ಜಾತಿಗಳು ಇವರಪ್ಪನ ಆಸ್ತಿಯಲ್ಲ. ಎಲ್ಲಾ ಆಸ್ತಿನೂ ಬಿಜೆಪಿಯದೆ-ಕೆ.ಎಸ್.ಈಶ್ವರಪ್ಪ

ಕೊಪ್ಪಳ :ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿದ್ದಕ್ಕೆ ಇಡೀ ಪ್ರಪಂಚವೇ ಸಂಭ್ರಮಿಸಿ ಸ್ವಾಗತಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಭಾನುವಾರ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಹಾಗೂ ಸಂಸದ ಸಂಗಣ್ಣ ಕರಡಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿಗೆ ಜಾತಿವಾರು, ವರ್ಗವಾರು ಮತ ನೀಡಲ್ಲ ಎಂದು ಹೇಳಿದ್ದ ಅನೇಕರು ಮುಖಮುಚ್ಚಿ ಓಡಾಡುವಂತಾಗಿದೆ. ತೊಡೆತಟ್ಟಿ, ಡ್ಯಾನ್ಸ್ ಮಾಡಿದವರೆಲ್ಲ ಇಂದು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸುಮಾಲತ ಬಗ್ಗೆ ಅಪಪ್ರಚಾರ ಮಾಡಿದ ಜೆಡಿಎಸ್, ದೇವೇಗೌಡಗೆ ಒಕ್ಕಲಿಗರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಕುರುಬರಿಗೆ ಮೂರು ಸೀಟು ಕೊಟ್ಟು ನಮಗೆ ಮಾತನಾಡಿದ್ದ ಸಿದ್ದರಾಮಯ್ಯಗೆ ಕುರುಬರೇ ದೂರ ಮಾಡಿದ್ದಾರೆ. ಬರುವ ದಿನಗಳಲ್ಲಿ ದೇಶದಲ್ಲಿ ಜಾತಿ ಮತ ಪಂಥ ವರ್ಗ ಎಲ್ಲವೂ ಹೋಗಿ ಕೇವಲ ಅಭಿವೃದ್ಧಿಗೆ ಮತ ಕೇಳುವ ದಿನಗಳು ಬರುತ್ತಿವೆ. ಜಾತಿ ಬಗ್ಗೆ ಪ್ರತಿ ಚುನಾವಣೆಯಲ್ಲಿ ಕೇಳಿ ಕೇಳಿ ಸಾಕಾಗಿದೆ. ಜಾತಿಗಳು ಇವರಪ್ಪನ ಆಸ್ತಿಯಲ್ಲ. ಎಲ್ಲಾ ಆಸ್ತಿನೂ ಬಿಜೆಪಿಯದೆ. ಮುಸ್ಲಿಂರಿಗೆ ಕಾಂಗ್ರೆಸ್, ಜೆಡಿಎಸ್ ಮೋಸ ಮಾಡಿವೆ ಎಂಬ ಅರಿವು ಬಂದ ಕಾರಣ ಅವರೂ ಸಹ ನಮಗೆ ಮತ‌ ನೀಡಿ ಬೆಂಬಲಿದಿದ್ದಾರೆ. ಇನ್ಮೇಲೆ ಯಾವತ್ತೂ ಕೂಡ ಜಾತಿ ಮೇಲೆ ಚುನಾವಣೆ ಮಾಡಬೇಡಿ. ಅದಕ್ಕೆ ಕಾಂಗ್ರೆಸ್ ಸರಿಯಾದ ಪಾಠ ಕಲಿತಿದೆ. ಒಕ್ಕಲಿಗರ ಪರ ಮಾತನಾಡಿ ಬರೀ ಕುಟುಂಬದವರೆ ಅಧಿಕಾರಕ್ಕೆ ಬಂದರು.‌ಇನ್ನೊಮ್ಮೆ ಜಾತಿ ಎಂದರೆ ಜನರು ಮತ್ತೊಮ್ಮೆ ಒದಿತಾರೆ. ಹೀಗಾಗಿ ಇಡೀ ದೇಶ ಮೋದಿಗೆ ಮತ ನೀಡಿ ನಾವೆಲ್ಲ ರಾಷ್ಟ್ರೀಯವಾದಿಗಳು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಜೆಡಿಎಸ್ ಗೆ ಟಾಂಗ್ ನೀಡಿದರು.
ಸೋತಮೇಲೆ ಅದನ್ನು ಒಪ್ಪಬೇಕು. ಅದು ಬಿಟ್ಟು ಸತ್ಯಶೋಧನಾ ಸಮಿತಿ ಮಾಡಿ ಹೇಗೆ ಸೋತೆವು ಅಂತ ತಿಳಿದುಕೊಳ್ಳಲು. ಲೋಕಸಭಾ ಸದಸ್ಯ ಹೇಗೆ ಇರಬೇಕು ಎಂದರೆ ಅದು ಸಂಗಣ್ಣನ ಹಾಗೆ ಇರಬೇಕು. ಸಂಗಣ್ಣ ಜಾತಿ ನೋಡಿ ಅಭಿವೃದ್ಧಿ ಮಾಡಲಿಲ್ಲ. ಎಲ್ಲರನ್ನೂ ಮುನ್ನೆಲೆಗೆ ತಂದಿದ್ದಾರೆ.ಜಾತಿ ಮೀರಿ ಮತ ಹಾಕಿದ್ದು ಕೊಪ್ಪಳದ ಜನ. ಇಷ್ಟುದಿನ ಭರ್ಜಿರಿ ಊಟ ಮಾಡಿ ಮಲಗಿದ ಹನುಮನಂತೆ. ಒಮ್ಮೆ ಮೇಲೆದ್ದರೆ ಅದರ ಹೊಡೆತವೇ ಬೇರೆ ಇರುತ್ತದೆ. ಬರೋ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಗೆದ್ದು ಲಾಡು ಊಟ ಮಾಡೋಣ.ಪಾಕಿಸ್ತಾನ ಬಾಲ ಬಿಚ್ಚಲಿ ಈಗ. ಉಗ್ರರು ಬಾಂಬ್ ಹಾಕಿದಾಗ ಕೇವಲ ಹಿಂದೂಗಳು ಸತ್ತಿಲ್ಲ. ಮುಸ್ಲಿಮರು ಸತ್ತಿದ್ದಾರೆ. ಮೌಲ್ವಿಗಳನ್ನು ಕೊಂದಿದ್ದಾರೆ. ಜಗತ್ತಿನ ಭಯೋತ್ಪಾದನೆ ತೊಡೆದು ಹಾಕಲು ಮೋದಿಗೆ ಮಾತ್ರ ಸಾಧ್ಯ ಎಂದು ಇಡೀ ಪ್ರಪಂಚದ ಜನ ಒಪ್ಪಿದ್ದಾರೆ.
ವಿಧಾನಸಭಾ ಚುನಾವಣೆ ಯಾವ ಕ್ಷಣದಲ್ಲಾದರೂ ಬರಬಹುದು. ಆ ಎರಡೂ ಪಕ್ಷದವರೂ ಕಚ್ಚಾಡುತ್ತಿದ್ದಾರೆ. ಐಎಂಎ ಹಗರಣದ ಕುರಿತು ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಬಾಯಿ ಬಿಡುತ್ತಿಲ್ಲ. ಸಿದ್ದು ಜಮೀರ್ ದೇವೇಗೌಡ, ಎಲ್ಲರೂ ಬೀಗರು. ಮನ್ಸೂರು ಜೊತೆ ಬಿರಿಯಾನಿ ತಿನ್ನುವಾಗ ಇವರಿಗೆ ಗೊತ್ತಾಗಲಿಲ್ವಾ. ಈ ಮೊದಲೇ ಎಚ್ಚರಿಕೆ ನೀಡಿದರೂ ಎಚ್ಚರವಾಗದ ಇವರು ಮೈರೆತರು. ಜಮೀರ್ ನನ್ನು, ರೋಷನ್ ಬೇಗ್ ರನ್ನು ಒದ್ದು ಒಳಗೆ ಹಾಕಿ ಬಾಯಿ ಬಿಡಿಸಲಿ. ನಿಖಿಲ್ ಸೋತರೆ ದೇವೇಗೌಡ ಅಳುತ್ತಾರೆ. ಅದೇ ಮುಸ್ಲಿಂ ಬಡ ಹೆಣ್ಣುಮಕ್ಕಳ ಕಷ್ಟಕ್ಕೆ ಅವರಿಗೆ ಕಣ್ಣೀರು ಬರಲ್ಲ. ಬದುಕಿರೋವರೆಗೂ ಜಾತಿ ರಾಜಕೀಯ ಮಾಡಲ್ಲ ಎಂದು ತೀರ್ಮಾನ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಹಿಂದೆ ಅಮೆರಿಕಾದಲ್ಲಿ ಚುನಾವಣೆ ನಡೆದಾಗ ಇಡೀ ಜಗತ್ತೆ ಅತ್ತ ನೋಡುತ್ತಿತ್ತು. ಆದರೆ ಈ ಬಾರಿ ಭಾರತದ ಚುನಾವಣೆಯತ್ತ ಇಡೀ ಜಗತ್ತೆ ನಮ್ಮತ್ತ ನೋಡುವಂತಾಯಿತು. ಆ ರೀತಿ ಚುನಾವಣೆ ನಡೆದು ಮೋದಿ ಅಭೂತಪೂರ್ವ ಗೆಲುವು ಪಡೆದರು. ದೇಶದ ಜನತೆಗೆ ಮೂಲ ಸೌಕರ್ಯ ನೀಡಿದ್ದು ಮೋದಿ, ಆಯುಷ್ಮಾನ್ ಭಾರತ್ ಯೊಜನೆ ಸೇರಿ ಹಲವು ಜನೋಪಯೋಗಿ ಯಿಒಜನೆಗಳನ್ನು ಜಾರಿಗೆ ತಂದರು. ಮೋದಿಯದು ಬಡಜನರ ಪರ ಸರ್ಕಾರವಾಗಿದೆ ಎಂದರು.
ಹೆದ್ದಾರಿ, ರೈಲ್ವೆ, ಜಲಮಾರ್ಗ, ವಾಯುಯಾನ ಸೇರಿ ಬಡಜನರೂ ಸಹ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದು. ಹೆದ್ದಾರಿ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದೆ. ಗಿಣಿಗೇರಿ-ಮೆಹಬೂಬ್ ನಗರ ರೈಲು ಮೋದಿ ಸಹಕಾರದಿಂದ ಓಡುತ್ತಿದೆ. ರಾಜ್ಯದ ಮೂವರು ಸಚಿವರಾಗಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಅನುಕೂಲವಾಗಲಿದೆ. ಚಿತ್ರದುರ್ಗ-ಸೊಲಾಪುರ ರೈಲು ಮಾರ್ಗಕ್ಕೆ ಒಂದು ಕೋಟಿ ಹಣ ನೀಡಿ ಸರ್ವೆ ಮಾಡಲು ಮುಂದಾಗಿದೆ. ದರೋಜಿ-ಗಂಗಾವತಿ ಹೊಸ ಮಾರ್ಗಕ್ಕೆ ಬೇಡಿಕೆ ಇಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ದಾಳಿಯಾದಾಗ ಪ್ರತಿದಾಳಿ ನಡೆಯಲಿಲ್ಲ. ಆದರೆ ಬಾಲಕೋಟ್ ದಾಳಿ ನಂತರ ಕೇಂದ್ರ ಸರ್ಕಾರ ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದರು.‌ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ದೇಶದ ಜನತೆ ಅಧಿಕಾರ ನೀಡಿದ್ದಾರೆ. ಮಹಾಘಟಬಂಧನಕ್ಕೆ ಜನತೆ ಮರ್ಮಾಘಾತ ನೀಡಿದ್ದಾರೆ. ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನ ಮಾಡಿ ತರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಅಮರೇಶ ಕರಡಿ, ಮಾಜಿ ಶಾಸಕ ಕೆ. ಶರಣಪ್ಪ, ಕೇಸರಟ್ಟಿ ವೀರಪ್ಪ, ಅಂದಣ್ಣ ಅಗಡಿ, ಕೆ.ಬಿ. ಶ್ರೀನಿವಾಸರಡ್ಡಿ, ಎಚ್. ಗಿರೇಗೌಡ, ಡಿ. ಮಲ್ಲಣ್ಣ, ಬಸವಲಿಂಗಪ್ಪ ಭೂತೆ, ಚೊಕ್ಕಬಸವನಗೌಡ, ಚಂದ್ರಶೇಖರ್ ಕವಲೂರು, ಪೀರಾಹುಸೇನ್ ಹೊಸಳ್ಳಿ,

Please follow and like us:
error