ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ೩ ದಿನದಲ್ಲಿ ೬ ಲಕ್ಷ ಭಕ್ತರು ಪ್ರಸಾದ ಸ್ವೀಕಾರ


ಕೊಪ್ಪಳ- ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದವನ್ನು ಕಳೆದ ಮೂರು ದಿನಗಳಿಂದ ಸ್ವೀಕರಿಸುತಿದ್ದಾರೆ.ಮಹಾರಥೋತ್ಸವ ದಿನದಿಂದ ಪ್ರಾರಂಭವಾದ ಮಹಾದಾಸೋಹವು ಇಲ್ಲಿಯವರೆಗೆ ಮಹಾದಾಸೋಹದಲ್ಲಿ ಬಳಕೆಯಾದ ಧವಸ ಧಾನ್ಯಗಳು, ಕಾಯಿಪಲ್ಲೆಯ ವಿವರಗಳು ಇಂತಿವೆ. ಪ್ರಸಾದ ಸ್ವೀಕರಿಸಿದ ಒಟ್ಟು ಭಕ್ತರ ಸಂಖ್ಯೆ ೫-೬ ಲಕ್ಷ, ಸುಮಾರು ೫ ಲಕ್ಷ ರೊಟ್ಟಿಗಳು, ೧೦ ಕ್ವೀಂಟಲ್ ಸಿಹಿ ಬೂಂದಿ,೨೦೦ ಕ್ವೀಂಟಲ್ ಮಾದಲಿ, ೪ ಟನ್ ಕಾಯಿಪಲ್ಲೆ, ೭೫೦ ಕೆಜಿ ತುಪ್ಪ, ೬ ಕ್ವೀಂಟಲ್ ಕೆಂಪು ಚಟ್ನಿ, ೬ ಕ್ವೀಂಟಲ್ ಕಡ್ಲಿಪುಡಿ, ೨೦೦ ಕ್ವೀಂಟಲ್ ಅಕ್ಕಿ, ೧೨ ಕೊಪ್ಪರಿಕೆ ಸಾರು, ೮ ಕೊಪ್ಪರಿಕೆ ದಾಲ್, ೩ ಕೊಪ್ಪರಿಕೆ ಮಡಕಿಕಾಳು, ೩ ಸಾವಿರ ಲೀಟರ್ ಹಾಲು ಬಳಕೆಯಾಗಿದ್ದು ಸುಮಾರು ೫ ಸಾವಿರದಿಂದ ೬ ಸಾವಿರ ಬಾಣಸಿಗರು ಅಡುಗೆಯನ್ನು ತಯಾರಿಸಿದ್ದಾರೆ

ಕೊಪ್ಪಳ ಜಿಲ್ಲೆಯ ಸ್ಕೌಟ್ಸ ಮತ್ತು ಗೈಡ್ಸ ವಿಭಾಗವಾದ ರೆಂಜರ್‍ಸ, ರೋವರ್‍ಸ ವಿಭಾಗದಿಂದ ಸ್ವಚ್ಚತಾ ಕಾರ್ಯ
ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವzಲ್ಲಿ ವಿವಿಧ ಸಂಘ ಸಂಸ್ಥೆಗಳು, ಒಕ್ಕೂಟಗಳು, ಮಹಿಳಾ ಮಂಡಳಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಸೇವೆ ಮಾಡುತಿದ್ದಾರೆ. ಕೊಪ್ಪಳ ಜಿಲ್ಲೆಯ ಸ್ಕೌಟ್ಸ ಮತ್ತು ಗೈಡ್ಸ ವಿಭಾಗವಾದ ರೆಂಜರ್‍ಸ, ರೋವರ್‍ಸ ವಿಭಾಗದಿಂದ ಜಾತ್ರೆ ಮುಗಿಯುವವರೆಗೂ ಸುಮಾರು ೨೦೦ ಕ್ಕಿಂತಲೂ ಹೆಚ್ಚೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುವವರಿದ್ದಾರೆ. ಮೂರು ದಿನಗಳಿಂದ ಜಾತ್ರಾ ಆವರಣ, ತೇರುಬೀದಿ, ಮಠದ ಆವರಣ, ಕೈಲಾಸ ಮಂಟಪ ಜಾತ್ರಾ ಆವರಣ ಮುಂತಾದ ಸ್ಥಳಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಚೀಲಗಳನ್ನು ಆರಿಸುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯವು ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.

ಸುಕೋ ಬ್ಯಾಂಕಿನಿಂದ ಜಾತ್ರಾ ಯಾತ್ರಾರ್ಥಿಗಳಿಗೆ ನೀರಿನ ಪೂರೈಕೆ.
ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವzಲ್ಲಿ ವಿವಿಧ ಸಂಘ ಸಂಸ್ಥೆಗಳು, ಒಕ್ಕೂಟಗಳು, ಮಹಿಳಾ ಮಂಡಳಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಪ್ರತ್ಯಕ್ಷ, ಪರೋಕ್ಷ ರೂಪಗಳಲ್ಲಿ ಸೇವೆ ಮಾಡುತಿದ್ದಾರೆ. ಕಳೆದ ೭-೮ ವರ್ಷಗಳಿಂದ ನಗರದ ಸುಕೋ ಬ್ಯಾಂಕಿನಿಂದ ಜಾತ್ರೆಗೆ ಬಂದ ಯತ್ರಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಸುವ ಸತ್ಕಾರ್ಯವನ್ನು ಮಾಡುತ್ತಾ ಬಂದಿದ್ದು,ಕಳೆದ ಮೂರು ದಿನಗಳಿಂದ ಪ್ರತಿದಿನ ೨೦೦೦ ಸಾವಿರ ಲೀಟರ್ ಶುದ್ದ ಕುಡಿಯುವ ನೀರನ್ನು ವಿತರಿಸಲಾಗಿದೆ. ಬ್ಯಾಂಕಿನ ಈ ಕಾರ್ಯಕ್ಕೆ ಪೂಜ್ಯರು ಮೆಚ್ಚುಗೆ ವ್ಯಕ್ತಪಡಿಸಿ ಆಶಿರ್ವದಿಸಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ.
ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಜಿಲ್ಲಾ ರೆಡ್ ಕ್ರಾಸ್ ಘಟಕ ಕೊಪ್ಪಳ ಹಾಗೂ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ೩ ದಿನಗಳ ರಕ್ತದಾನ ಶಿಬಿರಕ್ಕೆ ಇಟಗಿಯ ಪರಮಪೂಜ್ಯರು ಉದ್ಘಾಟಿಸಿ ಆಶಿರ್ವಚನ ನೀಡಿ ಬಳಿಕ ರಕ್ತದಾನವು ಒಂದು ಉತ್ತಮ ಕಾರ್ಯವಾಗಿದ್ದು ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಸರಿಯಾದ ಸಮಯದಲ್ಲಿ ದಾನ ಮಾಡುವುದರ ಮೂಲಕ ಅವರ ಜೀವವನ್ನು ಊಳಿಸುವ ಸತ್ಕಾರ್ಯಕ್ಕಿಂತ ಬೇರೆ ಕಾರ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ವಾಮಿ ಜ್ಞಾನಮಯಾನಂದ ಋಷಿಕೇಶಸ್ವಾಮಿಜಿ, ಪ್ರಾಚಾರ್ಯರಾದ ಡಾ|| ಬಿ ಎಸ್ ಸವಡಿ, ಡಾ|| ಚಂದ್ರಶೇಖರ ಕರಮುಡಿ, ಡಾ|| ಗವಿ ಪಾಟೀಲ್, ರೆಡ್ ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿಯಾದ ಡಾ||ಶ್ರೀನಿವಾಸ ಹ್ಯಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ದಿನಾಂಕ ೧೩ ರಂದು ಆರಂಭದ ದಿನದಲ್ಲಿ ೩೦೨, ಇಂದು ೧೭೫ ಯುನಿಟ್ ಸಂಗ್ರಹವಾಗಿದೆ. ನಾಳೆಯೂ ಶಿಭಿರವು ಮುಂದುವರೆಯಲಿದೆ.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಅನೇಕ ಕಾಣದ ಕೈಗಳು ತೆರೆಯ ಮರೆಯ ಹಿಂದೆ ಸೇವೆಸಲ್ಲಿಸುತ್ತಿದ್ದಾರೆ. ಜಾತ್ರೆಯಲ್ಲಿ ಸೇವೆ ಸಲ್ಲಿಸುವದಕ್ಕೆ ನಾಮುಂದು ತಾಮುಂದು ಎಂದು ಅನೇಕ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಸ್ವ – ಇಚ್ಚೇಯಿಂದ ಬೇರೆ ಬೇರೆ ರೀತಿಯ ತೊಡಗಿರುವದು ಕಾಣುತ್ತೇವೆ. ಹಾಗೆಯೇ ಅದರಲ್ಲಿ ಸ್ವಾಭಿಮಾನ ಅಭಿವೃದ್ಧಿ ಸಂಸ್ಥೆ, ಗಂಗಾವತಿಯ ಪುರಷ ಮತ್ತು ಮಹಿಳೆಯರು ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಶ್ರೀ ಮಠದ ಮಹಾದಾಸೋಹದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಭಕ್ತರಿಗೆ ಪ್ರಸಾದ ಬಡಿಸುವ ಸೇವೆಸಲ್ಲಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುತ್ತಾರೆ. ಇವರ ಸೇವೆ ಅತ್ಯಂತ ಸ್ಮರಣೀಯವಾದದು ಇವರ ಸೇವಾ ಕಾರ್ಯಕ್ಕೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

Please follow and like us:
error