ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆಯ ಕೊಪ್ಪಳ ಘಟಕಗಳ ಉದ್ಘಾಟನೆ

೧೦೦ ನೇ ಶರಣ ಹುಣ್ಣಿಮೆ ಕಾರ್ಯಕ್ರಮ ಹಾಗೂ

ಕೊಪ್ಪಳ: ವಿಶ್ವಗುರು ಬಸವೇಶ್ವರ ಟ್ರಸ್ಟ್ (ರಿ) ಕೊಪ್ಪಳ ಮಾಸಿಕ ಕಾರ್ಯಕ್ರಮವಾದ ೧೦೦ ನೇ ಶರಣ ಹುಣ್ಣಿಮೆ ಕಾರ್ಯಕ್ರಮ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆಯ ಕೊಪ್ಪಳ ಘಟಕಗಳ ಉದ್ಘಾಟನೆ ಕಾರ್ಯಕ್ರಮವು ಕಿನ್ನಾಳ ರಸ್ತೆಯ ಎಫ್.ಸಿ.ಐ. ಗೋದಾಮ ಹತ್ತಿರ ಇರುವ ಗುರುಬಸವ ಮಹಾಮನೆಯಲ್ಲಿ ದಿನಾಂಕ:೨೨-೧೨-೨೦೧೮ರ ಶನಿವಾರ ದಂದು ಸಂಜೆ ೬-೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪರಮಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು, ಶ್ರೀ ಗುರುಬಸವ ಮಹಾಮನೆ ಮನಗುಂಡಿ, ಧಾರವಾಡ. ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಇವರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕೆ.ಶರಣಪ್ಪ, ಮಾಜಿ ಶಾಸಕರು, ಕುಷ್ಟಗಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಅಧ್ಯಕ್ಷರು, ಬಸವ ಸಮಿತಿ ಕೊಪ್ಪಳ, ಶ್ರೀ ಚಂದ್ರಶೇಖರ ಕವಲೂರ, ಮಾಜಿ ಅಧ್ಯಕ್ಷರು, ನಗರಸಭೆ ಕೊಪ್ಪಳ, ಶ್ರೀ ಡಾ. ಬಸವಯ್ಯ ಸಸಿಮಠ, ಗುರುಬಸವ ಮಹಾಮನೆ ಕೊಪ್ಪಳ, ಶ್ರೀ ಗವಿಸಿದ್ದಪ್ಪ ಕೊಪ್ಪಳ, ಜಿಲ್ಲಾ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ ಕೊಪ್ಪಳ, ಶ್ರೀ ಡಾ. ಶಿವಕುಮಾರ ಮಾಲೀಪಾಟೀಲ್, ಮುಖಂಡರು ಗಂಗಾವತಿ, ಶ್ರೀ ಮುನಿಯಪ್ಪ ಹುಬ್ಬಳ್ಳಿ, ಮುಖಂಡರು ಯಲಬುರ್ಗಾ, ಶ್ರೀ ವೈಜನಾಥ ದಿವಟರ, ಮುಖಂಡರು ಕೊಪ್ಪಳ, ಶ್ರೀ ಹೇಮರಡ್ಡೆಪ್ಪ ಬಿಸರಳ್ಳಿ, ಮುಖಂಡರು ಕೊಪ್ಪಳ, ಶ್ರೀ ನಿರ್ಮಲಾ.ವಿ.ಬಳ್ಳೊಳ್ಳಿ, ಜಿಲ್ಲಾ ಅಧ್ಯಕ್ಷರು, ಕದಳಿ ವೇದಿಕೆ ಕೊಪ್ಪಳ, ಶ್ರೀ ಮಂಜುನಾಥ ಹಂದ್ರಾಳ, ಅಧ್ಯಕ್ಷರು, ಜಿಲ್ಲಾ ಹಡಪದ ಸಮಾಜ ಕೊಪ್ಪಳ, ಶ್ರೀ ಶರಣಪ್ಪ ಬಾಚಲಾಪೂರ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕೊಪ್ಪಳ, ಶ್ರೀ ಶಂಕರಪ್ಪ ಮಡಿವಾಳ, ಮುಖಂಡರು ಕೊಪ್ಪಳ, ಶ್ರೀ ಆನಂದ ಅಳವಂಡಿ, ಮುಖಂಡರು ಕೊಪ್ಪಳ, ಶ್ರೀ ಮಾರುತೆಪ್ಪ ಅಂಗಡಿ, ಮಾಜಿ ಅಧ್ಯಕ್ಷರು, ಪಿಕಾರ್ಡ ಬ್ಯಾಂಕ ಕೊಪ್ಪಳ, ಶ್ರೀ ಗುರುರಾಜ ಹಲಗೇರಿ, ನಗರಸಭೆ ಸದಸ್ಯರು ಕೊಪ್ಪಳ, ಶ್ರೀ ಚೆನ್ನಪ್ಪ ಕೋಟ್ಯಾಳ, ನಗರಸಭೆ ಸದಸ್ಯರು ಕೊಪ್ಪಳ, ಶ್ರೀ ಗಾಳೆಪ್ಪ ಕಡೇಮನಿ, ಮುಖಂಡರು ಕೊಪ್ಪಳ, ಶ್ರೀ ಮಂಜುನಾಥ ಗೊಂಡಬಾಳ, ಯುವ ಮುಖಂಡರು ಕೊಪ್ಪಳ, ಶ್ರೀ ಕಾಶಪ್ಪ ಛಲವಾದಿ, ಮಾನವ ಬಂಧುತ್ವ ವೇದಿಕೆ, ಕೊಪ್ಪಳ, ಶ್ರೀ ಸುರೇಶ ಕುಂಬಾರ, ಶಿಕ್ಷಕರು ಕೊಪ್ಪಳ, ಶ್ರೀ ಶಿವಸಂಗಪ್ಪ ವಣಗೇರಿ, ಮುಖಂಡರು ಭಾಗ್ಯನಗರ ಇವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಕಾರ್ಯದರ್ಶಿ ರಾಜೇಶ ಸಸಿಮಠ ಮನವಿ ಮಾಡಿದ್ದಾರೆ.

Please follow and like us:
error