ಜನೇವರಿ 8 ರಂದು ಶ್ರೀ ಶೇಖಣ್ಣಾಚಾರ ಅವರ 13ನೇ ಪುಣ್ಯ ಸ್ಮರಣೆ

ಕೊಪ್ಪಳ, ಜ. 06: ನಗರದ ಶ್ರೀ ಶೇಖಣ್ಣಾಚಾರ ಶಿಲ್ಪಿ ಅವರ 13ನೇ ಪುಣ್ಯ ಸ್ಮರಣೆ ಗವಿಶ್ರೀ ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ನಡೆಯಲಿದೆ. 08, ಜನೇವರಿ 2019 ರಂದು ಬೆಳಿಗ್ಗೆ 9 ಗಂಟೆಗೆ ಇದ್ದು ಭಕ್ತಾದಿಗಳು ಪಾಲ್ಗೊಳ್ಳಲು ವಿನಂತಿ. ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಟ್ರಸ್ಟ್ ಅಧ್ಯಕ್ಷ ಪ್ರಕಾಶ ಶಿಲ್ಪಿ ಅವರ 4417ನೇ ನಿತ್ಯ ಆಂಜನೇಯನ ಸೇವೆ ನಡೆಯಲಿದೆ. ಅಂದೇ ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮವಿದೆ ಎಂದು ಟ್ರಸ್ಟ್ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಅಶೋಕ ಬಜಾರಮಠ ತಿಳಿಸಿದ್ದಾರೆ.

Please follow and like us:
error