್ತ ಸರಕಾರಿ ನೌಕರರು ಒತ್ತಾಯಿಸುತ್ತೇವೆ  ಎಂದು,  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ( ಅ )ದ ಜಿಲ್ಲಾ ಶಾಖೆ ಒತ್ತಾಯ ಮಾಡಿದೆ.

ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನ್ನವರ,ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ, ಖಜಾಂಚಿ ಸುಶೀಲೇಂದ್ರರಾವ ದೇಶಪಾಂಡೆ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಅಂದಪ್ಪ ಬೊಳರಡ್ಡಿ,ಖಜಾಂಚಿ ಕಾಶಿನಾಥ ಶಿರಿಗೇರಿ,ಕಾರಟಗಿ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸರ್ದಾರಾಅಲಿ,ಗಂಗಾವತಿ ಅಧ್ಯಕ್ಷರಾದ ಶರಣೇಗೌಡ ಪಾಟೀಲ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ,ಶಂಭುಲಿಂಗನೌಡ ಪಾಟೀಲ, ಮಂಜುನಾಥ, ಬಾಳಪ್ಪ ಕಾಳೆ,ಕಂದಾಯ ಇಲಾಖೆಯ ನೌಕರರ ಸಂಘದ ಮಂಜುನಾಥ ಹಲಗೇರಿ,ಆಸೀಪ್ ಬಹದ್ದೂರಬಂಡಿ ಮುಂತಾದವರು ಹಾಜರಿದ್ದರು

Please follow and like us:
error