Breaking News
Home / Koppal News / ಜಮೀರ್ ಅಹ್ಮದಖಾನ್ ೫೨ನೇ ಹುಟ್ಟು ಹಬ್ಬದ ಆಚರಣೆ
ಜಮೀರ್ ಅಹ್ಮದಖಾನ್ ೫೨ನೇ ಹುಟ್ಟು ಹಬ್ಬದ ಆಚರಣೆ

ಜಮೀರ್ ಅಹ್ಮದಖಾನ್ ೫೨ನೇ ಹುಟ್ಟು ಹಬ್ಬದ ಆಚರಣೆ


ಕೊಪ್ಪಳ : ನಗರದ ಬಾಲಕರ ಬಾಲಮಂದಿರದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಇತ್ತೀಚಿಗೆ ಸಚಿವ ಬಿ. ಝಡ್ ಜಮೀರ್ ಅಹ್ಮದಖಾನ್‌ರವರ ೫೨ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಬಾಲಮಂದಿರ ಮಕ್ಕಳೊಂದಿಗೆ ಕೆಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಜಮೀರ್ ಅಹ್ಮದಖಾನ್ ೫೨ನೇ ಹುಟ್ಟು ಹಬ್ಬವನ್ನು
ಆಚರಿಸಲಾಯಿತು. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯದ್ ಮರ್ತುಜಾ, ತಾಲೂಕ ಅಧ್ಯಕ್ಷ ಸೈಯದ್ ಗೌಸುಹುಸೇನಿ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಬ್ಧುಲ್ ವಹಾಬ್ ರಾಟಿ ಇತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ಮುಖಂಡರುಗಳಾದ ನಿಸಾರ್ ಅಹ್ಮದ ಅಡ್ಡೇವಾಲೆ, ಮಾನ್ವಿ ಪಾಷ, ಹುಸೇನಿ ಫೀರಾ ಮುಜಾವರ, ಪೋಲಿಸ್ ಇಲಾಖೆಯ ಛಾಂದ್ ಪಾಷಾ, ಜಮಲಾ ದಪೆದಾರ, ವಸೀಮ್ ಅಶ್ರಫ್, ಸೈಯದ್ ಶಫ್ರುದ್ದೀನ್ ಹುಸೇನಿ, ಸೈಯದ್ ಹಿಲಿಯ್ಯಾಸ್, ಸೈಯದ್ ಹಾಜಿ ಹುಸೇನಿ, ಬಾಲ ಮಂದಿರ ಮುಖ್ಯಸ್ಥರಾದ ಸರೋಜಾ ಬಾಕಳೆ, ನಿಲೋಪರ್, ಅಧೀಕ್ಷಕರು ಹಾಗೂ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

About admin

Comments are closed.

Scroll To Top