You are here
Home > Koppal News > ಜನಮನ ಗೆದ್ದ ಮಲ್ಲಗಂಭ ಪ್ರದರ್ಶನ;

ಜನಮನ ಗೆದ್ದ ಮಲ್ಲಗಂಭ ಪ್ರದರ್ಶನ;

ಕೊಪ್ಪಳ: ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಜಾತ್ರಾ ಆವರಣದಲ್ಲಿ ಇಂದು ದಿನಾಂಕ ೪-೧-೨೦೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಮಲ್ಲಗಂಭ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಬಾಗಲಕೋಟೆಯ ಜಿಲ್ಲೆಯ ಹುನುಗಂದು ತಾಲೂಕಿನ ಬಲಕುಂದಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು  ಆಕರ್ಷಕವಾದ ಮತ್ತು ಕುತೂಹಲಕಾರಿಗಳಾದ ಪ್ರದರ್ಶನಗಳಾದ ಸಲಾಮಿ, ದಸರಂಗ್, ಅಕರ್ಣಾಧನುರಾಸನ, ಕೂರ್ಮಾಸನ, ಹಾಲಾಸನ,ಟಿಬ್ಯಾಲನ್ಸ, ಟಿ.ಬ್ಯಾಲನ್ಸ, ಪದ್ಮಾಸನ, ಬಗಲಿಪರಾರ್, ಭಜರಂಗ, ನಟರಾಜಾಸನ, ಸಂಖ್ಯಾಸನ, ಚಕೋರಾಸನ, ನೌಕಾಸನ, ಹನುಮಾನ ಧ್ವಜ, ಮುಯೂರಾಸನ, ರಾಜಾಸನ,ವೀರಭದ್ರಾಸನ ಮೊದಲಾದ ಪ್ರದರ್ಶನಗಳನ್ನು ಬಾಲಕ ಹಾಗೂ ಬಾಲಕಿಯರು ನಡೆಸಿಕೊಟ್ಟರು. ಜಾತ್ರೆಗೆ ಆಗಮಿಸಿ ಸಹಸ್ರಾರು ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಂಡರು. ಉದ್ಘಾಟನೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ಪಟು ಮಲ್ಲಿಕಾರ್ಜುನ ಹಡಪದ ಇವರು ಮಲ್ಲಗಂಭಕ್ಕೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಿದರು. ಪ್ರಾಸ್ತಾವಿಕ ಮುಖ್ಯಸ್ಥರಾದ ಸಿ.ಕೆ ಚೆನ್ನಾಳ ಮಾತನಾಡಿದರು. ಉಸ್ತುವಾರಿಯನ್ನು ಗವಿಜಂತಗಲ್ಲ ವಹಿಸಿದ್ದರು. ಪ್ರದರ್ಶನದ ಎಲ್ಲಾ ಪಟುಗಳು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಅದ್ಬುತವಾದ ಸಾಹಸಗಳನ್ನುಪ್ರದರ್ಶಿಶಿಸಿ ಜನರ ಮೈನವಿರೇಳಿಸಿದರು.

Top