ಕೊಪ್ಪಳ: ೧೭ ನಗರದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ ಪಕ್ಷದ ರಾಜ್ಯ ವ್ಯಾಪಿ ಅಭಿಯಾನವಾದ ಮನೆ-ಮನೆಗೆ ಕಾಂಗ್ರೇಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಕೊಪ್ಪಳ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸುರೇಶ ಬೂಮರಡ್ಡಿಯವರು ಜನರ ನಿರೀಕ್ಷೆಯಂತೆ ಸ್ವಚ್ಛ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಪದಗ್ರಹಣ ಮಾಡಿ ಅರ್ಧಗಂಟೆಯಲ್ಲಿ ರಾಜ್ಯಕ್ಕೆ ನೀಡಿದ ಅನ್ನಭಾಗ್ಯ ಯೋಜನೆ ಇವರ ಆಡಳಿತದ ದಿಟ್ಟ ನಿರ್ಧಾರವಾಗಿದೆ. ರಾಜ್ಯದ ಜನತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಹಂತ-ಹಂತವಾಗಿ ರಾಜ್ಯದ ಎಲ್ಲಾ ವರ್ಗಗಳ ಜನತೆಗೆ ನೀಡಿದ ಶ್ರೇಯಸ್ಸು ಕಾಂಗ್ರೇಸ ಸರ್ಕಾರದ್ದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ರೂ. ೬೦.೩೫೦ ಕೋಟಿ ರೂಗಳನ್ನು ಒದಗಿಸಿದ್ದು, ಅಲ್ಪ ಸಂಖ್ಯಾತ ಜನರ ಕಲ್ಯಾಣ, ಹಿಂದುಳಿದವರ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು, ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆ, ಕ್ಷೀರ ಭಾಗ್ಯ ಯೋಜನೆ, ಶೂ ಭಾಗ್ಯ ಯೋಜನೆ, ಕಡ್ಡಾಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕಾಗಿ ಅನೇಕ ಯೋಜನೆ ನೀಡಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಜನಪರ ಯೋಜನೆಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷವು ಜಯಭೇರಿಗೊಳಿಸುವುದು ಶತ ಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದ್ರಿ, ಕೊಪ್ಪಳ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಕಾಟನ ಪಾಷಾ, ನಗರಸಭಾ ಸದಸ್ಯರುಗಳಾದ ಅಮ್ಜದ ಪಟೇಲ್, ಮೌಲಾ ಹುಸೇನ ಜಮಾದಾರ, ರಾಮಣ್ಣ ಹದ್ದಿನ, ಮುತ್ತುರಾಜ ಕುಷ್ಟಗಿ, ಮುಖಂಡರುಗಳಾದ ಕುರುಗೋಡ ರವಿ, ಅಜ್ಜಪ್ಪ ಸ್ವಾಮಿ, ಮಂಜುನಾಥ ಗಾಳಿ, ವೀರಣ್ಣ ಸಂಡೂರು, ಕಲ್ಲಾಕ್ಷಪ್ಪ ಪೂಜಾರ, ಉಮಾ ಜನಾದ್ರಿ, ಶಿಲ್ಪಾ, ಚನ್ನಮ್ಮ ಹುನಗುಂದ, ಮಹೆಬೂಬ ಮಚ್ಚಿ, ನಿಂಗರಾಜ ಕೊಳ್ಳಿ, ವಾಹೀದ ಸೋಂಪುರ, ರಹೀಮ ಮಕಾಂದಾರ, ಜಾಫರ ತಟ್ಟಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.
ಜನರ ಆಶೋತ್ತರಗಳನ್ನು ಈಡೇರಿಸಿದ ಸಿದ್ದರಾಮಯ್ಯನವರ ಸರ್ಕಾರ- ಸುರೇಶ ಬೂಮರಡ್ಡಿ
Please follow and like us: