You are here
Home > Koppal News > ಜಾತ್ರೆಗೆ ಶುಭ ಕೋರುವ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಶ್ರೀ ಗವಿಮಠದ ಮನವಿ

ಜಾತ್ರೆಗೆ ಶುಭ ಕೋರುವ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಶ್ರೀ ಗವಿಮಠದ ಮನವಿ


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಮಹಾರಥೋತ್ಸವವು ದಿನಾಂಕ ೦೩-೦೧-೨೦೧೮ರ ಬುಧವಾರದಂದು ಸಾಯಂಕಾಲ ೫ ಗಂಟೆಗೆ ಜರುಗುವ ಮಹಾರಥೋತ್ಸವದಲ್ಲಿ ಐದಾರು ಲಕ್ಷ ಭಕ್ತಾಧಿಗಳು ಪಾಲ್ಗೊಳ್ಳುವದರಿಂದ ಭಕ್ತಾಧಿಗಳಿಗೆ ಹೆಚ್ಚು ಹೆಚ್ಚು ವಿಶಾಲವಾಗಿರುವ ಸ್ಥಳಾವಕಾಶವನ್ನು ಒದಗಿಸಿಕೊಡುವ ಸಲುವಾಗಿ ಯಾರೂ ಜಾತ್ರೆಗೆ ಶುಭ ಕೋರುವ ಬಣ್ಣ ಬಣ್ಣದ ಪ್ಲೆಕ್ಸಗಳನ್ನು ಮತ್ತು ಪೂಜ್ಯ ಶ್ರೀಗಳ ಕಟೌಟ್‌ಗಳನ್ನು ಜಾತ್ರಾ ಆವರಣ ಮತ್ತು ಗವಿಮಠದ ಹೊರಗಡೆ ದಯವಿಟ್ಟು ಕಟ್ಟಬಾರದೆಂದು ಭಕ್ತರಲ್ಲಿ ವಿನಂತಿಸಲಾಗಿದೆ. ಈ ರೀತಿಯ ಪ್ಲೆಕ್ಸಗಳನ್ನು ಕಟ್ಟದೇ ಪರಿಸರ ಹಾಗೂ ಜಾತ್ರಾಮಹೋತ್ಸವದ ಶಿಸ್ತನ್ನು ಕಾಯ್ದುಕೊಳ್ಳಬೇಕು. ಹಾಗೆಯೇ ಭಕ್ತಾದಿಗಳು ಫ್ಲೇಕ್ಸ್‌ಗಳಿಗೆ ಮತ್ತು ಕಟೌಟ್‌ಗಳಿಗೆ ಖರ್ಚು ಮಾಡುವ ಹಣವನ್ನು ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಸಹಾಯ ಮಾಡುವುದರ ಮುಖಾಂತರ ತಮ್ಮ ಹಣವನ್ನು ಸತ್ಪಾತ್ರಕ್ಕೆ ವಿನಿಯೋಗಿಸಬಹುದೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Top