ಜಾತ್ರಾ ಉತ್ಸವಕ್ಕೆ ಇಂಟರ್ ನೆಟ್ ಸೇವೆ

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸವ ಜನವರಿ ೨೨ ರಂದು ಜರಗುತ್ತಿರುವ ನಿಮಿತ್ಯ ಮಹೋತ್ಸವದಲ್ಲಿ ಜರುಗುವ ಧಾರ್ಮಿಕ, ಸಾಂಸ್ಕೃತಿಕ ಮತ್ತು ಇತರ ಎಲ್ಲಾ ಚಟುವಟಿಕೆಗಳನ್ನು ಭಕ್ತರಿಗೆ ತತಕ್ಷಣವೇ ಮಾಹಿತಿಯನ್ನು ರವಾನಿಸಲು ವಿದ್ಯೂನ್ಮಾನ ಮಾಧ್ಯಮದ ವಿವಿಧ ಸಾಧನಗಳನ್ನು ಬಳಸಿಕೊಳ್ಳಲಾಗುತ್ತದೆ.
ಶ್ರೀ ಗವಿಮಠದ ಸಮಗ್ರ ಜಾತ್ರಾ ಚಟುವಟಿಕೆಗಳ ಮಾಹಿತಿಯನ್ನು ಗವಿಮಠದ ಅಧಿಕೃತ ವೆಬ್‌ಸೈಟಿನಲ್ಲಿ (www.gavimathkoppal.com) ಬಿತ್ತರಿಸಲಾಗುತ್ತದೆ. ಜಾತ್ರಾ ಮಹೋತ್ಸವದ ಮಾಹಿತಿಗಾಗಿ ಪ್ರತ್ಯೇಕ ವ್ಯಾಟ್ಸ್‌ಪ್ ಸಂಖ್ಯೆಯನ್ನು (ವಾಟ್ಸಾಪ್ ಸಂಖ್ಯೆ ೭೪೮೩೨೬೩೦೦೪) ನೀಡಲಾಗಿದೆ, ಸದರಿ ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡು ನಂತರ ಜಾತ್ರಾ ಮಾಹಿತಿಗಾಗಿ ಆಸಕ್ತ ಭಕ್ತರು ತಮ್ಮ ಹೆಸರು ಮತ್ತು ವಿಳಾಸವನ್ನು ಮೇಲ್ಕಾಣಿಸಿದ ಸಂಖ್ಯೆಗೆ ವಾಟ್ಸಪ್ ಮಾಡಬೇಕು.
ಗವಿಮಠದ ವೆಬ್‌ಸೈಟ್ ನಿರ್ವಹಣೆ (www.gavimathkoppal.com). ದಿನಾಂಕ: ೨೨-೦೧-೨೦೧೯ ರಿಂದ ಗವಿಸಿದ್ಧೇಶ್ವರ ಮಹಾರಥೋತ್ಸವ ಹಾಗೂ ಕೈಲಾಸ ಮಂಟಪದಲ್ಲಿ ಜರುಗುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಗವಿಮಠದ ವೆಬ್‌ಸೈಟ್‌ನಲ್ಲಿ ಲಭ್ಯವಾಗುವದು.
ಶ್ರೀಗವಿಮಠದ ಭಕ್ತರ ಲಭ್ಯವಿರುವ ದೂರವಾಣಿ ಸಂಖ್ಯೆಗಳಿಗೆ ಆಮಂತ್ರಣದ ಮುದ್ರಿತ ಧ್ವನಿ ಕರೆ. ಜಾತ್ರಾ ಮಾಹಿತಿಯನ್ನು ಎಸ್.ಎಂ.ಎಸ್ ರೂಪದಲ್ಲಿ ಕಳುಹಿಸುವದು… ಶ್ರೀಗವಿಮಠದ ವಾಟ್ಸಾಫ್ ಮೂಲಕ ಜಾತ್ರೆಯ ಮಾಹಿತಿಗಳನ್ನು ನೀಡಲಾಗುವದು. ಶ್ರೀಗವಿಮಠದ ಫೆಸ್ ಬುಕ್ ಫೇಜ್ ಸೃಷ್ಠಿಸಲಾಗಿದೆ. (www.gavimathkoppal.com ) www.facebook.com/gavimath.koppal ಫೇಸ್ ಬುಕ್ ಮೂಲಕ ಜಾತ್ರೆಯ ಮಾಹಿತಿ ಕಳುಹಿಸಲಾಗುವದು. ಜಾತ್ರೆಯ ನೇರ ಪ್ರಸಾರವನ್ನು ಫೇಸ್ ಬುಕ್ ಮೂಲಕ ಭಕ್ತರು ವೀಕ್ಷಿಸುವಂತೆ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಉಲ್ಲತ್ತಿ ಮೊಬೈಲ್ ಸಂಖ್ಯೆ-೯೯೮೬೨೬೯೪೪೨ ಸಂಪರ್ಕಿಸಲು ಕೊರಲಾಗಿದೆ.

Please follow and like us:
error