ಜಿಜ್ಞಾಸ್ ೨೦೧೮ ಆಯುಷ್ ಸಮ್ಮೇಳನ ಕಾರ್ಯಕ್ರಮ : ಪೋಸ್ಟರ ಬಿಡುಗಡೆ

Koppal ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆರ್ಯವೇದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಜಿಜ್ಞಾಸ್ ೨೦೧೮ ಆಯುಷ್ ಸಮ್ಮೇಳನ ಕಾರ್ಯಕ್ರಮದ ಪೋಸ್ಟರನ್ನು ಕೊಪ್ಪಳದ ಶ್ರೀ ನಿ.ಪ್ರ.ಸ್ವ.ಜ.ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಬಿಡುಗಡೆಗೊಳಿಸಿದರು. ನಂತರ ಸ್ವಾಮಿಜಿಯವರು ವಿದ್ಯಾರ್ಥಿ ಪರಿಷತ್‌ನ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮ ತುಂಬಾ ಯಶಸ್ವಿಯಾಗಲಿ ಸಾಮಾಜಿಕವಾಗಿ ಎಲ್ಲಾ ವಿದ್ಯಾರ್ಥಿಗಳ ನಡುವೆ ವಿವಿಧ ಆಯಾಮಗಳಲ್ಲಿ ಎಬಿವಿಪಿ ಕೆಲಸ ಮಾಡುತ್ತಿದೆ. ಹಾಗೇಯೋ ಆರ್ಯವೇದ ವಿದ್ಯಾರ್ಥಿಗಳ ಈ ರೀತಿ ಜಿಜ್ಞಾಸ-೨೦೧೮ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ಗವಿ ಜಂತಕಲ್ ಮಾತನಾಡಿ ಈ ಕಾರ್ಯಕ್ರಮವು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮ ಇಡೀ ದೇಶ್ಯಾದಂತ್ಯ ಇರುವ ಆರ್ಯವೇದ ಕಾಲೇಜು ವಿದ್ಯಾರ್ಥಿಗಳ ಸಮೂಹ ಕರ್ನಾಟಕದ ಬೆಂಗಳೂರುನಲ್ಲಿ ನಡೆಯಲ್ಲಿರುವ ನ್ಯಾಷನಲ್ ವಿಶ್ವವಿದ್ಯಾಲಯ ಕಾಲೇಜು ಮೈದಾನದ ಡಿಸೆಂಬರ ೫ ರಿಂದ ೯ ವರೆಗೆ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಹೋಗುವ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ನೊಂದಣಿ ದಿನಾಂಕಃ-೨೭-೧೧-೨೦೧೮ ವರೆಗೆ ನೊಂದಣಿ ಮಾಡಿಕೊಳ್ಳಲು ಅವಕಾಶ ವಿದೆ.jignasaayausha@gmail.com, www.jignasa.in ದೇಶದ ಸುಮಾರು ೪೦೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿ ಸಮುಹ ಒಂದೇಡೆ ಸೇರಲಿದೆ ಎಂದು ಮಾತನಾಡಿದರು. ಕೊಪ್ಪಳದ ಜಗದ್ಗುರು ಗವಿಸಿದ್ದೇಶ್ವರ ಆರ್ಯವೇದಿಕ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾದ ಯುವರಾಜ, ವೀರನಗೌಡ, ರೋಹಿತ್ ಮತ್ತು ಇತ್ತರರು ಹಾಜರಿದ್ದರು.