ಜನ ಸಾಮಾನ್ಯರಿಗೆ ಉಪಯುಕ್ತವಾಗಲಿರುವ ಪಾಸ್‍ಪೋರ್ಟ ಸೇವಾ ಕೇಂದ್ರ : ಕರಡಿ ಸಂಗಣ್ಣ

ಕೊಪ್ಪಳದಲ್ಲಿ ಅಂಚೆ ಕಛೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ

ಕೊಪ್ಪಳ ಜ. : ಕೊಪ್ಪಳದಲ್ಲಿ ಅಂಚೆ ಕಛೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರವು ಗುರುವಾರಂದು ಕಾರ್ಯಾರಂಭವಾಗಿದ್ದು, ಪಾಸ್‍ಪೋರ್ಟ್ ಸೇವಾ ಕೇಂದ್ರವು ಜಿಲ್ಲೆಯ ಹಾಗೂ ಸುತ್ತ ಮುತ್ತಲಿನ ಜನ ಸಾಮಾನ್ಯರಿಗೆ ಉಪಯುಕ್ತವಾಗಲಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಭಾರತ ಸರ್ಕಾರದ ಬಾಹ್ಯ ವ್ಯವಹಾರಗಳ ಸಚಿವಾಲಯ ಮತ್ತು ಗದಗ ವಿಭಾಗದ ಅಂಚೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಸ್ಥಾಪಿಸಲಾದ “ಅಂಚೆ ಕಛೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರ”ದ ಉದ್ಘಾಟನೆ ಕುರಿತು ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಆಯೋಜಿಸಲಾದ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಜನಸಾಮಾನ್ಯರ ಅನುಕೂಲವಾಗುವ ರೀತಿಯಲ್ಲಿ ಹಾಗೂ ಪ್ರತಿಯೊಬ್ಬರಿಗೂ ಈ ಸೇವೆಯನ್ನು ಪಡೆಯವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅಂಚೆ ಕಛೇರಿ ಪಾಸ್‍ಪೋರ್ಟ ಸೇವಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದು, ದೇಶದ ಒಟ್ಟು 251 ಲೋಕಸಭಾ ಕ್ಷೇತ್ರಗಳಲ್ಲಿ ಅಂಚೆ ಕಛೇರಿ ಪಾಸ್‍ಪೋರ್ಟ ಸೇವಾ ಕೇಂದ್ರಗಳು ಮಂಜೂರಾಗಿದ್ದು, ಪ್ರಪ್ರಥವಾಗಿ ಪಾಸ್‍ಪೋರ್ಟ ಸೇವಾ ಕೇಂದ್ರವು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಾರಂಭಗೊಂಡಿದ್ದು, ಹೆಮ್ಮೆಯ ವಿಷಯವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಅಂಚೇ ಇಲಾಖೆ ಅಧಿಕಾರಿಗಳ ಶ್ರಮವು ಮಹತ್ವದ್ದಾಗಿದೆ. ಪಾಸ್‍ಪೋರ್ಟ್ ಕೇಂದ್ರದಿಂದ ನಮ್ಮ ಜಿಲ್ಲೆಯ ಜನರು ಅವರ ಜೀವನೋಪಾಯಕ್ಕೆ ಉದ್ಯೋಗ ಹಲಸಿ ಹೋಗುವುದಕ್ಕೆ ಉಪಯುಕ್ತವಾಗುವುದು. ಅಲ್ಲದೇ ಜಿಲ್ಲೆಯ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ವಿದೇಶ ವಿದ್ಯಾಭ್ಯಾಸಕ್ಕೆ, ವ್ಯಾಪಾರ, ಪ್ರವಾಸೋದ್ಯಮಕ್ಕೆ ತುಂಬಾ ಸಹಕಾರಿಯಾಗಲಿದೆ. ಹಜ್ ಯಾತ್ರೆಗಳಂತಹ ಧಾರ್ಮಿಕ ಸ್ಥಳಗಳಿಗೆ ಹೋಗುವ ಎಲ್ಲಾ ಜನರಿಗೆ ಈ ಕೇಂದ್ರ ಪ್ರಯೋಜನವಾಗಲಿದೆ. ಕೊಪ್ಪಳ ಜಿಲ್ಲೆಯವರು ಹಲವಾರು ಕ್ಷೇತ್ರಗಳಲ್ಲಿ ವಿವಿಧ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಪಾಸ್‍ಪೋರ್ಟ್ ಪಡೆಯಲು ದೂರದ ಜಿಲ್ಲೆಗಳಿಗೆ ಹೋಗಬೇಕಾಗುತ್ತಿತ್ತು. ಆದರೆ ಇನ್ಮುಂದೆ ಪಾಸ್‍ಪೋರ್ಟ್ ಅನ್ನು ಕೊಪ್ಪಳದಲ್ಲಿಯೇ ಪಡೆಯಬಹುದಾಗಿದೆ. ಇಂದು ಸುಮಾರು 50 ಜನರು ನಮಗೆ ಪಾಸ್‍ಪೋರ್ಟ್ ಬೇಕು ಎಂದು ಅಂಚೇ ಕಛೇರಿ ಪಾಸ್‍ಪೋಟ್ ಕೇಂದ್ರಕ್ಕೆ ಬಂಧಿದ್ದಾರೆ. ಪಾಸ್‍ಪೋಟ್ ಸೇವಾ ಕೇಂದ್ರಗಳ ಸಕ್ರೀಯ ಉಪಯೋಗಕ್ಕೆ ಕೇಂದ್ರ ಸರ್ಕಾರವು ಉಡಾನ ಯೋಜನೆಯನ್ನು ಜಾರಿಗೆ ತಂದಿದ್ದು, ದೇಶದ ವಿವಿದೆಡೆ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಿದೆ. ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕಾಗಿದ್ದು, ರಾಜ್ಯ ಸರ್ಕಾರವು ಸಹ ಒಪ್ಪಿಗೆ ನೀಡಲಿದೆ ಮತ್ತು ಜಿಲ್ಲೆ ಎಲ್ಲಾ ಶಾಸಕರು ಸಹಕರಿಸಬೇಕು. ಕೇಂದ್ರ ಸರ್ಕಾರ ಮಹತ್ವದ ಯೋಜನೆಯಾದ ಉಜ್ವಲ್ ಯೋಜನೆಯಡಿ 09 ಕೊಟಿ ಸಾಮಾನ್ಯ ಮಹಿಳೆಯರಿಗೆ ಇಂದು ಮನೆಮನೆಗೆ ಗ್ಯಾಸ್ ಸೌಲಭ್ಯವನ್ನು ತಲುಪಿದೆ. ಹಾಗೆಯೇ ಜನೌಷಧಿ ಯೋಜನೆ, ಆಯುಷ್‍ಮಾನ್ ಭಾರತ್, ಇತ್ಯಾಧಿ ಮಹತ್ವದ ಯೋಜನೆಗಳು ಜಾರಿಗೆಯಲ್ಲಿದ್ದು, ಬಡತನ ರೇಖೆಯವರಿಗೆ ತುಂಬಾ ಸಹಕಾರಿಯಾಗಲಿವೆ. ಕೊಪ್ಪಳ ಜಿಲ್ಲೆಯ ಅಂಚೆ ಕಛೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರದ ಸದುಪಯೋಗಪಡೆದುಕೊಳ್ಳುವಂತೆ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧೀಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ, ಕೊಪ್ಪಳದಲ್ಲಿ ಅಂಚೆ ಕಛೇರಿ ಪಾಸ್‍ಪೋರ್ಟ ಸೇವಾ ಕೇಂದ್ರವು ಅನುಮೊದನೆಯಾಗಿದ್ದು, ಜಿಲ್ಲೆಯ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಇಲಾಖೆಯ ಅಧಿಕಾರಿಗಳು ಜನರಿಗೆ ಇದರ ಬಗ್ಗೆ ಮನವರಿಕೆ ಮಾಡುವ ಮೂಲಕ ಹೆಚ್ಚು ಜನರಿಗೆ ಈ ಸೌಲಭ್ಯವನ್ನು ನೀಡಬೇಕು. ಅಂದು ನಮ್ಮ ವಿದ್ಯಾಭ್ಯಾಸ ಸಂದರ್ಭದಲ್ಲಿ ಪಾಸ್‍ಪೋರ್ಟ್‍ನ್ನು ಪಡೆಯಬೇಕಾದರೆ ಮೂರರಿಂದ ನಾಲ್ಕು ದಿನಗಳ ಕಾಲ ಕಾಯಬೇಗಾದ ದಿನಗಳು ಸಹ ಇದ್ದವು, ಇಂದು ಆ ರೀತಿಯಿಲ್ಲಿ ಇಂದು ಒಂದೇ ದಿನದಲ್ಲಿ ಪಾಸ್‍ಪೋರ್ಟ್ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ಸಾಮಾನ್ಯ ವ್ಯಕ್ತಿಯು ಸಹ ವಿಮಾನದಲ್ಲಿ ಓಡಾಡಲು ತುಂಬಾ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬರು ಈ ಸೇವೆಯನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಜಿ.ಪಂ. ಸದಸ್ಯರಾದ ರಾಮಣ್ಣ ಚೌಡ್ಕಿ ಹಾಗೂ ಗವಿಸಿದ್ದಪ್ಪ ಕರಡಿ, ಬೆಂಗಳೂರು ಉಪ ಪಾಸ್‍ಪೋರ್ಟ್ ಅಧಿಕಾರಿ ರಾಜೇಶ ಎನ್. ನಾಯ್ಕ, ಧಾರವಾಡ ಎನ್.ಕೆ. ಪ್ರದೇಶ ಅಂಚೆ ಸೇವೆಗಳ ನಿರ್ದೇಶಕ ಸಣ್ಣ ನಾಯ್ಕ, ಕೊಪ್ಪಳ ಡಿವೈಎಸ್ಪಿ ಸಂದೀಗೆವಾಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Please follow and like us:
error