fbpx

ಜನಪರ ಯೋಜನೆಗಳು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾದ್ಯ.: ಶಾಸಕ ಕೆ ರಾಘವೇಂದ್ರ ಹಿಟ್ನಾಳ

koppal_mla_hitnal
ಕೊಪ್ಪಳ : ೧೭ ಕ್ಷೇತ್ರದ ಹಲಗೇರಿ, ಕೋಳುರು, ಕಾಟ್ರಳ್ಳಿ, ಹೊರತಾಟ್ನಾಳ, ಗುನ್ನಳ್ಳಿ, ದದೇಗಲ್, ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ಸುವರ್ಣ ಗ್ರಾಮದ ಯೋಜನೆಯಡಿಯಲ್ಲಿ ರೂ ೨.೫೦ ಕೋಟಿಯ ಸಿ. ಸಿ ರಸ್ತೆಯ ಕಾಮಗಾರಿಯ ಭುಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ
ಅವರು ಅಭಿವೃದ್ದಿಯ ಪರಿಕಲ್ಪನೆ ಹಾಗು ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕಾಂಗ್ರೆಸ್ ಸರ್ಕಾರ ಮಾತ್ರ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಎಸಿ, ಎಸ್‌ಟಿ ಜನಾಂಗದ ಕಲ್ಯಾಣಕ್ಕಾಗಿ ೧೮ ಸಾವಿರ ಕೋಟಿ ಅನುದಾನ ನೀಡಿದ್ದಾರೆ ಗ್ರಾಮಿಣ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವೀದ್ಯಾಶ್ರೀ ಯೋಜನೆ ಜಾರಿಗೆ ತಂದಿದ್ದು ಅಪೌಷ್ಠಿಕತೆಯ ನಿವಾರಣೆಗಾಗಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ಬಾರಿ ಕ್ಷೀರ ಭಾಗ್ಯ ಯೋಜನೆ ನೀಡಿದ್ದು ರಾಜ್ಯದ ರೈತರ ಸ್ವಾವಲಂಬಿ ಬದುಕಿಗೆ ಅನೇಕ ಕೃಷಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ನಮ್ಮ ಕ್ಷೇತ್ರದಲ್ಲಿ ಒಂದು ಸಾವಿರ ಕೃಷಿ ಹೋಂಡಗಳ ನಿರ್ಮಾಣ ಹಾಗೂ ಸುಮಾರು ೨೫ ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದ್ದು ಸಿಂಗಾಟಾಲುರ,ಅಳವಂಡಿ-ಬೆಟಗೇರಿ ಹಾಗು ಬಹದ್ದೂರಬಂಡಿ ನವಲ್ಕಲ್ ಏತ ನೀರಾವರಿ ಕಾಮಗಾರಿ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷ ಎಸ್ ಬಿ ನಾಗರಳ್ಳಿ ನಗರ ಫ್ರಾದಿಕಾರ ಅಧ್ಯಕ್ಷ ಜುಲ್ಲು ಖಾದ್ರಿ ತಾ ಪಂ ಅಧ್ಯಕ್ಷ ಬಾಲಚಂದ್ರನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭುಮರೆಡ್ಡಿ ಗ್ರಾಪಂ ಅಧ್ಯಕ್ಷರುಗಳಾದ ದೇವಪ್ಪ ಒಜಿನಹಳ್ಳಿ ಶ್ರೀಮತಿ ಶಿವಮ್ಮ ಜಿ ಪೂಜಾರ ಮುಖಂಡರುಗಳಾದ ಪ್ರಸನ್ನ್ ಗಡಾದ ಗಾಳೆಪ್ಪ ಪೂಜಾರ ರಾಘವೇಂದ್ರ ನರಗುಂದ ಅಶೋಕ ಅಬ್ಬಿಗೇರಿ ಹನುಮಂತ ಹಳ್ಳಿಕೇರಿ ದೇವಪ್ಪ ವದಗನಾಳ ವೀರಬದ್ರಗೌಡ ಶರಣ್ಯಯ ಹೀರೆಮಠ ದೇವೆಂದ್ರಪ್ಪ ಕೋಳುರು ಅನ್ನದಾನ ಸ್ವಾಮಿ ಸಮಾಜ ಕಲ್ಯಾಣ ನೋಡಲ್ ಅಧೀಕಾರಿ ಬಿ ಕಲ್ಲೇಶ್ ತಾ ಪಂ ಕಾರ್ಯ ನಿರ್ವಾಹಣಧಿಕಾರಿ ಕೃಷ್ಣಮೂರ್ತಿ ಜಿ ಪಂ ಅಭಿಯಂತರರು ವಿಶ್ವನಾಥ ಕೆಆರ್‌ಡಿಯಲ್ ಅಧಿಕಾರಿಗಳು ವಕ್ತಾರ್ ಅಕ್ಬರಪಾಷ್ ಪಲ್ಟನ್ ಉಪಸ್ಥಿತರಿದ್ದರು

Please follow and like us:
error

Leave a Reply

error: Content is protected !!