ಜಿಲ್ಲಾಡಳಿತದಿಂದ ಪುನರ್ವಸತಿ ಕೇಂದ್ರಗಳಲ್ಲಿ ಕೈಗೊಂಡ ಪರಿಹಾರ ಕಾರ್ಯಗಳು

ಕೊಪ್ಪಳ ಮೇ : ಕೋವಿಡ್-19 ಪ್ರಯುಕ್ತ ತೊಂದರೆಗೆ ಸಿಲುಕಿದ ವಿವಿಧ ವಲಸೆ ಕಾರ್ಮಿಕರು ಹಾಗೂ ಅನಾಥ, ನಿರ್ಗತಿಕರು ಸೇರಿದಂತೆ ಇತರ ವಸತಿ ಹೀನರಿಗೆ ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿರುವ ಪುನರ್ವಸತಿ ಕೇಂದ್ರಗಳಲ್ಲಿ ವಿವಿಧ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಅನಾಥ, ನಿರ್ಗತಿಕರ ಪುರ್ನವಸತಿಗಾಗಿ ಕಲ್ಪಿಸಿದ 8 ಸಂಸ್ಥೆಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವಧಾರ(1), ಮಕ್ಕಳ ಪಾಲನಾ ಕೇಂದ್ರ(2), ವೃದ್ಧಾಶ್ರಮಗಳು(2), ನಗರಾಭಿವೃದ್ಧಿ ಕೋಶದ ಯೋಗ ಕ್ಷೇಮ ಕೇಂದ್ರಗಳು (2), ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೃದ್ಧಾಶ್ರಮ(1) ಗಳಲ್ಲಿ ಇದುವರೆಗೂ 105 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಯುವಕ ಸಂಘಗಳು ಮತ್ತಿತರ ಸಂಯುಕ್ತಾಶ್ರಯದಲ್ಲಿ ಅನಾಥ, ಭಿಕ್ಷÄಕರಿಗೆ, ಮನೆಯಿಲ್ಲದ ನಿರ್ಗತಿಕರಿಗಾಗಿ ಪ್ರತಿ ದಿನ ಆಹಾರವನ್ನು ವಿತರಿಸುತ್ತಾ ತಾತ್ಕಾಲಿಕ ಸೇವಗಳನ್ನು ಒದಗಿಸಲಾಗುತ್ತಿದೆ. ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆಗಳ ವ್ಯಾಪ್ತಿಯಲ್ಲಿ ಯೂನಿಟ್ ಲೆಕ್ಕದಲ್ಲಿ ಪ್ರತಿ ಯುನಿಟ್‌ಗೆ ರೂ. 30 ರಂತೆ ಕೊಪ್ಪಳ ತಾಲ್ಲೂಕಿನಲ್ಲಿ 13,494 ಯುನಿಟ್‌ಗಳಿಗೆ ರೂ. 1,37,63,880, ಗಂಗಾವತಿ ತಾಲ್ಲೂಕಿನಲ್ಲಿ 3,915 ಯುನಿಟ್‌ಗಳಿಗೆ ರೂ. 39,93,300, ಕನಕಗಿರಿ ತಾಲ್ಲೂಕಿನಲ್ಲಿ 2,463 ಯುನಿಟ್‌ಗಳಿಗೆ ರೂ. 73,890, ಕಾರಟಗಿ ತಾಲ್ಲೂಕಿನಲ್ಲಿ 2,759 ಯುನಿಟ್‌ಗಳಿಗೆ ರೂ. 82,770, ಕುಷ್ಟಗಿ ತಾಲ್ಲೂಕಿನಲ್ಲಿ 1,668 ಯುನಿಟ್‌ಗಳಿಗೆ ರೂ. 50,040, ಯಲಬುರ್ಗಾ ತಾಲ್ಲೂಕಿನಲ್ಲಿ 3,702 ಯುನಿಟ್‌ಗಳಿಗೆ ರೂ. 1,11,060, ಕುಕನೂರು ತಾಲ್ಲೂಕಿನಲ್ಲಿ 670 ಯುನಿಟ್‌ಗಳಿಗೆ ರೂ 20,100, ಒಟ್ಟು 28,671 ಯುನಿಟ್‌ಗಳಿಗೆ ರೂ. 1,80,95,040 ಗಳನ್ನು ವೆಚ್ಚ ಮಾಡಲಾಗಿದೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂಲದ 174 ವಲಸೆ ಕಾರ್ಮಿಕರಿಗೆ ಕೊಪ್ಪಳ ಮತ್ತು ಕುಷ್ಟಗಿಯ ಸಮಾಜ ಕಲ್ಯಾಣ ಇಲಾಖೆ 2 ಸಂಸ್ಥೆಗಳಲ್ಲಿ ಹಾಗೂ ಮಹಾರಾಷ್ಟç, ರಾಜಸ್ಥಾನ ಮತ್ತು ಮಧ್ಯಪ್ರದೇಶದ 81 ಜನರಿಗೆ ಕಾರಟಗಿ, ಕನಕಗಿರಿ, ಕೊಪ್ಪಳದಲ್ಲಿ ವಲಸೆ ಕಾರ್ಮಿಕರಿಗೆ ಪುರ್ನವಸತಿ ಕಲ್ಪಿಸಿ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ ಮತ್ತು ಈ ಎಲ್ಲ ವಲಸೆ ಕಾರ್ಮಿಕರನ್ನು ಏಪ್ರಿಲ್ 03 ಮತ್ತು 04 ರಂದು ಅವರುಗಳ ರಾಜ್ಯಗಳಿಗೆ ಕಳುಹಿಸಿ ಕೊಡಲಾಗಿದೆ.

ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯ ರಾಜ್ಯದ ಕಾರ್ಮಿಕರ 28 ಕಾರ್ಮಿಕ ಕ್ಯಾಂಪ್‌ಗಳಿದ್ದು, ಪ್ರತಿ ಕ್ಯಾಂಪ್‌ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ 2,297 ಜನರಿಗೆ ಸಿದ್ಧಪಡಿಸಿದ ಆಹಾರ, ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್, ಇತ್ಯಾದಿಗಳನ್ನು ಒದಗಿಸಿ ಅವರೆಲ್ಲರ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.

ಕೊಪ್ಪಳ ಜಿಲ್ಲೆಯ ನಿವಾಸಿಗಳಾಗಿದ್ದು ಪಡಿತರ ಚೀಟಿ ಹೊಂದಿಲ್ಲದಿರುವ, ಸಂಕಷ್ಟದಲ್ಲಿರುವ ಒಟ್ಟು 346 ಕುಟುಂಬಗಳ 1,724 ಕುಟುಂಬ ಸದಸ್ಯರಿಗೆ ಆಹಾರ ಸಾಮಗ್ರಿಗಳು ಮತ್ತು ದಿನ ನಿತ್ಯ ಬಳಕೆ ವಸ್ತುಗಳನ್ನು ಸರಬರಾಜು ಮಾಡಲಾಗಿದೆ.

ಜಿಲ್ಲೆಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 265 ಕುಟುಂಬಗಳ 793 ಸದಸ್ಯರಿಗೆ, 110 ಲೈಂಗಿಕ ಅಲ್ಪಸಂಖ್ಯಾತ ಕುಟುಂಬಗಳ 110 ಸದಸ್ಯರಿಗೆ, ಮಾಜಿ ದೇವದಾಸಿಯರ 68 ಕುಟುಂಬಗಳ 218 ಸದಸ್ಯರಿಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ 14 ಕುಟುಂಬಗಳ 42 ಸದಸ್ಯರು ಸೇರಿದಂತೆ ಒಟ್ಟು 457 ಕುಟುಂಬಗಳ 1,163 ಸದಸ್ಯರಿಗೆ ಆಹಾರ ಸಾಮಗ್ರಿಗಳು ಮತ್ತು ದಿನ ನಿತ್ಯ ಬಳಕೆ ವಸ್ತುಗಳನ್ನು ಸರಬರಾಜು ಮಾಡಲಾಗಿದೆ.

ಗಂಗಾವತಿಯ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ 142 ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಕೊಪ್ಪಳ-20, ಯಲಬುರ್ಗಾ-25, ಕುಕನೂರು-25, ಕುಷ್ಟಗಿ-50, ಕನಕಗಿರಿ-20 ಕ್ವಿಂಟಾಳ್‌ಗಳನ್ನು ವಿತರಿಸಲಾಗಿದೆ. ಕೊಪ್ಪಳ ಜಿಲ್ಲಾ ಕುಕ್ಕುಟೋದ್ಯಮ ಒಕ್ಕೂಟದಿಂದ 43,500 ಮೊಟ್ಟೆಗಳನ್ನು ನೀಡಿದ್ದು, ಪೌರಕಾಂಇðಕರಿಗೆ 25,000, ಆಶಾ ಕಾರ್ಯಕತೆಯರಿಗೆ 13,500, ಹಮಾಲರಿಗೆ 5000 ಮೊಟ್ಟೆಗಳನ್ನು ವಿತರಿಸಲಾಗಿದೆ.

ಕರ್ನಾಟಕ ಹಾಲು ಉತ್ಪಾದನಾ ಮಹಾಮಂಡಳಿಯಿAದ (ಕೆ.ಎಮ್.ಎಫ್)ರವರಿಂದ ಜಿಲ್ಲೆಯಲ್ಲಿ ಉಚಿತವಾಗಿ ಏಪ್ರಿಲ್ 03 ರಿಂದ (ಪ್ರತಿದಿನ 10.000. ಲೀಟರನಂತೆ) ಹಾಲನ್ನು ಫಲಾನುಭವಿಗಳ 18,384 ಕುಟುಂಬಗಳು ಹಾಗೂ ನಿರಾಶ್ರಿತ ಮತ್ತು ವಲಸೆ ಕಾರ್ಮಿಕರ 600 ಕುಟುಂಬಗಳಿಗೆ ಇದುವರೆಗೂ ಕೆ.ಎಮ್.ಎಫ್.ನಿಂದ 2,80,000 ಲೀಟರ್ ಹಾಲನ್ನು ವಿತರಿಸಲಾಗಿದೆ.

ಜಿಲ್ಲೆಯ ನಾಗರಿಕರು ಲಾಕ್‌ಡೌನ್‌ನಿಂದಾಗಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಬಂದ ದೂರಿನನ್ವಯ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಸೂಕ್ತ ಸಹಾಯ /ಸೌಲಭ್ಯ ಕಲ್ಪಿಸಲಾಗಿದೆ. ಅನ್ಯ ರಾಜ್ಯದಲ್ಲಿ ಸಿಲುಕಿರುವ ಕೊಪ್ಪಳ ತಾಲ್ಲೂಕಿನ 17, ಕುಷ್ಟಗಿ ತಾಲ್ಲೂಕಿನ 173, ಯಲಬುರ್ಗಾ 109, ಗಂಗಾವತಿ 04 ಸೇರಿದಂತೆ ಒಟ್ಟು 303 ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಕೊಪ್ಪಳ-324, ಗಂಗಾವತಿ-208, ಕನಕಗಿರಿ-86, ಕಾರಟಗಿ-30, ಕುಷ್ಟಗಿ-1,194, ಯಲಬುರ್ಗಾ-327, ಕುಕನೂರು-138 ಜನರು ಸೇರಿದಂತೆ ಒಟ್ಟು 2,307 ಜನರು ಜಿಲ್ಲೆಗೆ ಆಗಮಿಸಿದ್ದಾರೆ.

ಜಿಲ್ಲೆಯಲ್ಲಿ ಸ್ಥಾಪಿಸಲಾದ ಕೋವಿಡ್-19 ಸಹಾಯವಾಣಿಗೆ, ಜಿಲ್ಲೆಯಿಂದ ಬೇರೆ ಜಿಲ್ಲೆ/ರಾಜ್ಯಕ್ಕೆ ವಲಸೆ ಹೋಗಿ ಸಂಕಷ್ಟಕ್ಕೆ ಒಳಗಾದವರಿಂದ 35, ಜಿಲ್ಲೆಗೆ ಆಗಮಿಸಿದ ನಾಗರಿಕ, ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲು 29, ಆಹಾರ, ಆಹಾರ ಸಾಮಗ್ರಿಗಳ ಸಹಾಯಕ್ಕಾಗಿ 70, ಪಾಸ್ ಸಹಾಯಕ್ಕಾಗಿ 190, ಸ್ವಯಂ ಸೇವಕರ ಸೇವೆಯ ಮಾಹಿತಿಗಾಗಿ 29, ಕಾನೂನು ಸುವ್ಯವಸ್ಥೆಗಾಗಿ 38 ಮತ್ತು ಇತರೆ 89 ಒಟ್ಟು 480 ದೂರುಗಳು ಬಂದಿದ್ದು ಅವೆಲ್ಲವುಗಳನ್ನು ವಿಲೇವಾರಿ ಮಾಡಲಾಗಿದೆ.

ಲಾಕ್‌ಡೌನ್ (ನಿಷೇಧಾಜ್ಞೆ) ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ ಮೇ.04 ರಂದು ಜಿಲ್ಲೆಯಲ್ಲಿ 03 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 14 ಜನರನ್ನು ಬಂಧಿಸಲಾಗಿದೆ. ಇದುವರೆಗೂ ಒಟ್ಟು 200 ಪ್ರಕರಣಗಳು ದಾಖಲಾಗಿದ್ದು, ಒಟ್ಟು 608 ಜನರನ್ನು ಈ ಸಂಬAಧ ಬಂಧಿಸಲಾಗಿದೆ. ಇದುವರೆಗೂ 621 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ರೂ. 41,95,200/- ಗಳ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error