ಜನೇವರಿ 8, 9 ಭಾರತ್ ಬಂದ್‍ಗೆ ಐಎನ್‍ಟಿಯುಸಿ ಬೆಂಬಲ

ಕೊಪ್ಪಳ, ಜ. 06: ಜ. 8 ಮತ್ತು 9 ರಂದು ನಡೆಯುವ ಭಾರತ್ ಬಂದ್‍ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ಸಂಪೂರ್ಣ ಬೆಂಬಲ ನೀಡಲಿದ್ದು, ಅಂದಿನ ಹೋರಾಟಗಳಲ್ಲಿ ಪಾಲ್ಗೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ದೇಶದ ಎಲ್ಲಾ ಕಾರ್ಮಿಕರಿಗೆ ಮಾಸಿಕ 18000 ರೂ. ರಾಷ್ಟ್ರೀಯ ಸಮಾನ ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಹಾಗೂ ಮೋದಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ದ 8-9 ಜನವರಿ 2019 ರಂದು ಎರಡು ದಿನಗಳ ಸಾರ್ವತ್ರಿಕ ಮುಷ್ಕರವನ್ನು ಕಾಂಗ್ರೆಸ್ ಕಾರ್ಮಿಕ ವಿಭಾಗ ಐಎನ್‍ಟಿಯುಸಿ ಬೆಂಬಲಿಸುತ್ತಿದೆ. ಕೇಂದ್ರ ಸರಕಾರವು ಶಿಕ್ಷಣವನ್ನು ಮಾರಟದ ಸರಕನ್ನಾಗಿಸಿದೆ. ಯುಜಿಸಿಯನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ಭಾರತೀಯ ಉನ್ನತ ಶಿಕ್ಷಣ ಆಯೋಗ 2018 ತರಲು ಹೊರಟಿರುವದರ ಉದ್ದೇಶ ಶಿಕ್ಷಣವನ್ನು ಸಹ ಅಂಬಾನಿಗೆ ಗುತ್ತಿಗೆ ನೀಡುವದಾಗಿದೆ. ಅವರು ಕಳೆದ ಚುನವಣೆಯಲ್ಲಿ ಮೋದಿಯ ಬಿಜೆಪಿಗೆ ನಿಡಿದ ಸಾಲ ತೀರಿಸಿಲ್ಲವಾದ್ದರಿಂದ ಈ ರೀತಿ ಎನೆಲ್ಲಾ ಸಾಧ್ಯವೋ ಅದನ್ನು ಅವರ ಹೆಸರಿಗೆ ಬರೆದುಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ಘೋಷಿಸಿದಂತೆ ಸಾವಿರ ಇಂಗ್ಲೀಷ ಮಾಧ್ಯಮದ ಸರಕಾರಿ ಶಾಲೆಗಳನ್ನು ಪ್ರಾಂರಂಬಿಲೇಬೇಕು, ಅದನ್ನು ತಡೆಯುವವರ ವಿರುದ್ಧವೇ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವದು. ಸರಕಾರಿ ಶಾಲೆಯ ಮಕ್ಕಳು ಬೀದಿಗೆ ಬರಬೇಕಾಗುತ್ತದೆ. ಬಡವರಿಗೆ ಮಾತ್ರ ಕನ್ನಡವೇ? ಶ್ರೀಮಂತರ ಮಕ್ಕಳು ಕನ್ನಡ ಶಾಲೆಗೆ ಸೇರಿಸಲಿ, ಕನ್ನಡಪರ ಹೋರಾಟ ಮಾಡುವ ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ ಸರ್ಟಿಫಿಕೇಟ್ ತೋರಿಸಿ ಹೋರಾಟ ಮಾಡಬೇಕು, ಪುಗಸಟ್ಟೆ ಹೋರಾಟವನ್ನು ನೋಡುವದಕ್ಕೆ ನಾವು ಕುಂತಿಲ್ಲ, ಚಂಪಾ ಆಂಗ್ಲ ಪ್ರಾಧ್ಯಾಪಕರಾಗಿದ್ದಾರೆ, ಅವರ ಮೊಮ್ಮಕ್ಕಳನ್ನು ಮೊದಲು ಕನ್ನಡ ಸರಕಾರಿ ಶಾಲೆಗೆ ಸೇರಿಸಿ ನಂತರ ಮಾತನಾಡಲಿ. ನಮ್ಮ ಹಕ್ಕನ್ನು ನೀಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಮ್ಮ ಪೂರ್ತಿ ಬೆಂಬಲವಿದೆ ಎಂದು ತಿಳಿಸಿದ್ದಾರೆ

Please follow and like us:
error