ಜನರ ಆಶೋತ್ರಗಳನ್ನು ಈಡೇರೆಸಿದ ಸರಕಾರ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ ೨೮- ಕ್ಷೇತ್ರದ ಗಿಣಿಗೇರಾ ಗ್ರಾಮದಲ್ಲಿ ರೂ೨.೦೦ ಕೋಟಿಯ ಸಮಾಜ ಕಲ್ಯಾಣ ಇಲಾಖೆ ಯೋಜನೆಡಿಯಲ್ಲಿ ಬಾಲಕರ ಮೇಟ್ರಕ ಪೂರ್ವ ವಸತಿ ನಿಲಯ ಕಾಮಾಗಾರಿಯ ಭೋಮಿ ಪೂಜೆ ಮತ್ತು ಜನಸ್ಪಂದನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಕಾಂಗ್ರೇಸ ಪಕ್ಷವು ಈ ರಾಜ್ಯದ ಜನರಿಗೆ ಚುನಾವನಾ ಪೂರ್ವದಲ್ಲಿ ಜನತೆಗೆ ನೀಡಿದ ಆಶೋತ್ತರಗಳನ್ನು ಹಂತ ಹಂತವಾಗಿ ಈಡೇರಿಸಿದೆ. ಕೊಪ್ಪಳ ಕ್ಷೇತ್ರದ ನೀರಾವರಿ ಯೋಜನೆಗಳು, ಶೈಕ್ಷಣಿಕ ಕ್ಷೇತ್ರ, ಆರೋಗ್ಯ ಕ್ಷೇತ್ರ, ಜನರ ದೈನಿಂದಿಕ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೂ ೧೬೦೦೦-೦೦ ಕೋಟಿ ಅನುದಾನ ತರಲಾಗಿದೆ ಸುಮಾರು ೧೫ ರಿಂದ ೧೬ ಸೇತುವೆಗಳು ಕ್ಷೇತ್ರದಲ್ಲಿ ೪.೫ ವರ್ಷದಲ್ಲಿ ಸಂಪೂರ್ಣಗೊಂಡಿವೆ ಬರುವ ದಿನಗಳಲ್ಲಿ ಡಂಬರಳ್ಳಿ, ಬೂದಿಹಾಳ ಗ್ರಾಮದ ಹತ್ತಿರ ಬ್ರೀಜ ಕಮ ಬ್ಯಾರೇಜ ಶೀಘ್ರವೇ ಕೈಗತ್ತಿ ಕೊಳ್ಳಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಗಳಾಸ ಶ್ರೀ ಕೆ.ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ, ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ತಾ ಪಂ ಅಧ್ಯಕ್ಷ ಬಾಲಚಂದ್ರ, ಬ್ಲಾಕ ಕಾಂಗ್ರೇಸ ಅಧ್ಯಕ್ಷ ಸುರೇಶ ಭೂಮರಡ್ಡಿ, ಮುಖಂಡರುಗಳಾದ ಕರೀಯಪ್ಪ ಮೇಟ್ಟಿ, ಮಾರುತೆಪ್ಪ ಹಲಗೇರಿ, ನಾಗರಾಜ ಚಳ್ಳೂಳ್ಳಿ, ಸುಬಣ್ಣ ಆಚಾರ, ಕೋಟ್ರಯ್ಯ ಸ್ವಾಮಿ, ಬಸವರಾಜ ಆಗೋಲಿ, ಹೇಮಣ್ಣ ದೇವರಮನಿ, ಯಮನೂರಪ್ಪ ಕಟ್ಟಿಗಿ, ಹನುಂತಪ್ಪ ಅಬ್ಬಿಗೇರಿ, ರವಿ ಹಲಗೇರಿ, ರವಿಕುಮಾರ, ಪಂಪಣ್ಣ ಪೂಜಾರ, ಮುತ್ತು ಪೂಜಾರ, ತಾ.ಪಂ ಕಾರ್ಯನಿರ್ವಾಹಕ ಕೃಷ್ಣಮೂರ್ತಿ, ಜಿ.ಪಂ ಅಭಿಯಂತರರಾದ ನಾಡಗೌಡ್ರು, ವಿಶ್ವನಾಥ, ಇನ್ನೂ ಅನೇಕ ತಾಲೂಕ ಅಧಿಕಾರಿಗಳು ಹಾಗೂ ಪಕ್ಷದ ವಕ್ತಾರ ಅಕ್ಬರ ಪಾಷ ಪಲ್ಟನ ಉಪಸ್ಥಿತರಿದರು.

Please follow and like us:
error

Related posts

Leave a Comment