ಜನ ಔಷಧಿ ಕೇಂದ್ರಕ್ಕೆ ಸಂಸದರ ಭೇಟಿ

koppal-mp

ಕೊಪ್ಪಳ: ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಡಿಯಲ್ಲಿ ಆರಂಭಗೊಳ್ಳಲಿರುವ ಭಾರತೀಯ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಕ್ಕೆ ಗುರುವಾರ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ದೇಶಾದ್ಯಂತ ಜನರಿಗೆ ಕಡಿಮೆ ಹಣದಲ್ಲಿ ಔಷಧಿ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜನ ಔಷಧಿ ಕೇಂದ್ರಗಳನ್ನು ತೆರೆಯುತ್ತಿದ್ದು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನ ಔಷಧಿ ಕೇಂದ್ರಗಳು ಆರಂಭಗೊಂಡು ಯಶಸ್ವಿ ಕರ್ಯ ನಿರ್ವಹಿಸುತ್ತಿವೆ. ಜನರಿಗೆ ಇದರಿಂದ ಆರೋಗ್ಯವೆಚ್ಚ ಕಡಿಮೆಯಾಗಿದ್ದು ಪ್ರತಿಯೊಬ್ಬರಿಗೂ ಈ ಸೌಲಭ್ಯ ದೊರೆಯುವಂತಾಗಬೇಕೆಂಬ ಸದಾಶಯದಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗೀತ್ವದಲ್ಲಿ ಶೀಘ್ರವೇ ಜನ ಔಷಧಿ ಕೇಂದ್ರ ಆರಂಭಗೊಳ್ಳಲಿದೆ. ನಗರದ ಜನತೆ ಇದರ ಸದೂಪಯೊಗ ಪಡೆದುಕೋಳ್ಳುವಂತಾಗಲಿ ಎಂದರು.

Please follow and like us:
error

Related posts

Leave a Comment