ಜಾತ್ರಾ ನಿಮಿತ್ಯ ಮ್ಯಾರಥಾನ್ ಹಾಗೂ ಕಬಡ್ಡಿ ಪಂದ್ಯಾವಳಿ ಆಯೋಜನೆ – ಶ್ರೀನಿವಾಸ್ ಗುಪ್ತಾ

ಕೊಪ್ಪಳ :  ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ . ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿವರ್ಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ  ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ ಮ್ಯಾರಾಥಾನ್ ಸ್ಪರ್ದೇ ನಡೆಯುತ್ತಿದೆ. ಇದೇ 20ರಂದು ಸ್ಪರ್ದೆ ನಡೆಯಲಿದೆ. ಈ ಸಲದ ಮ್ಯಾರಾಥಾನ್ ನಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸ್ಪರ್ಧೆ ಗಳು ಇವೆ . ಹಾಲವರ್ತಿ ಕ್ರಾಸ್ ನಿಂದ ಮಳೆ ಮಲ್ಲೇಶ್ವರ ಕ್ರಾಸ್ ವರೆಗೆ  ಮ್ಯಾರಾಥಾನ್ ನಡೆಯಲಿದೆ. ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಸೋಸಿಯೇಷನ್  ಗೌರವಾಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಮಾಹಿತಿ ನೀಡಿದರು.  ಇದೇ ಸಂದರ್ಭದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಯ ಕುರಿತು ವಿವರಣೆ ನೀಡಿದರು.  ಕಬಡ್ಡಿ ಪಂದ್ಯಾವಳಿಯು 23 ಮತ್ತು 24ರಂದಯ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ ಎಂದು ಹೇಳಿದರು

Please follow and like us:
error